Advertisement

ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ: ಸೋದೆ ವಾದಿರಾಜ ಮಠ ಸಮರ್ಥನೆ

10:28 PM Sep 13, 2021 | Team Udayavani |

ಬೆಂಗಳೂರು: ಉಡುಪಿಯ ಅಷ್ಟ ಮಠಗಳಲ್ಲಿ ಬಾಲ ಸನ್ಯಾಸಿಗಳನ್ನು  ಪೀಠಾಧಿಪತಿಗಳನ್ನಾಗಿ ಮಾಡುವ ಪರಂಪರೆ  ಇದೆ ಎಂದು ಸೋದೆ ವಾದಿರಾಜ ಮಠ ಹೈಕೋರ್ಟ್‌ನಲ್ಲಿ  ವಿವರಿಸಿದೆ.

Advertisement

ಶಿರೂರು ಮಠಕ್ಕೆ ಬಾಲ ಸನ್ಯಾಸಿ ಯನ್ನು ಪೀಠಾಧಿಪತಿಯನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಮಠದ ಭಕ್ತ ಸಮಿತಿಯ ಪಿ. ಲಾತವ್ಯ ಆಚಾರ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾ|  ಸತೀಶ ಚಂದ್ರ ಶರ್ಮ  ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಸೋದೆ  ಮಠದ ಪರ ವಕೀಲರು ವಾದ ಮಂಡಿಸಿ,  ಅಷ್ಟಮಠಗಳಲ್ಲಿ ಬಾಲ ಸನ್ಯಾಸಿಗಳನ್ನು  ಪೀಠಾಧಿಪತಿ ಗಳನ್ನಾಗಿ ಮಾಡುವ ಪರಂಪರೆ ಇದೆ.  ಬಾಲಸನ್ಯಾಸಿಗೆ ದೀಕ್ಷೆ ಕೊಡಿಸಿ ಅವರಿಗೆ ಧರ್ಮಶಾಸ್ತ್ರ, ವೇದ, ಉಪನಿಷತ್‌ ಬೋಧಿಸಿ ಅವರನ್ನು ಪೀಠಾಧಿಪತಿಗಳನ್ನಾಗಿ ಮಾಡಲಾ ಗುವುದು. ಇದನ್ನು ಬಲವಂತವಾಗಿ ಹೇರುವುದಿಲ್ಲ, ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದರು.

ನ್ಯಾಯಪೀಠ ಅರ್ಜಿ ಕುರಿತಂತೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ಸೂಚನೆ ನೀಡಿ ಅಂತಿಮ ವಿಚಾರಣೆಯನ್ನು ಸೆ. 23ಕ್ಕೆ ನಿಗದಿಪಡಿಸಿತು.

ಅಮಿಕಸ್‌ ಕ್ಯೂರಿ ನೇಮಕ:

Advertisement

ಇದೇ ವೇಳೆ ಅಪ್ರಾಪ್ತ ಬಾಲಕನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು  ಹಿರಿಯ ನ್ಯಾಯವಾದಿ ಎಸ್‌.ಎಸ್‌. ನಾಗಾನಂದ ಅವರನ್ನು  ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ಹೈಕೋರ್ಟ್‌ ನೇಮಕ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next