Advertisement

ಉಡುಪಿ ಸಂಸ್ಕೃತ ಕಾಲೇಜು ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಆಕರ್ಷಣೆ

08:40 PM May 01, 2019 | Sriram |

ಉಡುಪಿ: ಉಡುಪಿಯ ಶ್ರೀಕೃಷ್ಣಮಠ ತಣ್ತೀಶಾಸ್ತ್ರದ ಕೇಂದ್ರವಾಗಿ, ಪಕ್ಕದ ಮಣಿಪಾಲ ಆಧುನಿಕ ಉನ್ನತ ಶಿಕ್ಷಣ ಕೇಂದ್ರವಾಗಿ ಕಾಣುತ್ತಿದ್ದರೆ ಉಡುಪಿಯ ಸಂಸ್ಕೃತ ಕಾಲೇಜು ಪರಂಪರಾಗತ (ಆ್ಯಂಟಿಕ್‌) ವಿದ್ಯಾಕೇಂದ್ರವಾಗಿದೆ.

Advertisement

ಉಡುಪಿಯ ಹೃದಯಭಾಗದಲ್ಲಿ ರುವ ಸಂಸ್ಕೃತ ಕಾಲೇಜು ಶತಮಾನ ಕಳೆದ, ದೇಶ ಮಟ್ಟದಲ್ಲಿ ಪ್ರಮುಖ ಸ್ಥಾನ ಪಡೆದ ಸಂಸ್ಕೃತ ಕಾಲೇಜುಗಳಲ್ಲಿ ಒಂದೆನಿಸಿರುವ ಕಾರಣ ಈಗ ಹೊರರಾಜ್ಯದ ವಿದ್ಯಾರ್ಥಿಗಳೂ ಇತ್ತ ಬರುತ್ತಿದ್ದಾರೆ.

1904ರಲ್ಲಿ ಅಷ್ಟ ಮಠಾಧೀಶರಿಂದ ಸ್ಥಾಪನೆಗೊಂಡ ಸಂಸ್ಕೃತ ಕಾಲೇಜಿಗೆ ಉತ್ತರ ಕನ್ನಡ ಜಿಲ್ಲೆ, ಸುಳ್ಯ, ಪುತ್ತೂರು, ಕಾಸರಗೋಡು ಮೊದಲಾದ ದೂರದ ಪ್ರದೇಶಗಳಿಂದಲೂ ಹಲವಾರು ವಿದ್ಯಾರ್ಥಿಗಳು ಅಧ್ಯಯನಕ್ಕೋಸ್ಕರ ಆಗಮಿಸುತ್ತಿದ್ದರು. ಈಗಲೂ ಇದು ಮುಂದುವರಿಯುತ್ತಿರುವ ಜತೆಗೆ ಎರಡು ವರ್ಷಗಳಿಂದ ಕೇರಳ, ಮಹಾರಾಷ್ಟ್ರ, ಹಿಮಾಚಲಪ್ರದೇಶದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಸಂಸ್ಕೃತ ಕಲಿಕೆಗೆ ವಿದ್ಯಾರ್ಥಿನಿಯರೂ ಆಸಕ್ತಿ ತೋರುತ್ತಿರುವುದು ಇನ್ನೊಂದು ವಿಶೇಷ.

ಕಳೆದೆರಡು ವರ್ಷಗಳಿಂದ ಜಿತಿನ್‌ ಶರ್ಮ, ದಿವಾಕರ ಶರ್ಮ ಸಹಿತ ನಾಲ್ವರು ಹಿಮಾಚಲಪ್ರದೇಶದಿಂದ, ಇಬ್ಬರು ಕೇರಳದಿಂದ, ಒಬ್ಬ ಮಹಾರಾಷ್ಟ್ರದಿಂದ ಆಗಮಿಸಿ ಕಲಿಯುತ್ತಿದ್ದಾರೆ. ಈ ಗರಿಗೆ ಈ ಬಾರಿ ಇನ್ನೊಂದು ರಾಜ್ಯ ಸೇರ್ಪಡೆಯಾಗಿದೆ. ಒಡಿಶಾದ ಸಂತೋಷ ಮಿಶ್ರಾ ಕೂಡ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಇದಕ್ಕೆ ಕಾರಣ ಉಡುಪಿ ಸಂಸ್ಕೃತ ಕಾಲೇಜು ಹೊಂದಿರುವ ಜ್ಯೋತಿಷ ವಿಭಾಗ. ರಾಜಸ್ಥಾನದ ಜೈಪುರ, ಒಡಿಶಾದ ಪುರಿ, ತಿರುಪತಿ ವಿ.ವಿ. ಜೋತಿಷ ವಿಭಾಗಕ್ಕೆ ತತ್ಸಮಾನವಾದ ಪ್ರತಿಷ್ಠೆಯನ್ನು ಉಡುಪಿ ಕಾಲೇಜು ದೇಶ ಮಟ್ಟದಲ್ಲಿ ಹೊಂದಿದೆ. ಕೇರಳ ರಾಜ್ಯ ಫ‌ಲಜ್ಯೋತಿಷಕ್ಕೆ ಹೆಸರಾದರೂ ಉಡುಪಿ ಕಾಲೇಜಿನಲ್ಲಿ ವೈಜ್ಞಾನಿಕ- ವೈಚಾರಿಕವಾದ ಗಣಿತ ಭಾಗವನ್ನು ಕಲಿಸುತ್ತಿರುವುದು ಹೊರರಾಜ್ಯಗಳ ವಿದ್ಯಾರ್ಥಿಗಳ ಆಕರ್ಷಣೆಗೆ ಕಾರಣವಾಗಿದೆ. ಕೆಲವು ವರ್ಷಗಳಿಂದ ಸಂಸ್ಕೃತ ವಾš¾ಯದಲ್ಲಿರುವ ಅಮೂಲ್ಯ ವಿಷಯಗಳ ಪ್ರಕಾಶನಕ್ಕೋಸ್ಕರ ಎಸ್‌ಎಮ್‌ಎಸ್‌ಪಿ ಸಂಸ್ಕೃತ ಸಂಶೋಧನ ಕೇಂದ್ರವೂ ನಡೆಯುತ್ತಿದೆ.

Advertisement

ಗ್ರಂಥಾಲಯದಲ್ಲಿ ನೂರಾರು ತಾಡಪತ್ರಗಳಿದ್ದು ಅವುಗಳ ಅಧ್ಯಯನ ಮತ್ತು ಮುದ್ರಣ ಕಾರ್ಯ ಮಾಡುವ ಇರಾದೆ ಇದೆ. ಎನ್‌ಎಸ್‌ಎಸ್‌ ಘಟಕ ಸೇರಿದಂತೆ ವಿವಿಧ ರಾಷ್ಟ್ರ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಗಳು ಬಂದಿವೆ. 1951ರಲ್ಲಿ ನಿರ್ಮಾಣಗೊಂಡ ಕಟ್ಟಡವನ್ನು ಈಗ ಸುಮಾರು 2.5 ಕೋ.ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ.

115 ವರ್ಷಗಳ ಇತಿಹಾಸದ ಕಾಲೇಜು ಪ್ರಸ್ತುತ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆ ಹೊಂದಿದೆ. ಕಾಲೇಜಿನಲ್ಲಿ ವೇದಾಂತ, ನವೀನನ್ಯಾಯ, ಜೋತಿಷ ಮತ್ತು ಅಲಂಕಾರ ಈ ನಾಲ್ಕು ಶಾಸ್ತ್ರಗಳನ್ನು ಕಲಿಸಲಾಗುತ್ತಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಉಚಿತವಾಗಿ ವಿದ್ಯಾರ್ಥಿನಿಲಯದ ವ್ಯವಸ್ಥೆಯಿದೆ, ಶ್ರೀಕೃಷ್ಣಮಠದಿಂದ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಜ್ಯೋತಿಷ, ಆಗಮ ಕುರಿತ ಪ್ರದರ್ಶನಿ ಜತೆಗೆ ಇತರ ಶಾಸ್ತ್ರಗಳಿಗೂ ಕೂಡ ವ್ಯಾಪಕವಾಗಿ ಪ್ರದರ್ಶನಿಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next