Advertisement
ನಾರಾಯಣ ಕೆ. ರಿಕ್ಷಾ ಚಲಾಯಸಿಕೊಂಡು ಕೆಮ್ಮಣ್ಣವಿನಿಂದ ಉಡುಪಿ ಸರ್ವಿಸ್ ನಿಲ್ದಾಣಕ್ಕೆ ಹೊರಟ್ಟಿದ್ದು, ರಾ. ಹೆ. 66 ರ ಸಂತೆಕಟ್ಟೆ ಆಶೀರ್ವಾದ ರೋಬೋಸಾಪ್ಟ್ ಕಚೇರಿ ಎದುರು ಚಾಲಕ ಭೋಜಪ್ಪ ಅವರು ಚಲಾಯಿಸುತ್ತಿದ್ದ ಲಾರಿ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಪರಿಣಾಮ ರಿಕ್ಷಾ ಮಗುಚಿಬಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಾಸ್ಕರ ಕರ್ಕೇರ ಬಡಿದು ಹಣೆ, ಬಲತುಟಿ, ಬಲಕಾಲು ಹಾಗೂ ರಿಕ್ಷಾ ಚಾಲಕ ನಾರಾಯಣ ಕುತ್ತಿಗೆ ಹಿಂಬದಿ, ಬೆನ್ನಿಗೆ ಗಾಯವಾಗಿದೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.