ರೈಲು ಚಲಿಸಲು ಪ್ರಾರಂಭಿಸುತ್ತಿದ್ದಂತೆ ಮಹಿಳೆ ತನ್ನ ಸಮತೋಲನವನ್ನು ಕಳೆದುಕೊಂಡು ರೈಲು ಮತ್ತು ಫ್ಲ್ಯಾಟ್ಫಾರಂನ ಮಧ್ಯೆ ಬಿದ್ದು ಸಿಲುಕಿಕೊಂಡರು. ಇದನ್ನು ಗಮನಿಸಿದ ಆರ್ಪಿಎಫ್ ಅಧಿಕಾರಿ ಅಪರ್ಣಾ ನೇತೃತ್ವದ ಆರ್ಪಿಎಫ್ ಪೊಲೀಸರ ತಂಡ ತತ್ಕ್ಷಣ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದರು. ಈ ಸಮಯೋಚಿತ ಮಧ್ಯಪ್ರವೇಶದಿಂದ ಸಂಭಾವ್ಯ ಅನಾಹುತ ತಡೆಯಲು ಸಾಧ್ಯವಾಯಿತು. ಸಿಬಂದಿಯ ಕ್ರಮವನ್ನು ಸಹಪ್ರಯಾಣಿಕರು ಶ್ಲಾ ಸಿದರು. ಅಪರ್ಣಾ ಅವರಿಗೆ ರೈಲ್ವೇ ಇಲಾಖೆ ವತಿಯಿಂದ 5 ಸಾವಿರ ರೂ. ಬಹುಮಾನ ಮೊತ್ತ ನೀಡಲಾಯಿತು.
Advertisement