Advertisement
ಇದರಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ -29, ಚೆಕ್ ಅಮಾನ್ಯ ಪ್ರಕರಣ-268, ಬ್ಯಾಂಕ್ / ಹಣ ವಸೂಲಾತಿ -21, ಎಂವಿಸಿ ಪ್ರಕರಣ-86, ಕಾರ್ಮಿಕ ನಷ್ಟ ಪರಿಹಾರ -1, ಎಂಎಂಆರ್‌ಡಿ ಆಕr… ಪ್ರಕರಣ-15, ವೈವಾಹಿಕ-1, ಸಿವಿಲ್ -174, ಇತರೇ ಕ್ರಿಮಿನಲ್ ಪ್ರಕರಣ-2,538 ಹಾಗೂ ವ್ಯಾಜ್ಯ ಪೂರ್ವ ದಾವೆ-31,187 ಪ್ರಕರಣಗಳು ಸೇರಿವೆ.
Related Articles
ಕಳೆದ 13 ವರ್ಷಗಳಿಂದ ಪರಸ್ಪರ ಬೇರ್ಪಟ್ಟ ದಂಪತಿ ಲೋಕ ಅದಾಲತ್‌ನಲ್ಲಿ ಒಂದಾದ ಘಟನೆ ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಿತು.
Advertisement
ಬ್ರಹ್ಮಾವರದ ಹರೀಶ್ (ಹೆಸರು ಬದಲಾಯಿಸಲಾಗಿದೆ.) ಮಂಗಳೂರಿನ ರೂಪೇಶ್ವರಿಯನ್ನು (ಹೆಸರು ಬದಲಾಯಿಸಲಾಗಿದೆ) ಮಂಗಳೂರಿನಲ್ಲಿ ಮದುವೆಯಾಗಿ ಅನಂತರ ಬ್ರಹ್ಮಾವರದಲ್ಲಿ ನೆಲೆಸಿದ್ದರು. ಹರೀಶ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು 2 ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದರು. ದಂಪತಿಗಳಿಗೆ 18 ವರ್ಷದ ಮಗಳು ಇದ್ದು ಪ್ರಸ್ತುತ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಗಂಡ ತನ್ನನ್ನು ಮತ್ತು ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮತ್ತು ಮಗಳ ಮೇಲೆ ಪ್ರೀತಿ ತೋರಿಸುತ್ತಿಲ್ಲವೆಂದು 13 ವರ್ಷಗಳಿಂದ ರೂಪೇಶ್ವರಿ ಮಗಳೊಂದಿಗೆ ಪ್ರತ್ಯೇಕವಾಗಿ ಉಡುಪಿಗೆ ಬಂದು ವಾಸ ಮಾಡಿಕೊಂಡಿದ್ದರು. ಈ ಬಗ್ಗೆ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಹಲವಾರು ಬಾರಿ ರಾಜೀ ಪ್ರಯತ್ನ ನಡೆದರೂ ಫಲಕಾರಿಯಾಗಲಿಲ್ಲ.
ಇತ್ತೀಚೆಗೆ ಹರೀಶ್ ವಿದೇಶದಿಂದ ಊರಿಗೆ ಬಂದಾಗ ರೂಪೇಶ್ವರಿ ಮತ್ತು ಮಗಳು ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ತನಗೂ ಮತ್ತು ತನ್ನ ಮಗಳಿಗೆ ಜೀವನಾಂಶ ನೀಡಬೇಕೆಂದು ನ್ಯಾಯವಾದಿ ಎಚ್. ಆನಂದ ಮಡಿವಾಳರ ಮುಖೇನ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ನೋಟಿಸ್ ಹರೀಶರಿಗೆ ಜಾರಿಯಾದ ಅನಂತರ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾದರು. ಅರ್ಜಿದಾರರ ನ್ಯಾಯವಾದಿ ಇದೊಂದು ಚಿಕ್ಕ ವಿಷಯಕ್ಕೆ ಸಂಸಾರ ಬೇರ್ಪಟ್ಟಿದೆ ಎನ್ನುವ ಅಂಶವನ್ನು ಮನಗೊಂಡು ಸಂಧಾನ ಕೇಂದ್ರಕ್ಕೆ ರಾಜೀ ಇತ್ಯರ್ಥಕ್ಕಾಗಿ ಕಳುಹಿಸಬೇಕೆಂದು ಅರ್ಜಿದಾರರ ಪರ ನ್ಯಾಯಾಲಯದಲ್ಲಿ ಕೋರಿಕೊಂಡರು. ಕೌಟುಂಬಿಕ ನ್ಯಾಯಾಲಯ ಪ್ರಕರಣವನ್ನು ರಾಜೀ ಸಂಧಾನ ಕೇಂದ್ರಕ್ಕೆ ಕಳುಹಿಸಿತ್ತು.
ನ್ಯಾಯವಾದಿ ರೊನಾಲ್ಡ್ ಪ್ರವೀಣ್ ಕುಮಾರ್ ಪ್ರಕರಣಕ್ಕೆ ಸಂಧಾನಕಾರರಾಗಿ ನೇಮಕಗೊಂಡು ಉಭಯರನ್ನು ಅವರವರ ನ್ಯಾಯವಾದಿಗಳು ಮತ್ತು ಕುಟುಂಬದ ಹಿರಿಯರನ್ನು ಕರೆಸಿ 4 ಬಾರಿ ಚರ್ಚಿಸಿ ಬೇರ್ಪಟ್ಟ ಕುಟುಂಬವನ್ನು ಒಂದಾಗಿಸಲು ಪ್ರಯತ್ನಿಸಿದರು. ನ್ಯಾಯಾಧೀಶರು ದಂಪತಿಯನ್ನು ಕರೆಸಿ ಈ ಪ್ರಾಯದಲ್ಲಿ ಬೇರೆ ಬೇರೆ ಇರುವುದು ಸಮಂಜಸವಲ್ಲ ಮತ್ತು ಮಗಳ ಭವಿಷ್ಯದ ಬಗ್ಗೆ ಉಭಯರಿಗೂ ತಿಳಿಹೇಳಿದರು. ನ್ಯಾಯಾಧೀಶರು, ಮಧ್ಯಸ್ಥಿಕೆದಾರರ, ನ್ಯಾಯವಾದಿಗಳ ಸಮಯೋಚಿತ ಹಿತನುಡಿಗಳು ಕ್ಷುಲ್ಲಕ ಕಾರಣಕ್ಕೆ ಬೇರ್ಪಟ್ಟ ದಂಪತಿಗೆ ಮನದಟ್ಟಾಯಿತು. ಅಂತಿಮವಾಗಿ ದಂಪತಿಗಳ ಮನ ಪರಿ ವರ್ತನೆಗೊಂಡು ತನ್ನ ಮಗಳೊಂದಿಗೆ ಸುಂದರ ಸಾಂಸಾರಿಕ ಜೀವನ ನಡೆಸಲು ಒಪ್ಪಿದರು.
ದ.ಕ.: 22,262 ಪ್ರಕರಣ ಇತ್ಯರ್ಥಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 22,262 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಒಟ್ಟು 31,791 ರಾಜಿಯಾಗಬಲ್ಲ ಪ್ರಕರಣಗಳನ್ನು ತೆಗೆದುಕೊಂಡು ಮಾತುಕತೆ ನಡೆಸಲಾಗಿದ್ದು ಆ ಪೈಕಿ 22,262 ಪ್ರಕರಣಗಳಲ್ಲಿ ಒಟ್ಟು 17,39,46,414 ರೂ. ವಿಲೇ ಮಾಡಲಾಯಿತು. ಇದರಲ್ಲಿ ಚೆಕ್ ಅಮಾನ್ಯ, ಸಿವಿಲ್, ಬ್ಯಾಂಕ್ ಹಣ ವಸೂಲಾತಿ ಮುಂತಾದ ಪ್ರಕರಣಗಳು ಸೇರಿದ್ದವು.