Advertisement

‘ಸ್ಯಾಟಲೈಟ್ ಮ್ಯಾನ್’ಉಡುಪಿ ರಾಮಚಂದ್ರರಾವ್ ಅವರ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ

08:52 AM Mar 10, 2021 | Team Udayavani |

ಬೆಂಗಳೂರು: ‘ಸ್ಯಾಟಲೈಟ್ ಮ್ಯಾನ್’ ಎಂಬ ಬಿರುದಾಂಕಿತ  ವಿಜ್ಞಾನಿ, ಇಸ್ರೋ ಮಾಜಿ ಮುಖ್ಯಸ್ಥರಾದ ಉಡುಪಿ ರಾಮಚಂದ್ರರಾವ್ ಅವರ 89ನೇ ಜನ್ಮದಿನವನ್ನು ಗೂಗಲ್ ತನ್ನ ಡೂಡಲ್ ಮೂಲಕ ಬುಧವಾರ ವಿಶಿಷ್ಟವಾಗಿ ಆಚರಿಸಿದೆ.

Advertisement

ರಾಮಚಂದ್ರರಾವ್  ಉಡುಪಿ ಸಮೀಪದ ‘ಮಾರ್ಪಳ್ಳಿ’ಯಲ್ಲಿ ಮಾರ್ಚ್ 10, 1932ರಲ್ಲಿ ಜನಿಸಿದರು. ಇವರ ತಾಯಿ ಕೃಷ್ಣವೇಣೀಯಮ್ಮ, ತಂದೆ, ಲಕ್ಷ್ಮೀನಾರಾಯಣರಾವ್. ಇವರದು ಕೃಷಿಕ ಕುಟುಂಬ. ಡಾ ಯು.ಆರ್.ರಾವ್, ಎಂದೇ ಚಿರಪರಿಚಿತರಾಗಿರುವ ಉಡುಪಿ ರಾಮಚಂದ್ರರಾವ್, ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ (ಇಸ್ರೋ)ಯ ಮಾಜಿ ಮುಖ್ಯಸ್ಥರಾಗಿ ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ರಾಮಚಂದ್ರ ರಾವ್, ಅಂತರರಾಷ್ಟ್ರೀಯ ವೈಮಾನಿಕ ಫೆಡರೇಷನ್‌ ಸಂಸ್ಥೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದವರಲ್ಲಿ ಪ್ರಮುಖರು.

ರಾಮಚಂದ್ರರಾಯರು, ಉಡುಪಿ, ಅನಂತಪುರ, ಮದ್ರಾಸ್, ಬನಾರಸ್ ಮೊದಲಾದ ಸ್ಥಳಗಳಲ್ಲಿ ಅಧ್ಯಯನ ಮಾಡಿದರು. ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಮಹ ಎಂದೇ ಖ್ಯಾತರಾಗಿದ್ದ ವಿಕ್ರಮ್ ಸಾರಾಭಾಯಿಯವರ ಮಾರ್ಗದರ್ಶನದಲ್ಲಿ ವಿಶ್ವಕಿರಣಗಳ ಬಗೆಗೆ ಅಧ್ಯಯನ ಮಾಡಿ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಬಳಿಕ ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿ. ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ದುಡಿದು, 1966 ರಲ್ಲಿ ಭಾರತಕ್ಕೆ ಮರಳಿದರು.

ಇದನ್ನೂ ಓದಿ:  ಅಯೋಧ್ಯೆ ಸುಸಜ್ಜಿತ ವಿಮಾನ ನಿಲ್ದಾಣ ಶೀಘ್ರ ಸಾರ್ವಜನಿಕರಿಗೆ ಸಂಚಾರ ಮುಕ್ತ

Advertisement

ಮೊದಲಿಗೆ ‘ಅಹಮದಾಬಾದಿನ ಫಿಜಿಕಲ್ ರಿಸರ್ಚ್ ಲೆಬೊರೆಟರಿ’ಯಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಯು.ಆರ್.ರಾವ್ ಆ ಬಳಿಕ ಇಸ್ರೊದಲ್ಲಿ ಸೇವೆಗೈದರು. ಬಾಹ್ಯಾಕಾಶ ಕಕ್ಷೆಗೆ ಅನೇಕ ಉಪಗ್ರಹಗಳನ್ನುಸೇರಿಸಿದ ಕೀರ್ತಿ ಡಾ.ಯು.ಆರ್.ರಾವ್ ಅವರದು.

ಇವರ ಸಾಧನೆಯನ್ನು ಪರಿಗಣಿಸಿ ಭಾರತದ ಎರಡನೇ ಅತಿ ಶ್ರೇಷ್ಠ ಪ್ರಶಸ್ತಿ ಪದ್ಮ ವಿಭೂಷಣ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ನಾಸಾ ಪುರಸ್ಕಾರ ಮೊದಲಾದ ಗೌರವಗಳು ಲಭಿಸಿವೆ. ಇದರ ಜೊತೆಗೆ  ‘ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್’ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರು 2017ರ ಜುಲೈ 24 ರಂದು ಬೆಂಗಳೂರಿನಲ್ಲಿ ನಿಧನರಾದರು.

ಇದನ್ನೂ ಓದಿ: ಎಲ್‌ಪಿಜಿ ದರ ದುಪ್ಪಟ್ಟು: ಧರ್ಮೇಂದ್ರ ಪ್ರಧಾನ್‌

Advertisement

Udayavani is now on Telegram. Click here to join our channel and stay updated with the latest news.

Next