ಉಡುಪಿ: ನಗರದ ಸುತ್ತಮುತ್ತ ಮಂಗಳವಾರ (ಮೇ.30) ಬೆಳಗ್ಗೆಯಿಂದಲೇ ಸಾಧಾರಣ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ.
ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಿದ್ದು, ಬೆಳಗ್ಗೆ ಉಡುಪಿಯಿಂದ ವಿವಿಧ ಕಡೆಗೆ ಉದ್ಯೋಗ ಹಾಗೂ ಇನ್ನಿತರ ಉದ್ದೇಶಕ್ಕೆ ಹೊರಟವರಿಗೆ ಕೊಂಚ ಸಮಸ್ಯೆಯಾಗಿತ್ತು. ಅಲ್ಲದೆ ಬೇರೆ ಊರುಗಳಿಂದ ಉಡುಪಿಗೆ ಬಂದಿಳಿದವರಿಗೂ ಮಳೆಯು ಸ್ವಾಗತ ಕೋರಿತ್ತು.
ಉಡುಪಿ, ಇಂದ್ರಾಳಿ, ಮಣಿಪಾಲ, ಅಂಬಲಪಾಡಿ, ಕರಾವಳಿ ಬೈಪಾಸ್ ಸಹಿತ ನಗರದ ಹಲವೆಡೆ ಮಳೆಯಾಗಿದೆ.
Related Articles
ಮೊದಲ ಮಳೆಗೆ ಮಣಿಪಾಲದ (ಶಿವಳ್ಳಿ) ಕೈಗಾರಿಕಾ ಪ್ರದೇಶ ಕೆಸರುಮಯವಾಗಿದೆ.
ನಗರೋತ್ಥಾನ ನಿಧಿಯಡಿ ಕೈಗಾರಿಕೆ ಪ್ರದೇಶದ ಅಭಿವೃದ್ಧಿ ಕಾರ್ಯ ಚುನಾವಣೆ ಮೊದಲು ಆರಂಭವಾಗಿತ್ತು. ಗುತ್ತಿಗೆ ಪಡೆದವರು ಚುನಾವಣೆ ಸಮಯದಲ್ಲಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಎಲ್ಲೆಡೆ ಅರ್ಧಂಬರ್ಧ ಕಾಮಗಾರಿಯಾಗಿದೆ.
ಇದರಿಂದ ಮೊದಲ ಮಳೆಗೆ ಕೈಗಾರಿಕೆ ಪ್ರದೇಶದ ಮುಖ್ಯ ರಸ್ತೆ ಚರಂಡಿಯಂತಾಗಿ ಬಿಟ್ಟಿದೆ.
ಈ ಹಿನ್ನೆಲೆಯಲ್ಲಿ ಕೈಗಾರಿಕೆ ಪ್ರದೇಶದ ಕೈಗಾರಿಕೋದ್ಯಮಿಗಳು, ಸಣ್ಣ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.