Advertisement

Udupi: ನಾಗಮಂಗಲ ಘಟನೆ ಖಂಡಿಸಿ ವಿವಿಧೆಡೆ ಪ್ರತಿಭಟನೆ

01:27 AM Sep 13, 2024 | Team Udayavani |

ಉಡುಪಿ: ಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ದಾಳಿ ಖಂಡಿಸಿ ಗುರುವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗ ಹಿಂದೂ ಹಿತರಕ್ಷಣ ವೇದಿಕೆ ಹಾಗೂ ಜಿಲ್ಲಾ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ವಿಹಿಂಪ ಮುಖಂಡ ಸುನೀಲ್‌ ಕೆ.ಆರ್‌. ಮಾತನಾಡಿ, ಸರಕಾರ ಈ ಕೂಡಲೇ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಕೃತ್ಯ ಎಸಗಿದವರು ಭಯೋತ್ಪಾದಕರು. ಜೆಹಾದಿಗಳ ಪರ ಠಾಣೆಗೆ ಬಂದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಹಿಂದೂ ಮುಖಂಡ ಶ್ರೀಕಾಂತ್‌ ಶೆಟ್ಟಿ ಕಾರ್ಕಳ ಮಾತನಾಡಿ, ಜಗತ್ತಿನ ಬೇರೆ ಎಲ್ಲ ದೇಶಗಳಲ್ಲಿ ಬಹುಸಂಖ್ಯಾಕ ಸಮಾಜ ಅಲ್ಪಸಂಖ್ಯಾಕ ಸಮಾಜದ ಮೇಲೆ ದಬ್ಟಾಳಿಕೆ ನಡೆಸುತ್ತದೆ. ಭಾರತದಲ್ಲಿ ಬಹುಸಂಖ್ಯಾಕರ ಮೇಲೆ ಅಲ್ಪಸಂಖ್ಯಾಕರ ದಬ್ಟಾಳಿಕೆ ಹೆಚ್ಚಾಗುತ್ತಿದೆ ಎಂದರು.
ಪ್ರಮುಖರಾದ ದಿನೇಶ್‌ ಮೆಂಡನ್‌, ಮಹೇಶ್‌ ಬೈಲೂರು, ವಿಜಯ್‌ ಕೊಡವೂರು, ಸುಜಿತ್‌ ಶೆಟ್ಟಿ, ಗೀತಾ ಶೇಟ್‌, ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next