Advertisement

ಉಡುಪಿ: ಪೊಲೀಸ್ ನಿರೀಕ್ಷಕರ ಸೈಕಲ್ ಕಳವು! ದೂರು ದಾಖಲು

01:05 PM Feb 17, 2023 | Team Udayavani |

ಉಡುಪಿ: ಪೊಲೀಸ್ ಅಧಿಕಾರಿಗಳ ವಸತಿ ಗೃಹದಲ್ಲಿಯೇ ಸೈಕಲ್ ಕಳವಾದ ಘಟನೆ ನಡೆದಿದೆ.

Advertisement

ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ನಿರೀಕ್ಷಕರಾದ ರಫೀಕ್ ಎಂ.ಅವರು  ಉಡುಪಿ ನಗರ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಪೊಲೀಸ್ ಅಧಿಕಾರಿಗಳ ವಸತಿ ಗೃಹದಲ್ಲಿ ತನ್ನ ಸಂಸಾರದೊಂದಿಗೆ ವಾಸವಾಗಿದ್ದರು. ಇವರ ಕಾರು, ಸ್ಕೂಟಿ ಹಾಗೂ ಎರಡು ಸೈಕಲ್‌ಗಳನ್ನು ವಸತಿಗೃಹದ ಪಕ್ಕದಲ್ಲಿನ ಶೆಡ್‌ನಲ್ಲಿ ನಿಲ್ಲಿಸಿದ್ದರು.

ಇದನ್ನೂ ಓದಿ:ಕುಟುಕು ಕಾರ್ಯಾಚರಣೆ ಪ್ರಭಾವ: ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ

ಫೆ.13ರಿಂದ ಫೆ.14ರ ನಡುವೆ ಯಾರೋ ಕಳ್ಳರು ಸೈಕಲ್‌ ಗಳಿಗೆ ಅಳವಡಿಸಿದ ಬೀಗವನ್ನು ಮುರಿದು ಒಟ್ಟು 16,100 ರೂ.ಮೌಲ್ಯದ ಎರಡು ಸೈಕಲ್‌ಗಳನ್ನು ಕಳ್ಳತನ ಮಾಡಿದ್ದಾರೆ. ಎರಡು ದಿನ ಕಳೆದರೂ ಪತ್ತೆಯಾಗದ ಕಾರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next