Advertisement

ರಸ್ತೆ ವಿಸ್ತರಣೆಗೆ ಅಡ್ಡಿಯಾದ ಭೂಸ್ವಾಧೀನ ಗುಮ್ಮ!

10:54 PM Jan 21, 2020 | mahesh |

ಉಡುಪಿ: ಉಡುಪಿ-ಪರ್ಕಳ ನಡುವೆ ರಸ್ತೆ ವಿಸ್ತರಣೆ ಕಾಮಗಾರಿ ನಿರೀಕ್ಷಿತ ವೇಗ ಪಡೆಯದೆ ಕುಂಟುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಲ್ಲಾಗುತ್ತಿರುವ ವಿಳಂಬವೇ ಇದಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಭೂಸ್ವಾಧೀನ ಬಾಕಿ
ಉಡುಪಿ-ಪರ್ಕಳ ರಾ,ಹೆ. 169ಎ ಚತುಷ್ಪಥ ರಸ್ತೆಯಲ್ಲಿ ಸಂಚಾರ ಈಗ ದುಸ್ತರ. ಎರಡನೇ ಹಂತದ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದರೂ ವೇಗದಲ್ಲಿ ಅದು ಸಾಗುತ್ತಿಲ್ಲ. ಪರ್ಕಳ ಪೇಟೆ ಮತ್ತು ಇಳಿಜಾರು ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ತಿಯೆಗಳು ಇನ್ನು ಆಗಿಲ್ಲ. ಪರ್ಕಳದಲ್ಲಿ ಬಹುತೇಕ ಕಡೆ ಖಾಸಗಿ ಜಾಗದ ಮೂಲಕ ರಸ್ತೆ ಹಾದು ಹೋಗುವುದರಿಂದ ಈ ಪ್ರದೇಶದಲ್ಲಿ ಮನೆ, ಮತ್ತು ಕೃಷಿ ಭೂಮಿಯಿರುವುದು ಸಮಸ್ಯೆಯಾಗಿದೆ.

ಮುಂದಿನ ಮಳೆಗಾಲಕ್ಕೂ ಅನುಮಾನ?
ರಸ್ತೆ ವಿಸ್ತರಣೆಗೆ ಅವಕಾಶವಿರುವ ಕಡೆಗಳಲ್ಲಿ ಮಾತ್ರ ಕಾಮಗಾರಿ ನಡೆಯುತ್ತಿದೆ. ಪರ್ಕಳ ನೀರಿನ ತೊಟ್ಟಿ ಇರುವಲ್ಲಿ ತನಕ ದ್ವಿಪಥ ರಸ್ತೆ ಕೆಲಸ ಆಗಿದೆ. ಪರ್ಕಳ ಪೇಟೆ ದಾಟಿ ದೇವಿನಗರದವರೆಗೆ ಈಗ ಕಾಮಗಾರಿ ನಡೆಯುತ್ತಿದೆ. ಹಳೆ ರಸ್ತೆಗೆ ಮಣ್ಣು ತುಂಬಿ ಎತ್ತರಿಸಲು ಬಾಕಿ ಇದೆ. ನಿರೀಕ್ಷಿತ ಅವಧಿಯೊಳಗೆ ಕಾಮಗಾರಿ ಪೂರ್ಣವಾಗುವ ಸಾಧ್ಯತೆ ತೀರಾ ಕಡಿಮೆ. ಈಗಿನ ವೇಗ ಗಮನಿಸಿದರೆ ಮುಂದಿನ ಮಳೆಗಾಲಕ್ಕೂ ರಸ್ತೆ ಬಳಕೆಗೆ ಸಿಗುವುದು ಅನುಮಾನ. ಹೊಸದೂ ಇಲ್ಲ, ಹಳೇದೂ ಇಲ್ಲ ಚತುಷ್ಪಥ ಹೊಸ ರಸ್ತೆ
ಪೂರ್ಣವಾಗಿಲ್ಲ. ಇತ್ತ ಹಳೆ ರಸ್ತೆ ಸಂಪೂರ್ಣ ಕೆಟ್ಟು ಸಂಚಾರ ಯೋಗ್ಯವಾಗಿಲ್ಲ.

ತಾತ್ಕಾಲಿಕ ದುರಸ್ತಿಯನ್ನೂ ನಡೆಸಿಲ್ಲ. ಸವಾರರು ಸಂಚಾರದ ವೇಳೆ ಇಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್‌ ಗಾತ್ರದ ಹೊಂಡಗಳು ನಿರ್ಮಾಣ ಗೊಂಡಿವೆ. ಇದರಲ್ಲಿ ವಾಹನಗಳು ಎದ್ದು ಬಿದ್ದು ಸಾಗುತ್ತಿದ್ದು ಅಪಘಾತಗಳು ಸಂಭವಿಸಲು ಕಾರಣವಾಗುತ್ತಿದೆ. ಹಿಂದಿನ ವರ್ಷ ಇದೇ ರಸ್ತೆಯ ಆಸುಪಾಸಿನ ಸ್ಥಳಗಳಲ್ಲಿ ಸರಣಿ ಅಪಘಾತಗಳು ನಡೆದಿದ್ದವು. ಪ್ರಾಣ ಹಾನಿಯೂ ಸಂಭವಿಸಿತ್ತು. ಹಾಲುಗಲ್ಲದ ಹಸುಳೆಯೊಂದು ಅಪಘಾತದಲ್ಲಿ ಅಸುನೀಗಿತ್ತು.

ವಾಹನ ಚಾಲನೆ ಸವಾಲು
ಕಾಮಗಾರಿಗೆ ರಸ್ತೆಯ ಅಲ್ಲಲ್ಲಿ ಅಗೆಯಲಾಗಿದೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಒಂದೇ ಲೇನ್‌ನಲ್ಲಿ ವಾಹನಗಳು ಹೋಗಬೇಕಾಗಿದ್ದು ಇಕ್ಕಟ್ಟಾಗಿರುವುದರಿಂದ ಸಂಚಾರ ಕಷ್ಟವಾಗಿದೆ. ಉಡುಪಿಯಿಂದ

Advertisement

ಪರ್ಕಳ- ಮಣಿಪಾಲಕ್ಕೆ ಹೋಗಿ ಬರುವುದು ಈಗ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ರಸ್ತೆ ಕಾಮಗಾರಿ ಸ್ಥಳದಲ್ಲಿ ಅತ್ಯಾಧುನಿಕ ಯಂತ್ರಗಳು, ಹೆದ್ದಾರಿ ಬದಿ ಬೀಡು ಬಿಟ್ಟಿವೆ. ರಸ್ತೆ ನಿರ್ಮಾಣದ ಜಲ್ಲಿ ,
ಸಿಮೆಂಟ್‌ ಇತ್ಯಾದಿ ಸಾಮಗ್ರಿಗಳನ್ನು ರಸ್ತೆ ಬದಿ ರಾಶಿಹಾಕಿ ಸಂಗ್ರಹಿಸಿಡಲಾಗಿದೆ. ಆದರೆ ಭೂಸ್ವಾಧೀನ ಗುಮ್ಮದಿಂದ ಕಾಮಗಾರಿ ಶುರುವಾಗುವ ಲಕ್ಷಣವೇ ಕಾಣುತ್ತಿಲ್ಲ .

ಅಲರ್ಜಿ ಭೀತಿ
ಪರಿಸರ ಧೂಳಿನ ವಾತಾವರಣದಿಂದ ಆವೃತಗೊಂಡಿದೆ. ದ್ವಿಚಕ್ರ ವಾಹನ ಸವಾರರು, ಬಸ್ಸಿನ ಪ್ರಯಾಣಿಕರಿಗೆ ಹೆಚ್ಚು ಸಮಸ್ಯೆಯಾಗುತ್ತದೆ. ಸವಾರರು ಧೂಳು ಹೋಗದ ಹಾಗೆ ಬಟ್ಟೆ, ಸ್ಕಾರ್ಪ್‌ ಧರಿಸಿ ತೆರಳುತ್ತಿದ್ದಾರೆ. ಅತಿಯಾದ ಧೂಳು ಸೇವನೆ ಪರಿಣಾಮ ಉಷ್ಣ ಶೀತ, ಇತರೆ ಅಲರ್ಜಿ, ಚರ್ಮ ರೋಗ ತಗಲುವ ಭೀತಿ ಕಾಡಿದೆ.

ಸಮಸ್ಯೆ ಇರುವುದು ನಿಜ
ರಸ್ತೆ ವಿಸ್ತರಣೆಗೆ ಸಂಬಂಧಿಸಿ ಭೂಸ್ವಾಧೀನ ಬಾಕಿ ಇರುವುದು ನಿಜ. ಕೆಲ ಕಾನೂನು ತೊಡಕುಗಳಿಂದ ಸಮಸ್ಯೆಯಾಗಿದೆ. ನಿವಾರಿಸುವ ಪ್ರಯತ್ನ ನಡೆಯುತ್ತಿದೆ. ಶೀಘ್ರ ಕಾಮಗಾರಿಗೆ ವೇಗ ನೀಡಲಾಗುವುದು.
-ಮಂಜುನಾಥ್‌ ನಾಯಕ್‌, ರಾ.ಹೆ ಎಂಜಿನಿಯರ್‌

ಪೂರ್ಣವಾಗುವುದು ಅನುಮಾನ
ತ್ವರಿತಗತಿಯಲ್ಲಿ ಕಾಮಾಗಾರಿ ನಡೆಯುತ್ತಿಲ್ಲ. ನಿಗದಿತ ಅವಧಿಯೊಳಗೆ ಪೂರ್ಣವಾಗುವ ಸಾಧ್ಯತೆ ಕಡಿಮೆ. ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ಕೂಡ ನಡೆದಿಲ್ಲ. ಇದರಿಂದ ಬಳಕೆಗೆ ಸಿಗಲು ಇನ್ನೂ ಹಲವು ಸಮಯ ಬೇಕಾಗಬಹುದು.
-ಸುರೇಶ್‌ ನಾಯಕ್‌ ಕುಯಿಲಾಡಿ, ಅಧ್ಯರು, ಸಿಟಿ ಬಸ್‌ ಮಾಲಕರ ಸಂಘ

ನಿತ್ಯ ಯಾತನೆ
ತ್ವ ನಿತ್ಯ ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿರುತ್ತೇನೆ. ಧೂಳಿನಿಂದ ಆರೋಗ್ಯ ಸಮಸ್ಯೆ ಎದುರಿಸಿದ್ದೇನೆ. ಬೇಗ ಕಾಮಗಾರಿ ಮುಗಿದರೆ ಅನುಮೂಲ.
-ನಿರಂಜಿನಿ, ಪರ್ಕಳ, ಖಾಸಗಿ ಉದ್ಯೋಗಿ.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next