Advertisement

ಉಡುಪಿ : ಪ್ಯಾರಾಮೆಡಿಕಲ್ಸ್‌ ಸಮ್ಮೇಳನ

09:13 PM Apr 28, 2019 | Team Udayavani |

ಕಟಪಾಡಿ: ಉಡುಪಿ ಧರ್ಮ ಕ್ಷೇತ್ರದ ಆರೋಗ್ಯ ಆಯೋಗದ ವತಿಯಿಂದ ಉಡುಪಿ ಡಯಾಸಿಸ್‌ ಕ್ರೈಸ್ತ ಧರ್ಮದ ವೈದ್ಯರು, ದಾದಿಯರು, ಪ್ಯಾರಾಮೆಡಿಕಲ್ಸ್‌ ಮತ್ತು ಆರೋಗ್ಯ ಆಯೋಗದ ಸದಸ್ಯರಿಗೆ ಕಲ್ಯಾಣಪುರ ಮೌಂಟ್‌ ರೋಜರಿ ಚರ್ಚ್‌ ಸಭಾಭವನದಲ್ಲಿ ಸಮಾವೇಶ ಎ.28ರಂದು ನಡೆಯಿತು.

Advertisement

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಬಿಷಪ್‌ ವಂ| ಜೆರಾಲ್ಡ್‌ ಐಸಾಕ್‌ ಲೋಬೋ ಬಡರೋಗಿಗಳಿಗಾಗಿ ಸ್ಥಾಪಿಸಿದ ಆರೋಗ್ಯ ನಿಧಿಯನ್ನು ಉದ್ಘಾಟಿಸಿ ಮಾತನಾಡಿ, ಮನುಕುಲದ ಮಾನವೀಯ ಸೇವೆ ಮೂಲಕ ಕ್ರೈಸ್ತರು ಪ್ರಾಪಂಚಿಕವಾಗಿ ಗುರುತಿಸಿಕೊಳ್ಳುವಂತಾಗಿದೆ. ವೈದ್ಯರು, ದಾದಿಯರು ದೇವರಿಗೆ ಪ್ರಿಯವಾದ ನಿಸ್ವಾರ್ಥವಾದ ಸೇವೆ ಕರ್ತವ್ಯವನ್ನಾಗಿಸಿರಿ ಎಂದರು.

ಮಂಗಳೂರು ಫಾದರ್‌ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ಫಾ| ರಿಚರ್ಡ್‌ ಕುವೆಲ್ಲೋ ವೈದ್ಯರು, ದಾದಿಯರು, ಪ್ಯಾರಾಮೆಡಿಕ್ಸ್‌ ಪ್ರೊಫೆಶನಲ್‌ ಡೈರೆಕ್ಟರಿ “ಡೋನಮ್‌’ ಅನ್ನು ಬಿಡುಗಡೆಗೊಳಿಸಿ ಸಂದೇಶ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಫಾ| ಪ್ರವೀಣ್‌ ಲಸ್ರಾದೋ ಮತ್ತು ಡಾ|ಜುಡಿತ್‌ ಲೋಬೋ ಅವರು ಚಿಕಿತ್ಸೆಯಿಂದ ಆರೈಕೆ ವಿಷಯದ ಮೇಲೆ ವಿಚಾರ ಮಂಡಿಸಿದರು.

ವೇದಿಕೆಯಲ್ಲಿ ಫಾ| ಜೆಸನ್‌, ಲುವಿಸ್‌ ಡಿ’ಸೋಜಾ, ಬ್ಯಾಪ್ಟಿಸ್ಟ್‌ ಡಯಾಸ್‌, ಫಾ| ಚಾರ್ಲ್ಸ್‌ ಸಲ್ದಾನಾ ಮತ್ತಿತರರು ಉಪಸ್ಥಿತರಿದ್ದರು.

Advertisement

ಆರೋಗ್ಯ ಆಯೋಗದ ಉಡುಪಿ ಡಯಾಸಿಸ್‌ ನಿರ್ದೇಶಕ ಡಾ|ಎಡ್ವರ್ಡ್‌ ಲೋಬೋ ಸ್ವಾಗತಿಸಿದರು. ರೆ|ಫಾ| ಡೆನ್ನಿಸ್‌ ಡೇಸಾ ಪ್ರಸ್ತಾವನೆಗೈದರು. ಆರೋಗ್ಯ ಆಯೋಗದ ಕಾರ್ಯದರ್ಶಿ ಜೀವನ್‌ ಲೂವಿಸ್‌ ವಂದಿಸಿದರು. ಪ್ರತಿಭಾ ಬ್ರಾಗ್ಸ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next