ಉಡುಪಿ: ಶ್ರೀಕೃಷ್ಣ ಮಠದ ರಾಜಾಂ ಗಣದಲ್ಲಿ ಶುಕ್ರವಾರ ರಾತ್ರಿ ಮೊದಲ ಆನ್‌ಲೈನ್ ಯಕ್ಷಗಾನ ನಡೆಯಿತು.
ಕುಂದಾಪುರ.ಕಾಂ ಮತ್ತು ಯೂಟ್ಯೂಬ್‌ನಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಇದೇ ಸ್ಥಳದಲ್ಲಿ ತಾಳಮದ್ದಳೆ ನಡೆದಿತ್ತು.
ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಗಳ ಜನ್ಮನಕ್ಷತ್ರ ಪ್ರಯುಕ್ತ ಅವರು ಮತ್ತು ಈಶಪ್ರಿಯತೀರ್ಥ ಶ್ರೀಗಳ ಉಪಸ್ಥಿತಿಯಲ್ಲಿ ಆಯೋಜನೆಗೊಂಡ ಯಕ್ಷಗಾನದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಂಡವರು ಕಲಾವಿದರು ಮತ್ತು ಬೆರಳೆಣಿಕೆ ಪ್ರೇಕ್ಷಕರು ಮಾತ್ರ.
ಯೂಟ್ಯೂಬ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದವರು ಸಾವಿರಾರು ಮಂದಿ.
ಕೃಷ್ಣಾಪುರ ಮಠದ ವಿದ್ಯಾ ಸಾಗರತೀರ್ಥ ಶ್ರೀಗಳು, ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಗಳು, ವಿದ್ಯಾ ರಾಜೇಶ್ವರತೀರ್ಥ ಶ್ರೀಗಳು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಗಳು ಯಕ್ಷಗಾನವನ್ನು ವೀಕ್ಷಿಸಿದರು.