Advertisement

Udupi: ಬೆಳ್ಮಣ್‌ ನಿವಾಸಿಗೆ ಆನ್‌ಲೈನ್‌ ನಲ್ಲಿ ವಂಚನೆ… ಒಡಿಶಾದಲ್ಲಿ ಆರೋಪಿಯ ಬಂಧನ

03:00 PM Sep 04, 2024 | Team Udayavani |

ಉಡುಪಿ: ಆನ್‌ಲೈನ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್‌ ಠಾಣೆಯ ಪೊಲೀಸರು ಆರೋಪಿ ಒಡಿಶಾದ ವಿಶಾಲ್‌ ಕೋನಪಾಲ(30)ನನ್ನು ಬಂಧಿಸಿ, ಆತನಿಂದ 1,56,100ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಘಟನೆ ವಿವರ:
ವಿದೇಶದಲ್ಲಿ ಉದ್ಯೋಗಿಯಾಗಿರುವ ಉಡುಪಿ ಜಿಲ್ಲೆಯ ಬೆಳ್ಮಣ್‌ ನಿವಾಸಿ ಪ್ರಶಾಂತ್‌ ಶೆಟ್ಟಿ ಅವರು ಬೆಳ್ಮಣ್‌ನ ಯೂನಿಯನ್‌ ಬ್ಯಾಂಕ್‌ ಶಾಖೆಯಲ್ಲಿ ಎರಡು ಖಾತೆಗಳನ್ನು ಹೊಂದಿದ್ದರು. ಈ ಎರಡೂ ಖಾತೆಗಳಲ್ಲಿ ಪೇಟಿಎಂ ಆನ್‌ಲೈನ್‌ ಪೇಮೆಂಟ್‌ ಸಿಸ್ಟಂ ಹೊಂದಿದ್ದು, ಫೆ.10 ರಿಂದ 20ರ ನಡುವೆ ಯಾರೋ ಅಪರಿಚಿತರು ಇವರ ಗಮನಕ್ಕೆ ಬಾರದೆ ಒಟ್ಟು 1,56,100ರೂ.ಗಳನ್ನು ವರ್ಗಾಯಿಸಿಕೊಂಡು ನಷ್ಟ ಉಂಟು ಮಾಡಿದ್ದರು. ಈ ಬಗ್ಗೆ ಉಡುಪಿಯ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಒರಿಸ್ಸಾದಲ್ಲಿ ವಶಕ್ಕೆ
ಸೆನ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್‌ ಅವರ ನೇತೃತ್ವದಲ್ಲಿ ಎಎಸ್‌ಐ ಉಮೇಶ್‌ ಜೋಗಿ ಮತ್ತು ಸಿಬಂದಿ ನಿಲೇಶ್‌ ಅವರ ತಂಡ ಒರಿಸ್ಸಾ ರಾಜ್ಯದ ಬೈರಂಪುರಕ್ಕೆ ತೆರಳಿ ಅಲ್ಲಿ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Hubballi: ಜೀವ ಬೆದರಿಕೆ… ನಟೋರಿಯಸ್ ರೌಡಿ ಬಚ್ಚಾ ಖಾನ್ ಸೇರಿ 7 ಸಹಚರರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next