Advertisement
ಅವರು ಉಡುಪಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ ನಡೆದ ನೇಜಾರಿನ ನೂರ್ ಮಹಮ್ಮದ್ ಅವರ ಮನೆಗೆ ಮಂಗಳವಾರ ಭೇಟಿ ನೀಡಿ ಸಾಂತ್ವನ ನೀಡಿದರು.
ನೂರ್ ಮೊಹಮ್ಮದರ ಪುತ್ರ ಆಸಾದ್ ಮೊಹಮ್ಮದ್ ಈಗಾಗಲೇ ಇಂಡಿಗೋ ಏರ್‌ಪೋರ್ಟ್‌ನ ಉದ್ಯೋಗಿ
ಯಾಗಿದ್ದಾರೆ. ಬಿಬಿಎಂ ಪದವೀಧರನಾಗಿ ರುವ ಆತನನ್ನು ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಗೆ ನೇರ ನೇಮಕಾತಿ ಮಾಡಬೇಕು. ಆತನಿಗೆ ಬೇಕಾದ ತರಬೇತಿಯನ್ನು ನಾನೇ ಕೊಡುತ್ತೇನೆ ಎಂದ ಅವರು ರಾಜ್ಯದ ಮುಖ್ಯಮಂತ್ರಿ, ಗೃಹ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದರು.
Related Articles
ಆರಂಭದಲ್ಲಿ ಅಬ್ದುಲ್ ಅಜೀಮ್ ಅವರು ನೂರ್ ಮೊಹಮದ್ ಅವರ ಮನೆಯಲ್ಲಿ ನಾಲ್ವರ ಕೊಲೆ ನಡೆದಿರುವ ಸ್ಥಳಗಳನ್ನು ಪರಿಶೀಲನೆ ನಡೆಸಿ ಮೊಬೈಲ್‌ನಲ್ಲಿ ಮೃತದೇಹಗಳ ಫೋಟೋ ವೀಕ್ಷಿಸುತ್ತಿದ್ದರು, ಈ ವೇಳೆ ಕೊನೆ ಮಗ ಅಸಿಮ್ ಪೋಟೋವನ್ನು ಕಂಡ ಕೂಡಲೇ ನೂರ್ ಮೊಹಮದ್ ಕುಸಿದು ಬಿದ್ದರು. ಸ್ಥಳದಲ್ಲಿದ್ದವರು ಅವರನ್ನು ಮೇಲೆತ್ತಿ ಉಪಚರಿಸಿದರು.
Advertisement
ನಮ್ಮ ನಾಡ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್, ಕೇಂದ್ರ ಸಮಿತಿ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹೀರ್ ಆಹ್ಮದ್, ಕೋಶಾಧಿಕಾರಿ ನಕ್ವ ಯಾಯ್ಯ, ವಕ್ಫ್ ಚೇರ್‌ಮನ್ ಮುತಾಲಿಫ್, ಕಾಂಗ್ರೆಸ್ ಮುಖಂಡ ಎಂ.ಎ. ಗಫೂರ್, ನೂರ್ ಮಹಮ್ಮದ್, ಸಹೋದರ ಇಕ್ಬಾಲ್ ಹೈಕಾಡಿ, ಆಶ್ರಫ್ ನೇಜಾರು ಉಪಸ್ಥಿತರಿದ್ದರು.