Advertisement

Udupi Nejaru Case 28 ಸಾವಿರ ರೂ. ಹಣ ಕೊಟ್ಟು ಸ್ಕೂಟರ್‌ ಖರೀದಿಸಿದ್ದೆವು

12:23 AM Nov 27, 2023 | Team Udayavani |

ಮಲ್ಪೆ: ನೇಜಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯ್ನಾಝ್, ಆರೋಪಿಯ ಸ್ಕೂಟರ್‌ ಬಳಸುತ್ತಿದ್ದ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ.

Advertisement

ಈ ಕುರಿತು ಮಾತನಾಡಿದ ಆಕೆಯ ತಂದೆ ನೂರ್‌ ಮುಹಮ್ಮದ್‌, ಸ್ಕೂಟರ್‌ ಅನ್ನು ನಾವು ಅವರಿಗೆ 28 ಸಾವಿರ ರೂ. ಹಣ ಕೊಟ್ಟು ಖರೀದಿಸಿದ್ದೆವು ಎಂದು ಹೇಳಿದ್ದಾರೆ.

ಆರೋಪಿಯು ಅಯ್ನಾಝ್ಳ ಸಿನೀಯರ್‌ ಆಗಿದ್ದು, ಬಾಡಿಗೆ ಅಪಾರ್ಟ್‌ಮೆಂಟ್‌ ಹುಡುಕಲು ಸಹಾಯ ಮಾಡಿದ್ದ. ನಾನು ಕಳುಹಿಸಿದ ಹಣದಲ್ಲಿ ಅಡ್ವಾನ್ಸ್‌ ಕೊಟ್ಟು ಅಪಾರ್ಟ್‌ ಮೆಂಟ್‌ ಬಾಡಿಗೆಗೆ ಪಡೆಯಲಾಗಿತ್ತು. ಆತನ ಹಳೆಯ ಸ್ಕೂಟರನ್ನು ಹಣ ಕೊಟ್ಟು ಖರೀದಿಸಿದ್ದೇವೆ. ನಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳಲು ತಡವಾಗಿತ್ತು. ಹಾಗಾಗಿ ಆತನ ಹೆಸರಿನಲ್ಲೇ ಸ್ಕೂಟರ್‌ ಇತ್ತು. ಅದನ್ನು ನನ್ನ ಪುತ್ರಿಯರು ಸ್ಥಳೀಯವಾಗಿ ಸಂಚರಿಸಲು ಬಳಸುತ್ತಿದ್ದರು ಎಂದು ನೂರ್‌ ಹೇಳಿದ್ದಾರೆ.

ಕೊನೆಯ ನಮಾಝ್ ಮಾಡಿದ ಕುರುಹು ಇತ್ತು
ಹತ್ಯೆಗೊಳಗಾದ ಅಯ್ನಾಝ್ ಮತ್ತು ಅಫಾ°ನ್‌ ವಾಸವಿದ್ದ ಬಾಡಿಗೆ ಮನೆಗೆ ಭೇಟಿ ನೀಡಿದ ನೂರ್‌ ಮುಹಮ್ಮದ್‌, ಅಲ್ಲಿ ನಮಾಝ್ ಮಾಡುತ್ತಿದ್ದ ಮುಸಲ್ಲಾ, ತಸಿº, ಕುರಾನ್‌ ನೋಡಿದೆವು. ಅವರು ಸ್ವತಃ ಅಡುಗೆ ಮಾಡುತ್ತಿದ್ದರು. ತಾಯಿ ಸಲಹೆಯಂತೆ ಅವರು ಜೀವನ ನಡೆಸುತ್ತಿದ್ದರು. ಅಲ್ಲಿ ಆಕೆಯ ಡೈರಿ ಸಿಕ್ಕಿತು. ಅದರಲ್ಲಿ ಆಕೆ ಪ್ರತೀ ದಿನಚರಿಯನ್ನು ಬರೆದು ಇಡುತ್ತಿದ್ದಳು. ಕೊನೆಯ ನಮಾಝ್ ಮಾಡಿದ ಕುರುಹು ಕೂಡ ಆ ಮನೆಯಲ್ಲಿ ಕಂಡಿತು. ವಾಶಿಂಗ್‌ ಮೆಶಿನ್‌, ಸ್ವಲ್ಪ ಬಟ್ಟೆ ಕೂಡ ಅಲ್ಲಿತ್ತು ಎಂದು ನೋವಿನಿಂದ ನೂರ್‌ ಮುಹಮ್ಮದ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಆರೋಪಿಯನ್ನು ಸೆಂಟ್ರಲ್‌
ಜೈಲಿಗೆ ಸ್ಥಳಾಂತರಕ್ಕೆ ಚಿಂತನೆ?
ನೇಜಾರಿನಲ್ಲಿ ಮನೆಯೊಳಗಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ನ. 12ರ ಹಾಡಹಗಲೇ ಭೀಕರವಾಗಿ ಕೊಲೆಗೈದ ಹಂತಕ ಪ್ರವೀಣ್‌ ಚೌಗಲೆ (39) ಯನ್ನು ಭದ್ರತೆ ದೃಷ್ಟಿಯಿಂದ ಸೆಂಟ್ರಲ್‌ ಜೈಲಿಗೆ ಸ್ಥಳಾಂತರಿಸುವುದಕ್ಕೆ ಬಂಧಿಖಾನೆ ಇಲಾಖೆ ಮುಂದಾಗಿದೆ. ಈಗಾಗಲೇ ಕೋರ್ಟ್‌ ಇದಕ್ಕೆ ಅನುಮತಿ ನೀಡಿದ್ದು, ಬಂಧಿಖಾನೆ ಇಲಾಖೆಯ ಡಿಜಿಪಿ ಅವರ ಅನುಮೋದನೆ ಸಿಗಲು ಬಾಕಿಯಿದೆ. ಈ ಪ್ರಕ್ರಿಯೆ ನಡೆದ ಬಳಿಕ ಆತನ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಹಿರಿಯಡಕ ಸಬ್‌ಜೈಲಿನಲ್ಲಿದ್ದ ಆರೋಪಿ ಚೌಗಲೆಗೆ ಇಬ್ಬರು ಪೊಲೀಸರು ಪ್ರತೀದಿನ ಭದ್ರತೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next