Advertisement
ಆಡೀಯೋ ಕುರಿತಾಗಿ ಮಾಧ್ಯಮದವರಿಗೆ ಉಡುಪಿ ಶಾಸಕ ರಘಪತಿ ಭಟ್ ಪ್ರತಿಕ್ರಿಯಿಸಿ, ಆಡಿಯೋ ನನ್ನದಲ್ಲ ಎಂದು ನಳಿನ್ ಸ್ಪಷ್ಟವಾಗಿ ಹೇಳಿದ್ದಾರೆ. ರಾಜ್ಯದ್ಯಕ್ಷರೇ ಈ ಬಗ್ಗೆ ಸಿಎಂಗೆ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ತನಿಖೆಗೆ ಕೊಟ್ಟಿದ್ದಾರೆ, ತನಿಖೆ ಆದ ಮೇಲೆ ಗೊತ್ತಾಗುತ್ತದೆ ಎಂದಿದ್ದಾರೆ.
Related Articles
Advertisement
ಶಾಸಕಾಂಗ ಸಭೆಯ ಕುರಿತಾಗಿ ಆಗುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶಾಸಕಾಂಗ ಸಭೆಯ ಬಗ್ಗೆ ಇನ್ನೂ ಅಧಿಕೃತವಾಗಿ ಆಹ್ವಾನ ಬಂದಿಲ್ಲ. ಶಾಸಕಾಂಗ ಸಭೆ ಕರೆಯಬೇಕೆಂದು ಶಾಸಕನಾಗಿ ನಾನು ಒತ್ತಾಯಿಸುತ್ತೇನೆ. ನಾಯಕತ್ವದ ಬದಲಾವಣೆ ಸಲುವಾಗಿ ನನ್ನ ಬೇಡಿಕೆ ಅಲ್ಲ. ಪಕ್ಷದ ಇಮೇಜ್ ಹೆಚ್ಚಿಸುವ ದೃಷ್ಟಿಯಿಂದ ಸಭೆ ಮಾಡಬೇಕು. ಅಧಿವೇಶನಕ್ಕೂ ಮುನ್ನ ಶಾಸಕರ ಸಭೆ ಕರೆಯುವುದು ಸಂಪ್ರದಾಯ. ಶಾಸಕರ ಅಭಿಪ್ರಾಯ ತೆಗೆದುಕೊಂಡು ಅಧಿವೇಶನ ಆರಂಭಿಸುವುದು ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಾಲಾಡಿ, ಸುನಿಲ್ ಗೆ ಸಚಿವ ಸ್ಥಾನ ನೀಡಿ : ರಘುಪತಿ ಭಟ್
ಇನ್ನು, ಸಚಿವ ಸಂಪುಟದ ವಿಸ್ತರಣೆ ಹೈಕಮಾಂಡ್ ಹಾಗೂ ಮುಖ್ಯ ಮಂತ್ರಿಗೆ ಬಿಟ್ಟಿರುವ ವಿಷ್ಯ. ಆದ್ಯತೆ ಮೇರೆಗೆ ಹಾಲಾಡಿ ಹಾಗೂ ಸುನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಗಬೇಕು. ನಾನು ಸದ್ಯದ ಅವಧಿಗೆ ಸಚಿವ ಸ್ಥಾನದ ಆಕ್ಷಾಂಕಿ ನಾನಲ್ಲ. ನನಗೆ ನನ್ನ ಇತಿಮಿತಿ ಗೊತ್ತಿದೆ ಎಂದು ಹೇಳಿದ್ದಾರೆ.
ಹಾಲಾಡಿ ಶ್ರೀ ನಿವಾಸ್ ಶೆಟ್ಟಿ ಸಚ್ಚಾರಿತ್ರ್ಯ, ಉತ್ತಮ ವ್ಯಕ್ತಿತ್ವದ ಹಿರಿಯ ಶಾಸಕ. ಸುನಿಲ್ ಕುಮಾರ್ ಹಿಂದುಳಿದ ವರ್ಗದ ನಾಯಕ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರಿಬ್ಬರಿಗೆ ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಉಳ್ಳಾಲ: ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿದ್ದ ಶಾಲೆಯಲ್ಲಿ ಆಕಸ್ಮಿಕ ಬೆಂಕಿ