Advertisement

Udupi: ನಾಪತ್ತೆಯಾಗಿದ್ದ ಬಾಲಕನ ರಕ್ಷಣೆ, ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರ

12:46 AM Sep 13, 2024 | Team Udayavani |

ಉಡುಪಿ: ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನ ಅನುಮಾನಾಸ್ಪದ ಚಲನವಲನ ಗಮನಿಸಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರಿದ್ದಾರೆ.

Advertisement

ಮಕ್ಕಳ ರಕ್ಷಣ ಘಟಕದ ಚಕ್ರತೀರ್ಥ, ಪ್ರಮೋದ್‌, ರಾಜೇಶ್‌ ಹಸ್ತಾಂತರ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು. ರಕ್ಷಿಸಲ್ಪಟ್ಟ ಬಾಲಕ ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ಆಶ್ರಯದಲ್ಲಿದ್ದ. ನಿಟ್ಟೂರಿನ ಅನುದಾನಿತ ಹಿ.ಪ್ರಾ.ಶಾಲೆಯ 3ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಶಾಲೆಗೆಂದು ತೆರಳಿದ್ದ ಈತ ನಾಪತ್ತೆಯಾಗಿದ್ದ ಬಗ್ಗೆ ಬಾಲಕರ ಭವನದವರು ಪೊಲೀಸ್‌ ಠಾಣೆಗೆ ದೂರು ಕೂಡ ನೀಡಿದ್ದರು. ಬಾಲಕ ಬಸ್‌ ನಿಲ್ದಾಣದಲ್ಲಿರುವ ಪ್ರಯಾಣಿಕರಲ್ಲಿ ಹಣ ಯಾಚಿಸುತ್ತಿದ್ದ ಸಂದರ್ಭ ಅನುಮಾನ ವ್ಯಕ್ತವಾಗಿತ್ತು. ಹಣ ಸಂಗ್ರಹಗೊಂಡ ಬಳಿಕ ಬಾಲಕ ಬಸ್ಸಿನಲ್ಲಿ ಬೇರೆ ಊರಿಗೆ ಪಲಾಯನಗೈಯುವ ಉದ್ದೇಶ ಹೊಂದಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.