ಉಡುಪಿ: ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್‌ಸಿಐ) ಉಡುಪಿ -ಮಣಿಪಾಲ ಘಟಕದ ಉದ್ಘಾಟನಾ ಸಮಾರಂಭ ಮೇ 18ರಂದು ಮಣಿಪಾಲ ಕಂಟ್ರಿ ಇನ್ ಹೊಟೇಲ್ ಸಭಾಭವನದಲ್ಲಿ ಜರಗಿತು.
ಎಮಿರೈಟ್ ಸಂಸ್ಥೆಯ ಮುಖ್ಯಸ್ಥ ಎಂ.ಬಿ. ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದª ಸಿಮೊನಿಕ್ಸ್ ಸೊಲ್ಯುಷನ್ ಹಣಕಾಸು ಅಧಿಕಾರಿ ಎಂ.ಎನ್.ಪೈ ಮಾತನಾಡಿ, ಸಾರ್ವಜನಿಕ ಸಂಪರ್ಕ ಕ್ಷೇತ್ರ ಅತ್ಯಂತ ಮಹತ್ತರ ಕ್ಷೇತ್ರವಾಗಿದ್ದು ಮುಂದಿನ ಪೀಳಿಗೆ ಇದರ ಬಗ್ಗೆ ಗಮನಹರಿಸಬೇಕಾಗಿದೆ ಎಂದರು.
ಬಳಕೆದಾರ ವೇದಿಕೆಯ ವಿಶ್ವಸ್ಥ ಶಾಂತರಾಜ್ ಐತಾಳ್ ಮಾತನಾಡಿ, ಸಾರ್ವಜನಿಕ ಸಂಪರ್ಕ ಕೇವಲ ಶಿಕ್ಷಣ ಮಾತ್ರವಲ್ಲ ವ್ಯಕ್ತಿ-ವ್ಯಕ್ತಿಗಳ ಅಮೂಲ್ಯ ಸಂಬಂಧವಾಗಿದೆ ಈ ನಿಟ್ಟಿನಲ್ಲಿ ಇದರ ಕೇಂದ್ರ ಮಣಿಪಾಲದಲ್ಲಿ ಆರಂಭವಾಗಿರು ವುದು ಪ್ರಶಂಸನೀಯ ಎಂದರು.
ಪಿ.ಅರ್.ಸಿ.ಐ. ನಿರ್ದೇಶಕ ಅರ್.ಟಿ. ಕುಮಾರ್, ಬಿ.ಎನ್. ಕುಮಾರ್, ಪಿ.ಅರ್.ಸಿ.ಐ. ಅಧ್ಯಕ್ಷ ವಿನಯಕುಮಾರ್, ಗೀತಾ ಶಂಕರ್, ಬಿ.ಕೆ. ಶೆಟ್ಟಿ , ಅನಿಲ್ ಕೇಶ್ವಿನ್ ಮೊದಲಾದವರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷೆ ತನುಜಾ ಮಾಬೆನ್ ಮತ್ತು ತಂಡದ ಪದ ಪ್ರದಾನ ಜರಗಿತು.
ವಲಯ ಅಧ್ಯಕ್ಷ ಜಯಪ್ರಕಾಶ್ ರಾವ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಜತೆ ಕಾರ್ಯದರ್ಶಿ ಬಾಸುಮ ಕೊಡಗು, ಉಪಾಧ್ಯಕ್ಷ ನಾಗರಾಜ್ ಹೆಬ್ಟಾರ್, ಸುರೇಶ್ ಬೀಡು, ಕಾರ್ಯಕಾರಿ ಸಮಿತಿಯ ಸದಸ್ಯರಾದ ರವಿರಾಜ್ ಎಚ್.ಪಿ., ಗಿರೀಶ್ ತಂತ್ರಿ, ಶರ್ಮಿಳಾ ಸಾಲಿಗ್ರಾಮ, ಜಯಶ್ರೀ ಭಂಡಾರಿ, ಜಯಶ್ರೀರಾಜ್, ಶ್ರೀನಾಥ್ ಆಚಾರ್ಯ, ಬಿ.ಜಿ. ಮೋಹನದಾಸ್, ವಿನಯ್ ಆಚಾರ್ಯ, ಮನೋಜ್ ಕಡಬ ಉಪಸ್ಥಿತರಿದ್ದರು. ಶ್ರೀನಾಥ್ ನಿರೂಪಿಸಿದರು.