ಉಡುಪಿ: ಸೌರ ಮಧ್ವನವಮಿ ಪ್ರಯುಕ್ತ ಶ್ರೀ ಮಧ್ವವಿಜಯದ ಮಂಗಲ ಮಹೋತ್ಸವವು ಶನಿವಾರ ಶ್ರೀ ಮಧ್ವಾಚಾರ್ಯರು ಅದೃಶ್ಯರಾಗಿರುವ ಶ್ರೀ ಅನಂತೇಶ್ವರ ದೇವಸ್ಥಾನದ ಸನ್ನಿಧಾನದಲ್ಲಿ ನಡೆಯಿತು.
ವಿದ್ವಾನ್ ಪ್ರಸನ್ನ ಆಚಾರ್ಯ ಅವರುಕಳೆದ ಮೂರು ವರ್ಷಗಳಿಂದ ಆನ್‌ಲೈನ್ ಮೂಲಕ ವಿಶ್ವದಾದ್ಯಂತ ಜನರಿಗೆ
ಮಧ್ವ ವಿಜಯ ಪಾಠ ಮಾಡಿದ್ದು ಅದರಮಂಗಳ ಮಹೋತ್ಸವ ಶ್ರೀ ಅನಂತೇಶ್ವರ ದಲ್ಲಿ ನಡೆಯಿತು. ಸಂಜೆ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರತಿನಿಧಿಗಳಾಗಿ ಬಂದಿದ್ದ ವಿದ್ಯಾರ್ಥಿಗಳು ಮಧ್ವ ವಿಜಯದ ಆಚಾರ್ಯರ ಚರಿತ್ರೆ ಯನ್ನು ಸಂಕ್ಷಿಪ್ತವಾಗಿ ಅನುವಾದ ಮಾಡಿದರು.
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವದಿಸಿ, ನಮ್ಮ ಮಠದಿಂದ ಜ್ಞಾನಪ್ರಚಾರ ನಿರಂತರವಾಗಿ ಆನ್‌ಲೈನ್ ಮೂಲಕ ನಡೆಸಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಹೀಗೆ ವಿಶ್ವದಾದ್ಯಂತ ಜ್ಞಾನ ಪ್ರಚಾರ ನಡೆಯುತ್ತಿದೆ ಎಂದರು.
ಆನ್‌ಲೈನ್ ಪಾಠ ಮಾಡಿದ ಪ್ರಸನ್ನ ಆಚಾರ್ಯರಿಗೆ ಶ್ರೀಪಾದರು ಶಾಲು ಹೊದೆಸಿ ಶ್ರೀಕೃಷ್ಣ ಪ್ರಸಾದವನ್ನು ನೀಡಿದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ಶ್ರೀ ವಿದ್ಯೆàಶ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.