ಉಡುಪಿ: ಅಷ್ಟಪವಿತ್ರ ನಾಗ ಮಂಡಲೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಕಿದಿಯೂರು ಹೊಟೇಲಿನ ಎದುರು ವಿಶೇಷ ವೇದಿಕೆಗಳಲ್ಲಿ ವಾರಾಣಸಿಯಿಂದ ಬಂದ ಪರಿಣತಅರ್ಚಕ ವೃಂದದವರಿಂದ ವೈಶಿಷ್ಟ್ಯ ಪೂರ್ಣ ಅಕರ್ಷಕ ಸಾಮೂಹಿಕ ಗಂಗಾರತಿ ನಡೆಯಿತು.
ನಾಗದೇವರಿಗೆ ವಿಶೇಷ ಧೂಪ ಸೇವೆ ನಡೆಸಿ ಗಂಗೆಯ ತಟದಲ್ಲಿನ ಮಾದರಿಯಲ್ಲಿ 9 ವೇದಿಕೆಗಳ ಮೇಲೆ 9 ಮಂದಿ ಅರ್ಚಕರು ಆರತಿ ಬೆಳಗಿದರು. ಚೆಂಡೆವಾದ್ಯ, ಪಂಚವಾದ್ಯ, ಕೊಂಬು ಕಹಳೆಯ ಹಿನ್ನೆಲೆಯಿತ್ತು.
ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಆಯೋಜನಾ ಸಮಿತಿಯ ಗೌರವಾಧ್ಯಕ್ಷ ಡಾ| ಜಿ. ಶಂಕರ್, ಸೇವಾಕರ್ತ ಭುವನೇಂದ್ರ ಕಿದಿಯೂರು, ಕಬಿಯಾಡಿ ಜಯ ರಾಮ ಆಚಾರ್ಯ, ಪ್ರಧಾನ ಕಾರ್ಯ ದರ್ಶಿ ಯುವರಾಜ್ ಮಸ್ಕತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಾಗರಾಜ್ ಶೆಟ್ಟಿ, ಪ್ರಮುಖರಾದ ಜಯ ಸಿ. ಕೋಟ್ಯಾನ್, ದಯಾನಂದ್ ಕೆ. ಸುವರ್ಣ, ಉಚ್ಚಿಲ ದೇವಸ್ಥಾನದ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಜಯಕರ ಶೆಟ್ಟಿ ಇಂದ್ರಾಳಿ, ರಮೇಶ್ ಕಾಂಚನ್, ದಿವಾಕರ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಭವ್ಯಶ್ರೀ ಕಿದಿಯೂರು, ಡಾ| ವಿಜಯೇಂದ್ರ ರಾವ್, ಗಣೇಶ್ ರಾವ್, ಹರಿಯಪ್ಪ ಕೋಟ್ಯಾನ್, ಹಿರಿ ಯಣ್ಣ ಕಿದಿಯೂರು, ಬೃಜೇಶ್ ಬಿ. ಕಿದಿಯೂರು, ಹೀರಾ ಬಿ. ಕಿದಿಯೂರು, ಜಿತೇಶ್ ಬಿ. ಕಿದಿಯೂರು, ಪ್ರಿಯಾಂಕ ಬಿ. ಕಿದಿಯೂರು, ಹರಿಯಪ್ಪ ಕೋಟ್ಯಾನ್, ವನಜಾ ಹಿರಿಯಣ್ಣ, ಮಲ್ಲಿಕಾ ಯುವರಾಜ್, ಗಿರೀಶ್ ಕಾಂಚನ್, ಯೋಗಿಶ್‌ಚಂದ್ರಧರ್, ಸತೀಶ್ ಕುಂದರ್, ಸುಧಾಕರ ಮೆಂಡನ್, ಅಶೀಶ್ ಕುಮಾರ್, ಪಾಂಡುರಂಗ ಕರ್ಕೇರ, ಭೋಜರಾಜ್ ಕಿದಿಯೂರು, ಧನಂಜಯ ಕಾಂಚನ್, ಮಧುಸೂದನ್ ಕೆಮ್ಮಣ್ಣು, ದಿನೇಶ್ ಎರ್ಮಾಳು, ವಿಲಾಸ್ ಜೈನ್, ದಿನಕರ, ಪ್ರಕಾಶ್ ಜತ್ತನ್, ರಮೇಶ್ ಕಿದಿಯೂರು, ಪ್ರಕಾಶ್ ಸುವರ್ಣ, ಚಂದ್ರೇಶ್ ಪಿತ್ರೋಡಿ, ಯತೀಶ್ ಕಿದಿಯೂರು, ವಿಜಯ ಕೊಡವೂರು ಪಾಲ್ಗೊಂಡಿದ್ದರು.
ಎಲ್ಲ ಭಕ್ತರಿಗೆ ಕಾಶೀ ವಾರಾಣಸಿ ಯಿಂದ ತರಿಸಲಾದ ಪವಿತ್ರ ಗಂಗಾ ಜಲವನ್ನು ಸಂಪ್ರೋಕ್ಷಣೆ ಮತ್ತು ದಾರಗಳನ್ನು ವಿತರಿಸುವುದಾಗಿ ಸೇವಾಕರ್ತ ಭುವನೇಂದ್ರ ಕಿದಿ ಯೂರು ತಿಳಿಸಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಸ್ವರ ವಾದಕ ಶ್ರೀ ಉದಯ ಬೊಗ್ರ ಸೇರಿಗಾರ ತಂಡ ದಿಂದ ನಾಗಸ್ವರ ವಾದನ, ಕೂಡಾಲಿ ವಾದ್ಯ ಸಂಗಂ ಕಣ್ಣೂರು, ಕೇರಳದ 40 ಸದಸ್ಯರ ತಂಡದ ಚೆಂಡೆವಾದನ, ಮಟ್ಟನೂರು ಪಂಚವಾದ್ಯ ಸಂಗಂ, ಕೇರಳ 21 ಸದಸ್ಯರ ತಂಡದಿಂದ ಪಂಚವಾದ್ಯ, ತಮಿಳುನಾಡಿನ 11 ತಂಡದ ಸದಸ್ಯರಿಂದ ನಾಗಸ್ವರ ನಡೆಯಲಿದೆ ಎಂದು ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯುವರಾಜ್ ಮಸ್ಕತ್ ತಿಳಿಸಿದ್ದಾರೆ.
ಇಂದು ಅಷ್ಟಪವಿತ್ರ ನಾಗಮಂಡಲ
ಜ. 31ರಂದು ಬೆಳಗ್ಗೆ 9.45ರಿಂದ ಶ್ರೀ ನಾಗಸನ್ನಿಧಿಯಲ್ಲಿ ಅಷ್ಟೋತ್ತರ ಶತಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ, ದರ್ಶನ ಸೇವೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಇರಲಿದೆ. ಸಂಜೆ 4.30ಕ್ಕೆ ಹಾಲಿØಟ್ಟು ಸೇವೆ, 5.30ರಿಂದ ಮಂಟಪದಲ್ಲಿ ಗಂಗಾರತಿ, 6.30ಕ್ಕೆ ಅಷ್ಟಪವಿತ್ರ ನಾಗಮಂಡಲೋತ್ಸವ ಆರಂಭಗೊಂಡು ರಾತ್ರಿ 11.30ಕ್ಕೆ ಪ್ರಸಾದ ವಿತರಣೆಯಾಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಶ್ರೀ ವಿಶ್ವೇಶತೀರ್ಥ ಮಂಟಪದಲ್ಲಿ ಬೆಳಗ್ಗೆ 10.30ರಿಂದ ವಿದುಷಿ ಪವನಾ ಬಿ. ಆಚಾರ್, ಮಣಿಪಾಲ ನಿರ್ದೇಶನದಲ್ಲಿ ಏಕಕಾಲದಲ್ಲಿ 108 ವೀಣೆಗಳ ವಾದನ ಮಧ್ಯಾಹ್ನ 12.30ರಿಂದ ಶ್ರೀಮತಿ ಅಕ್ಷತಾ ದೇವಾಡಿಗ ಮತ್ತು ಬಳಗ ಅಲೆವೂರು ಅವರಿಂದ ಸ್ಯಾಕೊÕàಫೋನ್ ವಾದನ, ಮಧ್ಯಾಹ್ನ ಗಂಟೆ 3ರಿಂದ ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯ ಪಾಡಿಗಾರು ಮತ್ತು ಬಳಗದವರಿಂದ ಭಕ್ತಿ ರಸಾಯನ, ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಹಾಕಲಾದ ಶ್ರೀ ವಾಸುಕೀ ಮಂಟಪದಲ್ಲಿ ಬೆಳಗ್ಗೆ 10.30ರಿಂದ ಶ್ರುತಿ ಮ್ಯೂಸಿಕ್ ಎರ್ಮಾಳು ಬಡಾ ಅವರಿಂದ ಭಕ್ತಿ-ಭಾವ-ಜಾನಪದ ಸಂಗೀತ ವೈಭವ, ಮಧ್ಯಾಹ್ನ 1ರಿಂದ 3.30ರ ವರೆಗೆ ಜಗದೀಶ್ ಪುತ್ತೂರು ಬಳಗದವರಿಂದ ಭಕ್ತಿ ಗಾನಾಮೃತ ನಡೆಯಲಿದೆ.