Advertisement

Udupi: ನಾಗಾರಾಧನೆಯಿಂದ ಸಂಪತ್ತು ವೃದ್ಧಿ: ಕೃಷ್ಣಾಪುರ ಶ್ರೀ

12:35 AM Jan 27, 2024 | Team Udayavani |

ಉಡುಪಿ: ಪರಶುರಾಮ ಸೃಷ್ಟಿಯ ನಾಗಭೂಮಿಯಾದ ಇಲ್ಲಿ ನಾಗಾರಾಧನೆ ಮಾಡಲೇ ಬೇಕಿದೆ. ನಾಗಾರಾಧನೆಯಿಂದ ಸಂತಾನ ಭಾಗ್ಯ, ವ್ಯವಹಾರ ಅಭಿವೃದ್ಧಿ, ರೋಗ ರುಜಿನ ಪರಿಹಾರವಾಗುವುದಲ್ಲದೆ ಸಕಲ ಸಂಪತ್ತು ಲಭಿಸಲಿದೆ ಎಂದು ಶ್ರೀ ವಿದ್ಯಾ ಸಾಗರತೀರ್ಥ ಶ್ರೀಪಾದರು ನುಡಿದರು.

Advertisement

ಕಿದಿಯೂರ್‌ ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಜ. 31ರಂದು ನಡೆಯಲಿರುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ಶುಕ್ರವಾರ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ಆಯೋಜಿಸಲಾದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಅವರು ಉದ್ಘಾಟಿಸಿದರು.

ನಿರಂತರವಾಗಿ ಸಮಾಜಮುಖಿ ಕಾರ್ಯವೆಸಗುವ ವ್ಯಕ್ತಿಯ ಸಂಪತ್ತು ವೃದ್ಧಿಯಾದರೆ ಅದು ಪುನಃ ಸಮಾಜಕ್ಕೆ ಹರಿದು ಬರುತ್ತದೆ ಎಂಬುದಕ್ಕೆ ಭುವನೇಂದ್ರರು ಸಾಕ್ಷಿಯಾಗಿದ್ದಾರೆ ಎಂದು ಆಶೀರ್ವಚನ ನೀಡಿದರು.

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಧರ್ಮ- ಕರ್ಮಗಳ ಸಮನ್ವಯ ಕ್ಷೇತ್ರವಾಗಿ ಗುರುತಿಸಿಕೊಂಡ ಈ ಸಾನ್ನಿಧ್ಯದಲ್ಲಿ ನಾಗ ಮಂಡಲ ಸೇವೆಯಿಂದ ಸರ್ವರಿಗೂ ಅನುಗ್ರಹ ಪ್ರಾಪ್ತಿಯಾಗಲಿ ಎಂದರು.

ನಾಗಮಂಡಲೋತ್ಸವ ಆಯೋಜನಾ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಶುಭ ಹಾರೈಸಿದರು.

Advertisement

ಕಿದಿಯೂರ್‌ ಹೊಟೇಲ್ಸ್ ನ ಎಂಡಿ ಭುವನೇಂದ್ರ ಕಿದಿಯೂರು, ಉಜ್ವಲ್‌ ಡೆವಲಪರ್ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಉದ್ಯಮಿಗಳಾದ ಗೋಪಾಲ ಸಿ. ಬಂಗೇರ, ಸಾಧು ಸಾಲ್ಯಾನ್‌ ಮಲೆೆ³, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್‌. ಚಂದ್ರಶೇಖರ್‌, ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣ ಪ್ರಸಾದ್‌ ಕೂಡ್ಲು, ಮಲೆೆ³ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್‌ ಸಾಲ್ಯಾನ್‌ ಮಸ್ಕತ್‌, ಕಿದಿಯೂರ್‌ ಹೊಟೇಲ್ಸ್ ನ ನಿರ್ದೇಶಕ ಜಿತೇಶ್‌ ಬಿ. ಕಿದಿಯೂರು, ರಾಜೇಂದ್ರ ಸುವರ್ಣ ಹಿರಿಯಡಕ ಉಪಸ್ಥಿತರಿದ್ದರು.

ನಾಗಮಂಡಲದ ಸಮಗ್ರ ಮಾರ್ಗದರ್ಶಕ, ಜೋತಿಷಿ ವೇ|ಮೂ| ಕಬಿಯಾಡಿ ಜಯರಾಮ ಆಚಾರ್ಯ ಪ್ರಸ್ತಾವನೆಗೈದರು. ಜಯ ಸಿ. ಕೋಟ್ಯಾನ್‌ ಸ್ವಾಗತಿಸಿದರು. ದಾಮೋದರ ಶರ್ಮ ನಿರೂಪಿಸಿದರು. ಡಾ| ವಿಜಯೇಂದ್ರ ವಸಂತ ರಾವ್‌ ವಂದಿಸಿದರು.

ಸಹಾಯಧನ ವಿತರಣೆ-ಸಮ್ಮಾನ
ಕಿಡ್ನಿ ತೊಂದರೆಗೀಡಾದ ಪೂರ್ಣಿಮಾ, ಅಂಗ ವೈಕಲ್ಯವಿರುವ ಪ್ರಜ್ವಲ್‌ ಮತ್ತು ಪ್ರತೀûಾ ಅವರ ಪರವಾಗಿ ಜ್ಯೋತಿ ಶೇಖರ್‌, ಅಸ್ವಸ್ಥರಾಗಿ ಮರಣ ಹೊಂದಿದ ಶಂಕರ್‌ ಅವರ ಪತ್ನಿ ಕಮಲಾ, ಅಂಗವಿಕಲ ದಿನೇಶ್‌ ಪೂಜಾರಿ, ಕ್ಯಾನ್ಸರ್‌ನಿಂದ ಬಳಲುತ್ತಿರುವ ನರೇಶ್‌ ಶೆಟ್ಟಿಗಾರ್‌ ಅವರಿಗೆ ವೈದ್ಯಕೀಯ ಸಹಾಯಧನ ವಿತರಿಸಲಾಯಿತು. ಸಮಾಜಮುಖಿ ಕಾರ್ಯ ಮಾಡಿಕೊಂಡು ಬರುತ್ತಿರುವ ಡಾ| ಕೃಷ್ಣಪ್ರಸಾದ್‌ ಕೂಡ್ಲು, ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಡಾ| ಜಿ.ಎಸ್‌. ಚಂದ್ರಶೇಖರ್‌ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next