Advertisement

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

02:28 AM Dec 23, 2024 | Team Udayavani |

ಉಡುಪಿ: ಜನ ಸಾಮಾನ್ಯರು ಹಾಗೂ ವಕೀಲರಿಗೆ ಅನುಕೂಲವಾಗಲು ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ಗಳ 1 ಕೋಟಿಗೂ ಅಧಿಕ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಕನ್ನಡ ಭಾಷಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ರಾಜ್ಯ ಹೈಕೋರ್ಟ್‌ ನ್ಯಾ.ಸೂರಜ್‌ ಗೋವಿಂದರಾಜ್‌ ಹೇಳಿದರು.

Advertisement

ಉಡುಪಿ ವಕೀಲರ ಸಂಘ ಮತ್ತು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದಲ್ಲಿ ನ್ಯಾಯಾಲಯ ಆವರಣದಲ್ಲಿ ಶನಿವಾರ ಉಚಿತ ಆರೋಗ್ಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಅವರು, ಸುಪ್ರೀಂಕೋರ್ಟ್‌ನ 37,036, ದೇಶದ ಹೈಕೋರ್ಟ್‌ಗಳ 1.56 ಕೋಟಿ ಹಾಗೂ ಕರ್ನಾಟಕ ಹೈಕೋರ್ಟ್‌ನ 7.59 ಲಕ್ಷ ತೀರ್ಪುಗಳು ಆನ್‌ಲೈನ್‌(ಇಎಸ್‌ಇಆರ್‌)ನಲ್ಲಿ ಉಚಿತವಾಗಿ ಲಭ್ಯ. ಅಲ್ಲದೇ ಹೈಕೋ ರ್ಟ್‌, ಸುಪ್ರೀಂ ಕೋರ್ಟ್‌ನ 3 ಸಾವಿರಕ್ಕೂ ಅಧಿಕ ತೀರ್ಪುಗಳನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ ಎಂದು ಹೇಳಿದರು.

ಮೂರ್ನಾಲ್ಕು ವರ್ಷಗಳಲ್ಲಿ ತೀರ್ಪುಗಳ ಕನ್ನಡ ಭಾಷಾಂತರ ಪೂರ್ಣಗೊಳ್ಳಲಿದ್ದು, ಆನ್‌ಲೈನ್‌ ನಲ್ಲಿ ಲಭ್ಯವಾಗುತ್ತದೆ. ಇದರಿಂದ ವಕೀಲರು ಅಧ್ಯಯನ ಪುಸ್ತಕಗಳಿಗಾಗಿ ಮಾಡುವ ಖರ್ಚು ಉಳಿಯಲಿದೆ ಎಂದರು. ಮಧುಮೇಹ, ರಕ್ತದೊತ್ತಡ ವಕೀಲ ರನ್ನು ಹೆಚ್ಚು ಕಾಡುತ್ತಿದ್ದು ಮಾನಸಿಕ, ದೈಹಿಕ ಆರೋಗ್ಯಕ್ಕೆ ಗಮನ ಕೊಡಿ ಎಂದು ಹೇಳಿದರು.

ಮಾಹೆ ವಿವಿ ಸಹ ಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ಮಾತನಾಡಿ, ಬದಲಾದ ಜೀವನ ಪದ್ಧತಿಯಿಂದ ಬರುವ ಕಾಯಿಲೆಗಳನ್ನು ತಡೆಯಲು ನಿತ್ಯ ವ್ಯಾಯಾಮ ಮುಖ್ಯ ಎಂದು ಹೇಳಿದರು. ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ಮಾತನಾಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್‌ ಎಸ್‌. ಗಂಗಣ್ಣವರ್‌ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಸದಸ್ಯರಿಗೆ ಉಡುಪಿ ಲಾಯರ್ ಪ್ರಿವಿಲೇಜ್‌ ಕಾರ್ಡ್‌(ಆರೋಗ್ಯ ಕಾರ್ಡ್‌) ವಿತ ರಿಸಲಾಯಿತು. ಸಂಘದ ಅಧ್ಯಕ್ಷ ರೆನೋಲ್ಡ್‌ ಪ್ರವೀಣ್‌ ಕುಮಾರ್‌ ಸ್ವಾಗ ತಿಸಿದರು. ನ್ಯಾಯವಾದಿ ಸಹನಾ ಕುಂ ದರ್‌ ನಿರೂಪಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಎ.ಆರ್‌. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next