Advertisement

ಉಡುಪಿ ಕ್ಷೇತ್ರದಲ್ಲಿ ಎರಡು ಹಂತದ ಚುನಾವಣೆ

11:16 PM Apr 10, 2019 | Lakshmi GovindaRaju |

ಉಡುಪಿ: ಎರಡು ಹಂತಗಳ ಮತದಾನ ನಡೆಯುತ್ತಿರುವ ರಾಜ್ಯದ ಏಕೈಕ ಜಿಲ್ಲೆಯಾಗಿ ಉಡುಪಿ ಗುರುತಿಸಿಕೊಂಡಿದೆ. ಚುನಾವಣೆಗೆ ಅಗತ್ಯವಿರುವ ತಯಾರಿಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಇತರ ಜಿಲ್ಲೆಗಳಲ್ಲೂ ವಿಧಾನಸಭಾ ಕ್ಷೇತ್ರಗಳು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿ ಹೋದದ್ದು ಇದೆ. ಆದರೆ ಎರಡು ಹಂತಗಳ ಮತದಾನ ನಡೆಯುತ್ತಿರುವುದು ಉಡುಪಿಯಲ್ಲಿ ಮಾತ್ರ.

Advertisement

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಚುನಾವಣೆ ಏ.18ರಂದು ನಡೆದರೆ, ಬೈಂದೂರು ಕ್ಷೇತ್ರವನ್ನು ಒಳಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಏ. 23ರಂದು ನಡೆಯಲಿದೆ. 2014ರ ಲೋಕಸಭಾ ಚುನಾವಣೆ ಉಡುಪಿ ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ನಡೆದಿತ್ತು.

ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಉಡುಪಿ ಜಿಲ್ಲಾಧಿಕಾರಿ, ಶಿವಮೊಗ್ಗ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಚುನಾವಣಾಧಿಕಾರಿಯಾಗಿದ್ದಾರೆ. ಆದರೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಬೇಕಾದ ಮತಯಂತ್ರ, ವಿವಿಪ್ಯಾಟ್‌, ಸಿಬ್ಬಂದಿ, ವಾಹನದ ವ್ಯವಸ್ಥೆ, ಪೊಲೀಸ್‌ ಭದ್ರತೆ ಸೇರಿ ಎಲ್ಲ ಜವಾಬ್ದಾರಿ ಉಡುಪಿ ಜಿಲ್ಲಾಡಳಿತದ ಮೇಲಿದೆ.

ಪ್ರಚಾರಕ್ಕೆ ಬೇಕಾದ ಅನುಮತಿಯನ್ನು ಬೈಂದೂರು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಿಂದ ಪಡೆದುಕೊಂಡರೆ, ಹೆಲಿಕಾಪ್ಟರ್‌, ಸ್ಟಾರ್‌ ಪ್ರಚಾರಕ್ಕೆ ಉಡುಪಿ ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕಾಗಿದೆ.

ಉಡುಪಿ ಜಿಲ್ಲೆಯು ಈ ಬಾರಿ ಲೋಕಸಭಾ ಚುನಾವಣೆಯನ್ನು 2 ಹಂತದಲ್ಲಿ ಎದುರಿಸಲಿದೆ. ಈ ನಿಟ್ಟಿನಲ್ಲಿ ಸ್ವೀಪ್‌ ಕಾರ್ಯಕ್ರಮಗಳು ಏ. 22ರ ವರೆಗೂ ಮುಂದುವರೆಯಲಿದೆ. ಬೈಂದೂರು ಕ್ಷೇತ್ರಕ್ಕೆ ಬೇಕಾದ ವಿವಿಧ ಪರಿಕರ ರಚನೆಯನ್ನು ಶಿವಮೊಗ್ಗ ಕ್ಷೇತ್ರಕ್ಕೆ ಸಂಬಂಧಿಸಿ ತಯಾರಿಸಲಾಗಿದೆ. ಈ ಎರಡೂ ಹಂತಗಳಲ್ಲಿ ಮತದಾರರಿಗೆ ಮಾಹಿತಿ ನೀಡಲಾಗುತ್ತಿದೆ.
-ಸಿಂಧೂ ಬಿ.ರೂಪೇಶ್‌, ಅಧ್ಯಕ್ಷರು, ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಜಿ.ಪಂ. ಸಿಇಒ, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next