Advertisement

ರಾಷ್ಟ್ರಪತಿ ಸ್ವಾಗತಕ್ಕೆ ಸಿದ್ಧಗೊಳ್ಳುತ್ತಿದೆ ಉಡುಪಿ ಐಬಿ

10:29 AM Dec 18, 2018 | |

ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಡಿ. 27ರಂದು ಉಡುಪಿಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಉಡುಪಿಯ ಸರಕಾರಿ ಪ್ರವಾಸಿ ಬಂಗಲೆ (ಐಬಿ)ಯನ್ನು ಒಪ್ಪ ಓರಣವಾಗಿಸುವ ಕೆಲಸ ಆರಂಭಗೊಂಡಿದೆ.

Advertisement

ಕಳೆದ ಬಾರಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಉಡುಪಿಗೆ ಆಗಮಿಸಿದ್ದಾಗ ನೂತನ ಪ್ರವಾಸಿ ಬಂಗಲೆಯಲ್ಲಿಯೇ ವಿಶ್ರಾಂತಿ ಪಡೆದಿದ್ದರು. ಈ ಬಾರಿ ರಾಮನಾಥ ಕೋವಿಂದ್‌ ಅವರು ಕೂಡ ಇಲ್ಲಿಯೇ ವಿಶ್ರಮಿಸುವ ನಿರೀಕ್ಷೆ ಇರುವುದರಿಂದ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ವಿವಿಐಪಿ ಸೂಟ್‌ 
ಹೊಸ ಐಬಿಯಲ್ಲಿ ಮೇಲಂತಸ್ತು ಮತ್ತು ಕೆಳ ಅಂತಸ್ತಿನಲ್ಲಿ ತಲಾ ಒಂದು ವಿವಿಐಪಿ ಸೂಟ್‌ಗಳಿವೆ. ಕೆಳಗಿನ ವಿವಿಐಪಿ ಸೂಟ್‌ನ್ನು ರಾಷ್ಟ್ರಪತಿಯವರಿಗೆ ಮೀಸಲಿ ಡಲಾಗುತ್ತದೆ. ಪ್ರಣವ್‌ ಮುಖರ್ಜಿ ಅವರ ಆಗಮನದ ವೇಳೆ ವಿವಿಐಪಿ ಸೂಟ್‌ಗೆ ಬೇಕಾದ ಸಲಕರಣೆಗಳನ್ನು ಜೋಡಿಸಿ ಸಿದ್ಧಪಡಿಸಲಾಗಿತ್ತು. ಹೊಸ ಐಬಿಯ 20 ಹಾಗೂ ಹಳೆಯ ಐಬಿಯ 5 ಕೊಠಡಿಗಳು ಸೇರಿದಂತೆ ಎಲ್ಲ ಕೊಠಡಿಗಳನ್ನು ಸುವ್ಯವಸ್ಥಿತವಾಗಿಸುವ ಕೆಲಸ ನಡೆಯುತ್ತಿದೆ. ಅಗತ್ಯ ಇರುವಲ್ಲಿ ಪೈಂಟಿಂಗ್‌ ಟಚ್‌ಅಪ್‌ ಕೊಡಲಾಗುತ್ತಿದೆ. ಹಳೆಯ ಐಬಿಗೆ ಸಂಪೂರ್ಣ ಪೈಂಟಿಂಗ್‌ ನಡೆಯುತ್ತಿದೆ. 

ಹೊಟೇಲ್‌ನಿಂದ ಭೋಜನ
ಕಳೆದ ಬಾರಿ ಪ್ರಣವ್‌ ಮುಖರ್ಜಿ ಅವರಿಗೆ ಉಡುಪಿಯ ಓಶಿಯನ್‌ ಪರ್ಲ್ ಹೊಟೇಲ್‌ನಲ್ಲಿ ಭೋಜನ ಸಿದ್ಧಪಡಿಸಲಾಗಿತ್ತು. ಈ ಬಾರಿಯೂ ಅಲ್ಲಿಯೇ ತಯಾರಾಗುವ ಸಾಧ್ಯತೆಗಳಿವೆ. ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಐಬಿಯಲ್ಲಿ ಮೂರು ದಿನಗಳ ಕಾಲ ಇತರರಿಗೆ ಕೊಠಡಿಗಳ ಬುಕ್ಕಿಂಗ್‌ ಇರುವುದಿಲ್ಲ. ಈ ಹಿಂದೆ ರಾಜೀವ್‌ ಗಾಂಧಿ, ಅನಂತರ ರಾಷ್ಟ್ರಪತಿ ಶಂಕರ್‌ದಯಾಳ್‌ ಶರ್ಮಾ ಅವರು ಕೂಡ ಉಡುಪಿಯ ಐಬಿಯಲ್ಲಿ (ಹಳೆ) ತಂಗಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next