Advertisement

ಉಡುಪಿಯ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ: ಹೋಟೆಲ್ ಸೀಲ್ ಡೌನ್

06:07 PM Jul 04, 2020 | keerthan |

ಉಡುಪಿ: ಕಳೆದ ನಾಲ್ಕು ದಿನಗಳಿಂದ ಆದಿ ಉಡುಪಿಯ ಹೆಸರಾಂತ ಮಾಂಸಹಾರಿ ಮೀನು ಊಟದ ಹೋಟೆಲ್ ಸಿಬಂದಿಗಳಿಗೆ ಕೋವಿಡ್-19 ಸೋಂಕು ಹರಡಿತ್ತು ಎಂಬ ವದಂತಿಯಿತ್ತು. ಆದರೆ ಇಂದು ಹೋಟೆಲ್ ಮಾಲಕರಿಗೆ ಕೋವಿಡ್-19 ಸೋಂಕು ದೃಢವಾಗಿದೆ.

Advertisement

ಮಾಲಕರಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಹೋಟೆಲ್‌ ಅನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೋಟೆಲ್ ಸೀಲ್ ಡೌನ್ ಮಾಡಿ, ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಹೋಟೆಲ್ ಗೆ ದಿನ ನಿತ್ಯ ನೂರಾರು ಗ್ರಾಹಕರು ಬರುವ ಕಾರಣ ಸೋಂಕು ಹರಡಿರುವ ಸಾಧ್ಯತೆ ಇರಬಹುದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಭಾನುವಾರದ ಲಾಕ್ ಡೌನ್: ಈಗಾಗಲೇ ನಿಗದಿಯಾಗಿರುವ ವಿವಾಹ ಕಾರ್ಯಕ್ರಮಕ್ಕೆ ಇದೆಯೇ ಅನುಮತಿ?

Advertisement

ಕೆಲ ದಿನಗಳ ಹಿಂದೆ ಉಡುಪಿಯ ಮತ್ತೊಂದು ಹೋಟೆಲ್ ನ ಬಾಣಸಿಗರಿಗೂ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next