Advertisement

ಉಡುಪಿ ಹೆಲ್ಪ್ ಆ್ಯಪ್‌: ಮಾನ್ಸೂನ್‌ ದೂರು

09:20 PM Jun 05, 2019 | sudhir |

ಉಡುಪಿ: ಜಿಲ್ಲಾಡಳಿತ ಹಾಗೂ ನಗರಸಭೆಯ ಮೂಲಕ ಮಾನ್ಸೂನ್‌ನಲ್ಲಿ ಸಂಭವಿಸುವ ಅವಘಡಗಳ ತುರ್ತು ಸ್ಪಂದನೆಗಾಗಿ ಸಿದ್ಧಪಡಿಸಿದ “ಉಡುಪಿ ಹೆಲ್ಫ್’ ಆ್ಯಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

Advertisement

ಇದೇ ಮೊದಲ ಬಾರಿಗೆ ನಗರಸಭೆ ಹಾಗೂ ಜಿಲ್ಲಾಡಳಿತದಿಂದ ಮಳೆಗಾಲದ ತುರ್ತು ಸ್ಪಂದನೆಗೆ ಆನ್‌ಲೈನ್‌ ಆ್ಯಪ್‌ ಬಳಸಿಕೊಳ್ಳಲಾಗುತ್ತಿದೆ. 35 ವಾರ್ಡ್‌
ಗಳಿಗೆ ಅನುಕೂಲವಾಗುವಂತೆ ಆ್ಯಪ್‌ ಸಿದ್ಧಪಡಿಸಲಾಗಿದೆ.

ಗೂಗಲ್‌ ಪ್ಲೇ ಸ್ಟೋರ್‌
ಸಾರ್ವಜನಿಕರು ತಮ್ಮ ಸ್ಮಾರ್ಟ್‌ ಫೋನ್‌ನ ಗೂಗಲ್‌ ಪ್ಲೇ ಸ್ಟೋರ್‌ನಿಂದ ಉಡುಪಿ ಹೆಲ್ಫ್ ಆ್ಯಪ್‌ ಡೌನಲೋಡ್‌ ಮಾಡಿಕೊಳ್ಳಬೇಕು. ಬಳಿಕ ®ಂದಾಯಿತ ಮೊಬೈಲ್‌ ದೂರವಾಣಿ ಸಂಖ್ಯೆಗೆ ಕಳಹಿಸಲಾದ “ಒಪಿಟಿ’ ನಮೂದಿಸಬೇಕು.

ಅನಂತರ ಆ್ಯಪ್‌ ಸ್ವಯಂ ಜಿಪಿಆರ್‌ಎಸ್‌ ಮೂಲಕ ಗ್ರಾಹಕರ ವಾರ್ಡ್‌ ಹಾಗೂ ವಿಳಾಸವನ್ನು ದಾಖಲಿಕೊಳ್ಳುತ್ತದೆ.

ಅಪ್‌ಲೋಡ್‌ – ಟ್ರ್ಯಾಕ್‌
ಆ್ಯಪ್‌ನಲ್ಲಿ ದೂರು ದಾಖಲಿಸಲು ಮೂರು ಹಂತಗಳಿವೆ. ಸಾರ್ವಜನಿಕರ ಜಿಪಿಆರ್‌ಸ್‌ ಮೂಲಕ ಲೈವ್‌ ಲೊಕೇಶನ್‌ ಫೋಟೋ ಅಥವಾ ವಿಡಿಯೋವನ್ನು ಅಪ್‌ಲೋಡ್‌ ಮಾಡಬೇಕು. ಅನಂತರ ಸ್ಥಳದಲ್ಲಿನ ಸಮಸ್ಯೆಯ ಕುರಿತು 400 ಪದಗಳ ಮಿತಿಯೊಳಗೆ ಸಮಸ್ಯೆಯ ಕುರಿತ ಮಾಹಿತಿ ಅಪ್‌ಲೋಡ್‌ ಮಾಡಬೇಕು. ಅಂತೆಯೇ ಆ್ಯಪ್‌ ಮೂಲಕ ದಾಖಲಾದ ದೂರು ಟ್ರ್ಯಾಕ್‌ ಮಾಡ ಬಹುದಾಗಿದೆ.

Advertisement

ದೂರುಗಳ ಪ್ರಕಾರ
ಸಾರ್ವಜನಿಕರು ಆ್ಯಪ್‌ನ ಮೂಲಕ ಮಲೇರಿಯಾ, ಮರ ಬಿದ್ದು ರಸ್ತೆ, ಮನೆ ಹಾನಿ, ವಿದ್ಯುತ್‌ ಕಂಬ ಬಿದ್ದು ಮನೆ, ರಸ್ತೆ ಹಾನಿ, ನೆರೆ ಪೀಡಿತ ಪ್ರದೇಶ, ಸಿಡಿಲು ಬಡಿದು ಮನೆ ಹಾಗೂ ಪ್ರಾಣ ಹಾನಿ, ಚರಂಡಿ ನೀರು ಹರಿಯುವುದು, ಭೂ ಕುಸಿತ, ಕಟ್ಟಡ ಕುಸಿತ ಸೇರಿದಂತೆ ಒಟ್ಟು ಇತರೆ 12 ದೂರುಗಳ ಪ್ರಕರಗಳನ್ನು ಆ್ಯಪ್‌ನಲ್ಲಿ ಅಳವಡಿಸಿಕೊಳ್ಳಲಾಗಿದೆ.

6 ಗಂಟೆಯಲ್ಲಿ ಪರಿಹಾರ
ದೂರು ದಾಖಲಿಸಿದ ಆರು ಗಂಟೆಯ ಒಳಗೆ ಸಂಬಂಧಪಟ್ಟ ನಗರಸಭೆಯ ಇಲಾಖೆಯ ಅಧಿಕಾರಿಗಳು ಸ್ಪಂದನೆ ನೀಡಲಿದ್ದಾರೆ. ಅಧಿಕಾರಿಗಳು ಕೆಲಸ ಮುಗಿದ ತತ್‌ಕ್ಷಣ ಸ್ಥಳದ ಫೋಟೋವನ್ನು ಆ್ಯಪ್‌ನಲ್ಲಿ ಆಪ್‌ಲೋಡ್‌ ಮಾಡುವುದು ಕಡ್ಡಾಯವಾಗಿದೆ.

ಆ್ಯಪ್‌ನಲ್ಲಿ ಏನಿದೆ?
ಉಡುಪಿ ಹೆಲ್ಪ್ ಆ್ಯಪ್‌ನಲ್ಲಿ ನಗರಸಭೆ ಮಾನ್ಸೂನ್‌ ಕುರಿತ ಪ್ರಕಟನೆ, ಬ್ರಹ್ಮ ಗಿರಿ, ಮಲ್ಪೆ ಅಗ್ನಿ ಶಾಮಕ ದೂರವಾಣಿ ಸಂಖ್ಯೆ, ಮೆಸ್ಕಾಂ ಮಲ್ಪೆ, ಅಂಬಾಗಿಲು, ಪುತ್ತೂರು, ಉಡುಪಿ ಅರಣ್ಯ ಇಲಾಖೆ, ಪೊಲೀಸ್‌ ಠಾಣೆ, ಜಿಲ್ಲಾಧಿಕಾರಿ ಕಚೇರಿ ದೂರವಾಣಿ ಸಂಖ್ಯೆ ಸೇರಿದಂತೆ ಒಟ್ಟು ಇಲಾಖೆಗಳ ದೂರವಾಣಿ ಸಂಖ್ಯೆಗಳು ಆ್ಯಪ್‌ನಲ್ಲಿವೆೆ.

ಆ್ಯಪ್‌ ಬಿಡುಗಡೆಯಾದ ಮೂರು ದಿನಗಳಲ್ಲಿ 10ಕ್ಕೂ ಅಧಿಕ ಮಂದಿ ಆ್ಯಪ್‌ ಡೌನ್‌ಲೋಡು ಮಾಡಿದ್ದಾರೆ. ಮಳೆಗಾಲದಲ್ಲಿ ಆ್ಯಪ್‌ ಬಳಕೆ ಮಾಡುವವರ ಗ್ರಾಹಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ತುರ್ತು ಸ್ಪಂದನ ಆ್ಯಪ್‌
ಮಳೆಗಾಲದ ತುರ್ತು ಸ್ಪಂದನೆ ಆ್ಯಪ್‌ ಸಿದ್ಧಪಡಿಸಲಾಗಿದೆ. ಆ್ಯಪ್‌ನಲ್ಲಿ ದೂರು ದಾಖಲಾದ ತತ್‌ಕ್ಷಣ ರಕ್ಷಣಾ ಪಡೆ ಕಾರ್ಯಾಚರಿಸಲಿದೆ.
– ಆನಂದ ಸಿ.ಕಲ್ಲೋಳಿಕರ್‌, ಪೌರಾಯುಕ್ತ ಉಡುಪಿ ನಗರಸಭೆ

ಜವಾಬ್ದಾರಿಯುತ ನಾಗರಿಕರಾಗಿ
ಆ್ಯಪ್‌ನಲ್ಲಿ ದೂರು ನೀಡಲು ಎಲ್ಲರಿಗೂ ಕಷ್ಟ ಸಾಧ್ಯ. ಆದರೆ ಆ್ಯಪ್‌ ಬಳಸುವ ಪ್ರತಿಯೊಬ್ಬರೂ ಸಮಸ್ಯೆಯಿರುವ ಕುರಿತು ದೂರು ನೀಡಬಹುದು. ದೂರು ನೀಡಲು ನಿಗದಿತ ವಾರ್ಡ್‌ ಜನರಾಗಿರಬೇಕಾಗಿಲ್ಲ. ಜವಾಬ್ದಾರಿ ನಾಗರಿಕದರೆ ಸಾಕು.

Advertisement

Udayavani is now on Telegram. Click here to join our channel and stay updated with the latest news.

Next