Advertisement

ಉಡುಪಿ: ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ

02:46 PM Feb 21, 2021 | Team Udayavani |

ಉಡುಪಿ: ಜಿಲ್ಲೆಯ ಹಲವೆಡೆ ಇಂದು ಮಧ್ಯಾಹ್ನದಿಂದ ಧಾರಾಕಾರ ಮಳೆಯಾಗುತ್ತಿದ್ದು, ದಿಢೀರ್ ಸುರಿದ ವರ್ಷಾಧಾರೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

ಹೆಬ್ರಿ ಸುತ್ತ ಮುತ್ತ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಚರಂಡಿ ವ್ಯವಸ್ಥೆ ಸರಿ ಇಲ್ಲದೆ ರಸ್ತೆಯಲ್ಲಿ ನೀರು  ಹರಿಯುತ್ತಿದೆ. ಇಂದು ಜಿಲ್ಲೆಯ ಹಲವೆಡೆ ವಿವಾಹ ಸೇರಿದಂತೆ ಹಲವು ಶುಭ ಸಮಾರಂಭಗಳು ಆಯೋಜನೆಯಾಗಿದ್ದು ಮಳೆಯಿಂದ ಸಾರ್ವಜನಿಕರು ಪರದಾಟ ನಡೆಸುವಂತಾಯಿತು.

ಹಾಲಾಡಿ, ಬಸ್ರೂರು, ಬೆಳ್ವೆ, ಗೋಳಿಯಂಗಡಿ  ಮುಂತಾದ ಕಡೆ  ಮಧ್ಯಾಹ್ನ 1ಗಂಟೆಗೆ ಸರಿಯಾಗಿ ಮಳೆ ಆರಂಭವಾಗಿ, ಇನ್ನೂ ‌ಕೂಡ ಸುರಿಯುತ್ತಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next