Advertisement

Udupi ಗೋವಾ ಮದ್ಯ, ಗಾಂಜಾ ದಾಸ್ತಾನು: ಆರೋಪಿ ವಶಕ್ಕೆ

11:01 PM Sep 20, 2023 | Team Udayavani |

ಉಡುಪಿ: ಗೋವಾ ಮದ್ಯವನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದ ಆರೋಪಿ ಕಾರವಾರದ ಮೆಹಬೂಬ್‌ ಖಾಜಾ ಹುಸೇನ್‌ ಅಕ್ತರ್‌ (21)ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಮಣಿಪಾಲದ ಹಯಗ್ರೀವ ನಗರದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಈತ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೊಂದಿದ್ದ ಸುಮಾರು 9,670 ರೂ. ಮೌಲ್ಯದ ಒಟ್ಟು ಸುಮಾರು 16 ಲೀ. ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಪರಿಶೀಲನೆ ಸಂದರ್ಭ ಆತನಿಂದ 6 ಸಾವಿರ ರೂ. ಮೌಲ್ಯದ 302 ಗ್ರಾಂ ಗಾಂಜಾ ಸಹಿತ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌, ಬುಲೆಟ್‌ ಸಹಿತ ಸುಮಾರು 1,17,670 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next