Advertisement

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

02:08 AM Oct 04, 2024 | Team Udayavani |

ನಾವು ನಾಲ್ಕನೆಯ ತರಗತಿಯಲ್ಲಿ ಕಲಿಯುವಾಗ ನಡೆದ ಘಟನೆ ಇನ್ನೂ ನೆನಪಿದೆ. ನನಗೆ 98 ಅಂಕ ಬಂದಿತ್ತು. ನಾನು ತಂದೆಯೊಡನೆ ಹೋಗುವಾಗ ಹೊನ್ನಯ್ಯ ಮಾಸ್ಟ್ರೆ ಸಿಕ್ಕಿ “ನಿಮ್ಮ ಮಗ ಒಳ್ಳೆಯ ಮಾರ್ಕ್‌ ಪಡೆದಿದ್ದಾನೆ. ಇದುವರೆಗೆ 98 ಮಾರ್ಕ್‌ ಯಾರಿಗೂ ಬರಲಿಲ್ಲ’ ಎಂದು ಹೊಗಳಿದರು. ತಂದೆ ಹತ್ತಿರವಿದ್ದ ಕೋಲನ್ನು ತೆಗೆದುಕೊಂಡು ಸರಿಯಾಗಿ ಹೊಡೆದು “ಏಕೆ ಇಷ್ಟೇ ಮಾರ್ಕ್‌ ತೆಗೆದದ್ದು? 98 ತೆಗೆದವನಿಗೆ ಇನ್ನೆರಡು ಮಾರ್ಕ್‌ ತೆಗೆಯಲು ಏನಾಗಿತ್ತು ದಾಡಿ?’ ಚೆನ್ನಾಗಿ ಬೈದರು.

Advertisement

ಮಾಷ್ಟ್ರಿಗೆ ಅಚ್ಚರಿಯಾಗಿ ಹೊಡೆಯುವುದೇಕೆಂದು ಕೇಳಿದರು. “ಇವ ಮನೆಯಲ್ಲಿ ಓದುವುದಿಲ್ಲ ಮಾಸ್ಟ್ರೆ. ಆಟವಾಡ್ತಾ ಇರೂದು. ಇಷ್ಟು ಮಾರ್ಕ್‌ ತೆಗೆದವನಿಗೆ ಎರಡು ಮಾರ್ಕ್‌ ತೆಗೆಯಲು ಆಗಲಿಲ್ಲವೆಂದರೇನು’ ಎಂದು ಮತ್ತಷ್ಟು ಬೈದರು. ವಿಷಯವೊಂದೇ ಎರಡು ದೃಷ್ಟಿ. ಕೆಲಸವನ್ನು ಒತ್ತಡದಿಂದ (pressure)ಮಾಡಿಸುವುದು, ಖುಷಿಯಿಂದ (pleasure) ಮಾಡಿಸುವುದು ಎಂಬ ಎರಡು ಬಗೆ ಇದೆ. ಕೃಷ್ಣನ ತಂತ್ರವೆಂದರೆ ಒಳಗಿನಿಂದ ಹುಮ್ಮಸ್ಸು ಹೆಚ್ಚಿಸಿ ಕೆಲಸ ಮಾಡಿಸುವುದು, ದುರ್ಯೋಧನನದು ಕೆಣಕಿ ಕೆಲಸ ಮಾಡಿಸುವುದು. ಈಗಿನ ಕಾಲದಲ್ಲಿ ಕಾಣುತ್ತಿರುವ ಟಾರ್ಗೆಟ್‌, ಕಮಿಷನ್‌, ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟುವುದೆಲ್ಲ ಒತ್ತಡ ತಂತ್ರಗಾರಿಕೆ. ಇಲ್ಲಿ ಇನ್ನೊಂದು ಮುಖವಿದೆ. ಸಂತೋಷದಿಂದ ಕೆಲಸ ಮಾಡುವ ಪ್ರವೃತ್ತಿಯೂ ಇಂದು ಕಡಿಮೆಯಾಗುತ್ತಿದೆ.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next