Advertisement

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ

12:55 AM Sep 24, 2024 | Team Udayavani |

ಮೋಕ್ಷಕ್ಕೆ ಜ್ಞಾನ, ಭಕ್ತಿ, ವೈರಾಗ್ಯಗಳು ಮುಖ್ಯವಾದರೂ ಶ್ರೀಮದಾಚಾರ್ಯರು ಭಾಷ್ಯದಲ್ಲಿ ಭಕ್ತಿಯನ್ನು ಎತ್ತಿ ಹಿಡಿದದ್ದು ಏಕೆ? ಆರಂಭದಲ್ಲಿ ಮೂಢಭಕ್ತಿಯೇ ಆಗಿದ್ದರೂ ಮುಂದಿನ ಮೋಕ್ಷದ ವರೆಗಿನ ಬೆಳವಣಿಗೆಗೆ ಇದು ಬಹಳ ಪ್ರಯೋಜನಕಾರಿಯಾಗಲಿದೆ.

Advertisement

ಮೂಢಭಕ್ತಿಯಿಂದ ಆರಂಭದಲ್ಲಿ ದೇವಸ್ಥಾನಕ್ಕೆ ಹೋಗುವುದೇ ಆಗಿದ್ದರೂ ಇದುವೇ ಟರ್ನಿಂಗ್‌ ಪಾಯಿಂಟ್‌ ಆಗಿರುತ್ತದೆ. ಇಂತಹ ಸಂದರ್ಭ ಒಂದು ಬಗೆಯ ಸೆಳೆತ ಉಂಟಾಗುತ್ತದೆ. ಭಕ್ತಿಯ ಸೆಳೆತದಿಂದಲೇ ದೇವಸ್ಥಾನಕ್ಕೆ ಹೋಗಲು ಆರಂಭವಾಗುತ್ತದೆ. ದೇವರ ಮಹಿಮೆಯನ್ನು ಕೇಳಿ ಪ್ರೀತಿ, ಕಾಳಜಿ ಮೊದಲು ಶುರುವಾಗುತ್ತದೆ. ಒಳ್ಳೆಯ ವಿಷಯದಲ್ಲಿ ಆಸಕ್ತಿ ಇದ್ದರೆ ಅದನ್ನು ನೋಡಬೇಕು ಅಂದೆನಿಸುತ್ತದೆ. ಯಾವ ಜೀವಿಯ ಸ್ವಭಾವ ಹೇಗಿದೆಯೋ ಹಾಗೆ ಆಸಕ್ತಿ ಬೆಳೆಯುತ್ತದೆ. ಇದು ಎಲ್ಲರ ಅನುಭವಕ್ಕೆ ಬರುವ ವಿಷಯ. ಈಗ ತೀವ್ರ ಚರ್ಚೆಯಲ್ಲಿರುವ ಎಡಪಂಥ, ಬಲಪಂಥಕ್ಕೂ ಇದು ಅನ್ವಯ. ಯಾರೂ ಕೂಡ ಚಿಕ್ಕ ಪ್ರಾಯದಲ್ಲಿಯೇ ಎಡಪಂಥದವರೋ, ಬಲಪಂಥದವರೋ ಆಗಿರುವುದಿಲ್ಲ. ಆತನ/ಆಕೆಯ ಸ್ವಭಾವಕ್ಕೆ ತಕ್ಕುದಾಗಿ ಅಂತಹ ವಿಷಯದ ಒಲವು ಹೆಚ್ಚುತ್ತದೆ.

ಆ ವಿಷಯಗಳನ್ನು ಪ್ರತಿಪಾದಿಸುವವರ ಮೇಲೆ ಗೌರವ ಮೂಡುತ್ತದೆ. ಅವರನ್ನು ಕಾಣಬೇಕೆಂದೆನಿಸುತ್ತದೆ. ಮುಂದೆ ನಾಯಕರಾಗುತ್ತಾರೆ. ಹೀಗೆ ಆರಂಭದಲ್ಲಿದ್ದ ಮೂಢಭಕ್ತಿ ಶುದ್ಧಭಕ್ತಿಯಾಗಿ ಮಾರ್ಪಾಟಾಗಿ ಮೋಕ್ಷದಲ್ಲಿಯೂ ಇರುತ್ತದೆ.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next