ಯುದ್ಧವೆಂದರೆ ಯಾರೂ ಸಾಯಬಹುದು, ಯಾರೂ ಬದುಕಬಹುದು. “ನನ್ನ ರಥವನ್ನು ಮುಂದೆ ತಂದಿಡು’ ಎಂದು ಹೇಳುವಾಗಲೇ ಅರ್ಜುನನ ಅಹಂಕಾರ ಕಂಡುಬರುತ್ತದೆ. “ನಮ್ಮ ರಥವನ್ನು ಇಲ್ಲಿ ನಿಲ್ಲಿಸು’ ಎನ್ನಬಹುದಿತ್ತು. ಏಕವಚನದಲ್ಲಿ “ರಥವನ್ನು ಅಲ್ಲಿ ತೆಗೆದುಕೊಂಡು ಹೋಗಿ ನಿಲ್ಲಿಸು’ ಎಂದು ಹೇಳಿದಾಗ ಕೃಷ್ಣನಿಗಾದರೂ ಹೇಗಾಗಬಹುದು? ಕೃಷ್ಣನಾದರೋ ಪಾಂಡವರಿಗೆ ಸಹಾಯ ಮಾಡಲು ಬಂದದ್ದು. ಇದರಿಂದಾಗಿ ಕೃಷ್ಣನಿಗೆ ಮನಸ್ಸಿಗೆ ಬೇಸರವಾಯಿತು. ಅಚ್ಯುತ= ಚ್ಯುತಿ ಇಲ್ಲದವ. ಚ್ಯುತಿ ಇಲ್ಲದ ಸರಿಯಾದ ಸಾರಥಿ ಶ್ರೀಕೃಷ್ಣ. ಸರಿಯಾಗಿ ರಥವನ್ನು ನಿಲ್ಲಿಸು ಎಂಬ ಅಬ್ಬರ ಅರ್ಜುನನ ಮಾತಿನಲ್ಲಿ ಕಾಣುತ್ತದೆ. 11 ಅಕ್ಷೋಹಿಣಿ ಸೈನ್ಯದಲ್ಲಿ ಶೇ.1ರಷ್ಟು ಕೂಡ ಕೌರವ ವಂಶದವರಿರಲಿಲ್ಲ. ರಾಜರ ಸಂಖ್ಯೆ ಕಡಿಮೆ, ಸೈನಿಕರ ಸಂಖ್ಯೆ ಜಾಸ್ತಿ. ಆದರೂ ತಮ್ಮ ವಂಶದವರು ಎಂದು ಅರ್ಜುನ ಹೇಳುತ್ತಾನಲ್ಲ? ಗುಡಾಕೇಶ ಎಂದು ಸಂಜಯನು ಅರ್ಜುನನನ್ನು ಕರೆಯುತ್ತಾನೆ. ಗುಡಾಕೇಶ=ನಿದ್ರೆಯನ್ನು ಗೆದ್ದವ= ನಿದ್ರೆಯ ಅಧಿಪತಿ. ಅಹಂಕಾರ ಜಾಸ್ತಿಯಾದರೆ ನಿದ್ರೆ
ಬರುವುದಿಲ್ಲ. ಕಾಮ, ಕ್ರೋಧಾದಿಗಳೆಲ್ಲ ಅಹಂಕಾರದ ಉತ್ಪನ್ನಗಳು. ಅಹಂಕಾರಿಗಳಿಗೆ ಮೊದಲ ಪೆಟ್ಟು ನಿದ್ರೆ ಮೇಲೆ ಬೀಳುತ್ತದೆ. ಕೃಷ್ಣನು ಹೃಷೀಕೇಶ = ಇಂದ್ರಿಯಗಳ ಅಧಿಪತಿ. ಇಂದ್ರಿಯಾಧಿಪತಿ ನಿದ್ರಾಧಿಪತಿಗೂ ಹತ್ತಿರದ ಸಂಬಂಧವಿದೆ. ಗುಡ =ಅಜ್ಞಾನ. ಅಜ್ಞಾನಾಧಿಪತಿ ಇಂದ್ರಿಯಾಧಿಪತಿಯೊಂದಿಗೆ ಮಾತನಾಡುತ್ತಾನೆ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811