Advertisement

Udupi ಗೀತಾರ್ಥ ಚಿಂತನೆ – 23: ಯಾರ್ಯಾರದೋ ಪ್ರೀತಿ ಬದಲು ದೇವರ ಪ್ರೀತಿ ಇರಲಿ

10:11 AM Sep 01, 2024 | Team Udayavani |

ಧರ್ಮವನ್ನು ವ್ಯಾಖ್ಯಾನಿಸುವಾಗ ‘ಭಗವದಾರಾಧನಮೇವ ಪರಮೋಧರ್ಮಃ’ ಎಂದಿದೆ ವಿನಾ ‘ಭಗವತ್ಪೂಜಾ ಏವ ಪರಮೋಧರ್ಮಃ’ ಎಂದು ಹೇಳಿಲ್ಲ. ‘ಆರಾಧನೆ’ ಎಂಬ ಶಬ್ದದಲ್ಲಿ ವೈಶಿಷ್ಟ್ಯವಿದೆ.

Advertisement

ಸಾಮಾನ್ಯವಾಗಿ ‘ಆರಾಧನೆ’ ಶಬ್ದವನ್ನು ಬಳಸುವುದು ಗುರುಗಳಿಗೆ. ಆರಾಧನೆಯು ಸಾಧನರೂಪದ ಕ್ರಿಯೆ. ಮಂಗಳಾರತಿ, ನೈವೇದ್ಯ, ಅಲಂಕಾರ ಇತ್ಯಾದಿಗಳು ಧರ್ಮದ ಅಭಿವ್ಯಕ್ತಿ. ವಿದ್ಯಾಭ್ಯಾಾಸಕ್ಕೆ ಅನುಕೂಲ ಮಾಡುವುದು, ಜ್ಞಾನೋಪದೇಶ ಮಾಡುವುದು, ಉಪಕಾರ ಇತ್ಯಾದಿಗಳು ಸಾಧನರೂಪದ ಪೂಜೆ.

‘ಆರಾಧನೆ’ = ಸಂತುಷ್ಟೀಕರಣ (ಸಂತೋಷವನ್ನುಂಟು ಮಾಡುವುದು). ಯಾವುದೇ ಕೆಲಸವನ್ನು ಭಗವತ್ಪ್ರೀತಿಕರವಾಗಿ ಮಾಡಿದರೆ ದೈವಿಕತೆ ಉಂಟಾಗುತ್ತದೆ. ಪ್ರತಿಯೊಬ್ಬರೂ ಇನ್ನೊಬ್ಬರ ಪ್ರೀತಿಗಾಗಿಯೇ ಕೆಲಸ ಮಾಡುವುದು. ಯಾರದೋ ಪ್ರೀತಿಗಾಗಿ ಮಾಡುವ ಬದಲು ಆ ಸ್ಥಾನದಲ್ಲಿ ದೇವರನ್ನು ಕೂರಿಸಿಬಿಡಿ. ಉಪನಿಷತ್ತಿನಲ್ಲಿ ತನ್ನದೇ ಪ್ರೀತಿಗಾಗಿ ಮನುಷ್ಯ ವ್ಯವಹರಿಸುತ್ತಾನೆಂಬ ಉಲ್ಲೇಖವಿದೆ (ಆತ್ಮನಸ್ತು ಕಾಮಾಯ ಸರ್ವಂ ಪ್ರಿಯಂ ಭವತಿ…).

ನಮ್ಮ ಮೇಲಿಗಿಂತ ದೇವರ ಮೇಲಿನ ಪ್ರೀತಿಯಿಂದ ಕೆಲಸ ಮಾಡಿದರೆ ಸಾಕು. ದೇವರಲ್ಲಿ ಏನೇನೋ ಕೇಳುವ ಬದಲು ‘ನೀನು ಬಿಟ್ಟು ಬೇರೇನೂ ಬೇಡ’ ಎನ್ನಬೇಕು. ಆಂಜನೇಯ ರಾಮದೇವರಲ್ಲಿ ತನಗೇನೂ ಬೇಡವೆಂದಾಗ ರಾಮ ತನ್ನನ್ನೇ ಆಂಜನೇಯನಿಗೆ ಕೊಟ್ಟುಕೊಂಡ (‘ಸ್ವಾತ್ಮಪ್ರದಾನಮಧಿಕಂ ಪವನಾತ್ಮಜಸ್ಯ…’).

Advertisement

Udayavani is now on Telegram. Click here to join our channel and stay updated with the latest news.

Next