Advertisement

ಉಡುಪಿ: ನಾಲ್ವರು ಐಸೊಲೇಶನ್‌ ವಾರ್ಡ್‌ಗೆ ದಾಖಲು

02:08 AM Apr 07, 2020 | Team Udayavani |

ಉಡುಪಿ: ಜಿಲ್ಲೆಯಲ್ಲಿ ಸೋಮವಾರ ನಾಲ್ವರು ಐಸೊಲೇಶನ್‌ ವಾರ್ಡ್‌ಗೆ ದಾಖಲಾಗಿದ್ದಾರೆ. ಅವರಲ್ಲಿ ಮೂವರು ಪುರುಷರು, ಓರ್ವ ಮಹಿಳೆ ತೀವ್ರ ಉಸಿರಾಟದ ಸಮಸ್ಯೆ ಇರುವವರು. ಜಿಲ್ಲೆಯಲ್ಲಿ ಒಟ್ಟು ಐಸೊಲೇಶನ್‌ ವಾರ್ಡ್‌ಗಳಲ್ಲಿ 23 ಮಂದಿ ಇದ್ದಾರೆ. ಸೋಮವಾರ 9 ಮಂದಿ ಐಸೊಲೇಶನ್‌ ವಾರ್ಡ್‌ನಿಂದ ಬಿಡುಗಡೆಗೊಂಡಿದ್ದರೆ, ಈ ವರೆಗೆ 141 ಮಂದಿ ಬಿಡುಗಡೆಗೊಂಡಿದ್ದಾರೆ.

Advertisement

ಸೋಮವಾರ 20 ಮಂದಿ ನೋಂದಣಿ ಮಾಡಿಕೊಂಡಿದ್ದು, ಇದುವರೆಗೆ ನೋಂದಣಿ ಮಾಡಿಕೊಂಡವರ ಒಟ್ಟು ಸಂಖ್ಯೆ 1,996 ಮಂದಿ. ಅವರಲ್ಲಿ ಸೋಮವಾರ 28 ದಿನಗಳ ನಿಗಾ ಪೂರೈಸಿದವರು 219 ಮಂದಿ. ಇದುವರೆಗೆ ಒಟ್ಟು 184 ಜನರು ಪೂರೈಸಿದ್ದಾರೆ. ಸೋಮವಾರ 433 ಮಂದಿ 14 ದಿನಗಳ ನಿಗಾವನ್ನು ಪೂರೈಸಿದ್ದು, ಇದುವರೆಗೆ 1,580 ಮಂದಿ ನಿಗಾ ಅವಧಿಯನ್ನು ಮುಗಿಸಿದ್ದಾರೆ.
ಇದುವರೆಗೆ ಹೋಂ ಕ್ವಾರಂಟೈನ್‌ನಲ್ಲಿ ದಾಖಲಾದವರು 339, ಸೋಮವಾರ ಆಸ್ಪತ್ರೆ ಕ್ವಾರಂಟೈನ್‌ಗೆ ದಾಖಲಾದವರು 15 ಮಂದಿ. ಇದುವರೆಗೆ ಒಟ್ಟು 63 ಜನರು ಆಸ್ಪತ್ರೆ ಕ್ವಾರಂಟೈನ್‌ಗೆ ದಾಖಲಾಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ ಸೋಮವಾರ 37 ಮಂದಿ ಬಿಡುಗಡೆಗೊಂಡಿದ್ದಾರೆ.

31 ವರದಿ ನೆಗೆಟಿವ್‌
ಸೋಮವಾರ 36 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಇದುವರೆಗೆ 269 ಜನರ ಮಾದರಿ ಸಂಗ್ರಹಿಸಲಾಗಿತ್ತು. ಸೋಮವಾರ ಸ್ವೀಕರಿಸಿದ ಎಲ್ಲ 31 ವರದಿಗಳು ನೆಗೆಟಿವ್‌ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next