Advertisement

ಉಡುಪಿ ಆರ್ಥಿಕತೆ : ಮತ್ತೆ ನಳನಳಿಸಲು ಸರಕಾರದ ಸಹಾಯ ಹಸ್ತ ಬೇಕೇಬೇಕು

08:33 AM May 12, 2020 | Sriram |

ಲಾಕ್‌ಡೌನ್‌ ಮತ್ತಿತರ ಕಾರಣಗಳಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆ ಸ್ತಬ್ಧವಾಗಿದೆ. ಅದು ಮತ್ತೆ ಹದಕ್ಕೆ ಬರಲು ಜನಪ್ರತಿನಿಧಿಗಳ ಪರಿಶ್ರಮ ಮತ್ತು ಸರಕಾರದ ನೆರವು ತೀರಾ ಅಗತ್ಯ. ಈ ಹಿನ್ನೆಲೆಯಲ್ಲಿ ಜಿಲ್ಲೆಗಳ ಕೃಷಿ, ಮೀನುಗಾರಿಕೆ, ಸಣ್ಣ ಕೈಗಾರಿಕೆ, ಉದ್ಯಮಗಳ ಸಹಿತ ವಿವಿಧ ವಲಯಗಳ ಅಗತ್ಯಗಳನ್ನು ವಿವರಿಸುವ ಉದಯವಾಣಿಯ ಸರಣಿ “ನೆರವು ನಿರೀಕ್ಷೆಯಲ್ಲಿ ಉದ್ಯಮ’ ಇಂದಿನಿಂದ ಆರಂಭ.

Advertisement

 ಉದಯವಾಣಿ ಅಧ್ಯಯನ ತಂಡಉಡುಪಿ: ಕೋವಿಡ್‌-19 ಸೋಂಕಿನ ಭಯದಿಂದ ಉಡುಪಿ ಜಿಲ್ಲೆ ಹೊರಬಂದಿದೆ. ಮೇ 4ರ ಬಳಿಕ ಜನಜೀವನ ಬಹುತೇಕ ಸಹಜ ಸ್ಥಿತಿಗೆ ಬಂದಿದೆ. ವಾಣಿಜ್ಯ ಚಟುವಟಿಕೆಗಳೂ ಭಾಗಶಃ ಆರಂಭವಾಗಿವೆ. ಪ್ರವಾಸೋದ್ಯಮ ತಾಣವಾಗಿಯೂ ಗುರು ತಿಸಿಕೊಂಡ ಜಿಲ್ಲೆಯಲ್ಲಿ ಅತಿಥಿ ಉದ್ಯಮ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳು ಮೆಲ್ಲನೆ ಆರಂಭವಾಗಿವೆ. ಇದು ಸಮಾಧಾನದ ಸಂಗತಿ.

ಆದರೆ ಜಿಲ್ಲೆಯ ಆರ್ಥಿಕತೆ ಸುಮಾರು 3 ವರ್ಷಗಳಿಂದ ವೇಗ ಕಳೆದುಕೊಂಡಿದೆ. ಮರಳು ಕೊರತೆಯಿಂದ ಆರಂಭವಾದ ಸಮಸ್ಯೆ ಕೋವಿಡ್‌-19ದವರೆಗೂ ಕುಂಟುತ್ತಾ ಸಾಗಿದೆ. ಹಾಗೆ ಹೇಳುವುದಾದರೆ, ದಕ್ಷಿಣ ಕನ್ನಡ ಮತ್ತು ಉಡುಪಿ- ಎರಡೂ ಜಿಲ್ಲೆಗಳ ಆರ್ಥಿಕತೆಯಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದ ಹೂಡಿಕೆಯ ಪಾತ್ರವೂ ದೊಡ್ಡದು. ಎರಡೂ ಕಡೆಯ ಮರಳು ಸಮಸ್ಯೆಯೂ ಇದಕ್ಕೆ ಕೊಡುಗೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಮರಳು ಕೊರತೆ ಉದ್ಭವಿಸಲಿಲ್ಲ. ಈಗ ಹೊಸ ಪರವಾನಿಗೆ ಸಿಗಬೇಕಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಸಮಸ್ಯೆಗೆ ಪರಿಹಾರ ಎಂಬುದು ಅವರಿವರ ಜಟಾಪಟಿ, ತಾಂತ್ರಿಕ-ತಾಂತ್ರಿಕೇತರ ಕಾರಣ ಗಳ ಮಧ್ಯೆ ಕಳೆದೇ ಹೋಗಿದೆ. ಜನರೂ ಈ ಸಮಸ್ಯೆ ಬಗೆಹರಿಯದು, ಯಾರೂ ಬಗೆ ಹರಿಸಲಾರರು ಎಂಬ ನಿರ್ಧಾರಕ್ಕೆ ಬಂದಿ ದ್ದಾರೆ. ಕೊನೆಗೂ ಎರಡು ವರ್ಷಗಳ ಬಳಿಕ ಸುಮಾರು ಆರು ತಿಂಗಳ ಹಿಂದೆ ತಾತ್ಕಾಲಿಕ ಪರಿಹಾರ ಸಿಕ್ಕರೂ ಮರಳು ಕೊರತೆಯ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ. ಈ ಬೆಳವಣಿಗೆಗಳು ಜಿಲ್ಲೆಯ ಆರ್ಥಿಕತೆಯ ಭಾಗವಾದ ವಾಣಿಜ್ಯ ಚಟು ವಟಿಕೆಗಳಿಗೆ ಭಾರೀ ಹೊಡೆತ ನೀಡಿದವು. ಇದು ಆಳುವವರಿಗೂ ದೊಡ್ಡ ದೆನಿಸಲಿಲ್ಲ; ಆಡಳಿತ ನಡೆ ಸುವವರಿಗೂ ಮಹತ್ವ ದ್ದಾಗಲಿಲ್ಲ. ಹೀಗಾಗಿಯೇ ಜನ ಪ್ರತಿನಿಧಿಗಳು ಸಮ ಸ್ಯೆಗೆ ಸ್ಪಂದಿಸಬೇಕಾದ ವೇಗದಲ್ಲಿ ಸ್ಪಂದಿಸಲಿಲ್ಲ ಎಂಬ ಆರೋಪ ಹಾಗೇ ಉಳಿದಿದೆ.

ಇತ್ತೀಚಿನ 6 ತಿಂಗಳಲ್ಲಿ ವಾಣಿಜ್ಯ ಚಟು ವಟಿಕೆಗಳು ಸ್ವಲ್ಪ ಆರಂಭವಾಗಿದ್ದವು. ಆರ್ಥಿಕತೆ ಉಸಿರಾಡತೊಡಗಿತ್ತು. 3 ತಿಂಗಳ ಹಿಂದೆ ಮರಳಿನ ಕೊರತೆ ಮತ್ತೆ ಆರಂಭವಾಗುವ ಹೊತ್ತಿಗೆ ಕೋವಿಡ್‌-19 ಸಮಸ್ಯೆಯೂ ಉದ್ಭವಿ ಸಿತು. ಜಿಲ್ಲಾಡಳಿತದ ಮುಂಜಾಗ್ರತೆ- ಪರಿಶ್ರಮ, ಜನಪ್ರತಿನಿಧಿಗಳ ಪ್ರಯತ್ನ, ಆರೋಗ್ಯ ಕಾರ್ಯಕರ್ತರ ಸೇವೆ, ಜನರ ಸಹಕಾರದಿಂದ ಉಡುಪಿ ಹಸುರು ಜಿಲ್ಲೆ ಯಾಗಿದ್ದು ಅಭಿನಂದಿಸಬೇಕಾದ ಸಂಗತಿ.

ಸಾರ್ವಜನಿಕ ಸಮಾರಂಭ, ಮದುವೆ ಇತ್ಯಾದಿ ಕಾರ್ಯಕ್ರಮಗಳು, ಅತಿಥಿ ಉದ್ಯಮ ಬಿಟ್ಟು ಬಹುತೇಕ ಉದ್ಯಮ, ಕೈಗಾರಿಕೆಗಳು ಕೆಲವು ನಿಬಂಧನೆಗಳೊಂದಿಗೆ ಆರಂಭ ವಾಗಿವೆ. ಕೃಷಿ ಚಟುವಟಕೆ ಆರಂಭವಾಗಿದ್ದು, ಮೀನುಗಾರಿಕೆಗೂ ಚಾಲನೆ ನೀಡಲಾಗಿದೆ. ಪ್ರವಾಸೋದ್ಯಮಕ್ಕಿನ್ನೂ ಚಾಲನೆ ದೊರೆತಿಲ್ಲ. ಆರಂಭವಾಗದ ಸಾಮೂಹಿಕ ಸಾರಿಗೆ ವ್ಯವಸ್ಥೆ ಮತ್ತೂಂದು ಕೊರತೆ. ಎಲ್ಲ ವಲಯಗಳೂ ಸರಿಯಾಗಿ ಕಾರ್ಯ ನಿರ್ವಹಿಸಿ ವಾಣಿಜ್ಯ ಚಟು ವಟಿಕೆಗಳು ಹೊಸ ಉಮೇದಿನಲ್ಲಿ ನಡೆದು ಆರ್ಥಿಕತೆಯ ರೈಲು ಸರಾಗವಾಗಿ ಚಲಿಸಲು ಕನಿಷ್ಠ ಒಂದೆರಡು ವರ್ಷಗಳಾದರೂ ಬೇಕು. ಈ ನಿಟ್ಟಿನಲ್ಲಿ ಸರಕಾರದ ನೆರವು ಬೇಕೇಬೇಕು. ಜಿಲ್ಲಾಡಳಿತದ ಸಮರ್ಥ ಯೋಜನೆ ಮತ್ತು ಸಮರ್ಪಕ ಅನುಷ್ಠಾನ ಇದಕ್ಕೆ ಪೂರಕ. ಈ ನಿಟ್ಟಿನಲ್ಲಿ ಮಹತ್ವದ ಹೊಣೆಗಾರಿಕೆ ಇರುವುದು ಜನಪ್ರತಿನಿಧಿಗಳ ಮೇಲೆ. ಸಂಸದರು, ಶಾಸಕರ ಸಹಿತ ಎಲ್ಲ ಜನಪ್ರತಿನಿಧಿಗಳು ತಮ್ಮ ಹೊಣೆಗಾರಿಕೆ ಅರಿತು ವಿವಿಧ ಯೋಜನೆಗಳಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಹಣ ತಂದು ಜಿಲ್ಲಾ ಅಭಿವೃದ್ಧಿಗೆ ಎಷ್ಟರಮಟ್ಟಿಗೆ ಶ್ರಮಿಸುತ್ತಾರೆ ಎಂಬುದರ ಮೇಲೆಯೇ ಜಿಲ್ಲೆಯ ಭವಿಷ್ಯ ನಿಂತಿದೆ. ಅದನ್ನೇ ಜನರೂ, ವಿವಿಧ ಆರ್ಥಿಕತೆಯ ವಲಯಗಳು, ಉದ್ಯಮಗಳೂ ನಿರೀಕ್ಷಿಸುತ್ತಿವೆ.

Advertisement

ಉಡುಪಿಯ ಆರ್ಥಿಕತೆಯ ಭಾಗವೆಂದರೆ ಕೃಷಿ, ಮೀನುಗಾರಿಕೆ, ಸ್ಥಳೀಯ ಉದ್ಯಮ (ಸಣ್ಣ ಕೈಗಾರಿಕೆ) ಮತ್ತು ರಿಯಲ್‌ ಎಸ್ಟೇಟ್‌. ಈ ಆರ್ಥಿಕ ಸರಪಳಿಯ ಯಾವುದೇ ಒಂದು ಕೊಂಡಿ ಊನಗೊಂಡರೂ ಸ್ಥಳೀಯ ಆರ್ಥಿಕತೆ ತನ್ನೆಲ್ಲ ಉತ್ಸಾಹವನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಇತ್ತೀಚೆಗಿನ ಉದಾಹರಣೆ ಸಾಕು. ಮರಳು ಕೊರತೆಯಿಂದ ಕಟ್ಟಡ ನಿರ್ಮಾಣ ಕ್ಷೇತ್ರ ಬಸವಳಿಯಿತು. ಮೀನುಗಾರಿಕೆಯೂ ಹವಾಮಾನ ಇತ್ಯಾದಿ ಕಾರಣಗಳಿಂದ ಹಿಂದಿನ ಉತ್ಸಾಹದಲ್ಲಿ ಸಾಗಲಿಲ್ಲ. ಕೃಷಿ ಸಹಿತ ಸ್ಥಳೀಯ ಉದ್ಯಮಗಳು ನಾನಾ ರೀತಿಯ ಸಮಸ್ಯೆ ಎದುರಿಸಿದವು. ಈ ಎಲ್ಲದರ ಪರಿಣಾಮ ವಾಣಿಜ್ಯ ಚಟುವಟಿಕೆ, ಜನಜೀವನದ ಮೇಲೆ ಸಾಕಷ್ಟು ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next