Advertisement
ಬುಧವಾರ ರಾತ್ರಿ ಸುರಿದ ಮಳೆಗೆ ಬ್ರಹ್ಮಾವರ ತಾಲೂಕಿನಲ್ಲಿ ಹಲವು ಮನೆ ಗಳಿಗೆ ಹಾನಿಯಾಗಿದೆ. ಚೇರ್ಕಾಡಿ ಕಮಲಾ ಬಾಯಿ ಅವರ ಮನೆಗೆ ಸಿಡಿಲು ಬಡಿದು ಸುಮಾರು 70 ಸಾವಿರ ರೂ. ನಷ್ಟವಾದರೆ; ಚೇರ್ಕಳ ಶಕುಂತಳಾ ಅವರ ಮನೆಗೆ ಸಿಡಿಲು ಬಡಿದು 25 ಸಾವಿರ ರೂ.; ಬೈಕಾಡಿ ಗ್ರಾಮದ ಜಯಲಕ್ಷ್ಮೀ ಆಚಾರ್ ಅವರ ಮನೆಗೆ 15 ಸಾವಿರ ರೂ.; ಹಾರಾಡಿ ಗ್ರಾಮದ ಸಾಬಿರಾಲಿ ಅವರ ಮನೆಗೆ ಸಿಡಿಲು ಬಡಿದು 25 ಸಾವಿರ ರೂ.; ಕಚ್ಚಾರು ಗ್ರಾಮದ ಜ್ಯೋತಿ ಅವರ ಮನೆಗೆ ಹಾನಿಯಾಗಿ 5 ಸಾವಿರ ರೂ.; ಪಾಂಡೇಶ್ವರ ಗ್ರಾಮದ ರಾಜು ದೇವಾಡಿಗ ಅವರ ದನದ ಕೊಟ್ಟಿಗೆಗೆ ಹಾನಿಯಾಗಿ 25 ಸಾವಿರ ರೂ.; ಚಾಂತಾರು ಗ್ರಾಮದ ಅಣ್ಣಪ್ಪ ನಾಯ್ಕ ಅವರ ಮನೆಯ ದನದ ಕೊಟ್ಟಿಗೆಗೆ ಸುಮಾರು 10 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಉಡುಪಿ ತಾಲೂಕಿನಲ್ಲಿ ಬುಧವಾರ ಹಗಲು-ರಾತ್ರಿ ಉತ್ತಮ ಮಳೆಯಾಗಿತ್ತು. ಅವೈಜ್ಞಾನಿಕ ಕಾಮಗಾರಿಯಿಂದಾಗಿ ದೊಡ್ಡಣಗುಡ್ಡೆ ಗುಂಡಿಬೈಲು- ಪೆರಂಪಳ್ಳಿ ರಸ್ತೆಯ ಜುಮಾದಿ ಕಟ್ಟೆ ಹತ್ತಿರ ಸರಕು ಸಾಮಾನು ಹೊತ್ತ ಲಾರಿಯೊಂದು ಬುಧವಾರ ರಸ್ತೆ ಬದಿಯಲ್ಲಿ ಹೂತು ಹೋಗಿತ್ತು. ಅನಂತರ ಸಂಚಾರಕ್ಕೆ ತೆರವು ಮಾಡಿಕೊಡಲಾಯಿತು. ವಿವಿಧೆಡೆ ಮಳೆ
ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಕಾಪು ಭಾಗಗಳಲ್ಲಿ ಕೂಡ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಕೋಡಿ, ಗಂಗೊಳ್ಳಿ, ಮರವಂತೆ, ಉಪ್ಪುಂದ ದಲ್ಲಿ ಕಡಲಬ್ಬರ ಜೋರಾಗಿದೆ.