Advertisement

ಉಡುಪಿ ಜಿಲ್ಲೆ: ಸೆಲೂನ್‌ ರವಿವಾರ ಬಂದ್‌

12:41 AM Jun 03, 2020 | Sriram |

ಉಡುಪಿ: ಇದುವರೆಗೆ ಸೆಲೂನ್‌ಗಳಲ್ಲಿ ರವಿವಾರ ಜನದಟ್ಟಣೆ ಸಹಜವಾಗಿತ್ತು.ಇನ್ನು ಮುಂದೆ ಸೆಲೂನ್‌ಗಳೂ ರವಿವಾರ ರಜೆ ಸಾರುತ್ತಿವೆ.ಬದಲಾಗಿ ಮಂಗಳವಾರದಂದು ತೆರೆದಿರುತ್ತವೆ. ಇದಕ್ಕೆ ಕಾರಣ ಕೋವಿಡ್-19.

Advertisement

ಕೋವಿಡ್-19 ದೂರವಿಡಲು ಸಾಮಾಜಿಕ ಅಂತರ ಕಾಪಾಡುವುದು ಮುಖ್ಯ.ರವಿವಾರ ಮಕ್ಕಳ ತಲೆಗೂದಲು ತೆಗೆಸಲು ತಾಯಂದಿರೂ ಸೆಲೂನ್‌ಗಳಿಗೆ ಬರುತ್ತಾರೆ. ರಜಾ ದಿನವಾದ್ದರಿಂದ ಇತರ ಉದ್ಯೋಗಸ್ಥರೂ ಬರುತ್ತಾರೆ. ಇದರಿಂದ ಜನದಟ್ಟಣೆ ಜಾಸ್ತಿಯಾಗುತ್ತದೆ.ಈ ಸಮಸ್ಯೆಗೆ ಪರಿಹಾರವೆಂಬಂತೆ ರವಿವಾರ‌ ರಜೆಯನ್ನು ಘೋಷಿಸಲಾಗಿದೆ.

ಈ ಕುರಿತು ಮಂಗಳವಾರ ಸವಿತಾ ಸಮಾಜದ ಸಭೆಯಲ್ಲಿ ನಿರ್ಣಯ ತಳೆಯಲಾಯಿತು. ಅಧ್ಯಕ್ಷತೆಯನ್ನು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಯಂಗಡಿ ವಹಿಸಿದ್ದರು. ಸಮಾಜದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಪ್ರ.ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ ಸಾಲಿಯಾನ್‌ ಆದಿಉಡುಪಿ, ರಾಜ್ಯ ಪ್ರತಿನಿಧಿ ನಿಂಜೂರು ವಿಶ್ವನಾಥ ಭಂಡಾರಿ, ಸವಿತಾ ಸಮಾಜ ಸೌಹಾರ್ದ ಸಹಕಾರಿ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಮಣಿಪಾಲ ಉಪಸ್ಥಿತರಿದ್ದರು. ಏಳು ತಾಲೂಕುಗಳ ಅಧ್ಯಕ್ಷರು, ಪ್ರ.ಕಾರ್ಯದರ್ಶಿಗಳು, ಪದಾಧಿಕಾರಿಗಳು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next