Advertisement

ಉಡುಪಿ ಜಿಲ್ಲಾ ಕಸಾಪ ಚುನಾವಣೆ: ನೀಲಾವರ ಸುರೇಂದ್ರ ಅಡಿಗರಿಗೆ ಹ್ಯಾಟ್ರಿಕ್‌ ಗೆಲುವು

08:39 PM Nov 21, 2021 | Team Udayavani |

ಉಡುಪಿ: ಭಾರೀ ನಿರೀಕ್ಷೆ ಮೂಡಿಸಿದ್ದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಪ್ರಕ್ರಿಯೆ ಮತ್ತು ಫ‌ಲಿತಾಂಶ ರವಿವಾರ ನಡೆದಿದ್ದು, ಸತತ ಮೂರನೆ ಬಾರಿಗೆ ನೀಲಾವರ ಸುರೇಂದ್ರ ಅಡಿಗ ಅವರು ಅಧ್ಯಕ್ಷರಾಗಿ ಗೆಲುವು ಮುಡಿಗೇರಿಸಿಕೊಂಡರು.

Advertisement

ಅಡಿಗ ಅವರು ಸಮೀಪದ ಪ್ರತಿಸ್ಪರ್ಧಿ ಸುಬ್ರಹ್ಮಣ್ಯ ಬಾಸ್ರಿ ಅವರ ವಿರುದ್ಧ 32 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ನೀಲಾವರ ಸುರೇಂದ್ರ ಅಡಿಗ 432, ಸುಬ್ರಹ್ಮಣ್ಯ ಬಾಸ್ರಿ 400, ಸುಬ್ರಹ್ಮಣ್ಯ ಭಟ್‌ 394 ಮತಗಳನ್ನು ಪಡೆದುಕೊಂಡರು.

ಉಡುಪಿಯಲ್ಲಿ ಸುಬ್ರಹ್ಮಣ್ಯ ಬಾಸ್ರಿ ಅವರಿಗೆ, ಸಾಲಿಗ್ರಾಮ, ಕುಂದಾಪುರ ಭಾಗದಲ್ಲಿ ನೀಲಾವರ ಸುರೇಂದ್ರ ಅಡಿಗರಿಗೆ, ಬೈಂದೂರು ಭಾಗದಲ್ಲಿ ಸುಬ್ರಹ್ಮಣ್ಯ ಭಟ್‌ ಹೆಚ್ಚು ಮತ ಪಡೆದಿದ್ದಾರೆ. ಇವು ಅವರ ಸ್ವಕ್ಷೇತ್ರಗಳಾಗಿವೆ.

ಇದನ್ನೂ ಓದಿ:ನಾಲ್ಕು ಕಿವಿಗಳುಳ್ಳ ಬೆಕ್ಕು ಈಗ ಫುಲ್ ಫೇಮಸ್‌

ಜಿಲ್ಲಾ ಚುನಾವಣೆ ಅಧಿಕಾರಿ ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್  ಅವರು ಸುರೇಂದ್ರ ಅಡಿಗರಿಗೆ ಪ್ರಮಾಣಪತ್ರ ವಿತರಿಸಿದರು.

Advertisement

ಆರು ಮತ ತಿರಸ್ಕೃತ
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಮತದಾರರಲ್ಲಿ ಆರು ಮತಗಳು ತಿರಸ್ಕೃತಗೊಂಡಿವೆ. ಒಟ್ಟು 1,987 ಮತಗಳಲ್ಲಿ ಚಲಾವಣೆಯಾದ 1,232 ಮತಗಳಲ್ಲಿ (ಶೇ.62) 1,226 ಮತಗಳು ಕ್ರಮಬದ್ಧವಾಗಿದ್ದವು.

ಯಾವ ಭಾಗದಲ್ಲಿ ಯಾರಿಗೆ ಎಷ್ಟು ಮತ ?

ಕ್ಷೇತ್ರ ಮತಗಳು
ಬ್ರಹ್ಮಾವರ
ಸುರೇಂದ್ರ ಅಡಿಗ – 29
ಸುಬ್ರಹ್ಮಣ್ಯ ಬಾಸ್ರಿ – 52
ಸುಬ್ರಹ್ಮಣ್ಯ ಭಟ್‌- 10

ಕುಂದಾಪುರ
ಸುರೇಂದ್ರ ಅಡಿಗ – 92
ಸುಬ್ರಹ್ಮಣ್ಯ ಬಾಸ್ರಿ – 51
ಸುಬ್ರಹ್ಮಣ್ಯ ಭಟ್‌- 96

ಕಾಪು
ಸುರೇಂದ್ರ ಅಡಿಗ – 29
ಸುಬ್ರಹ್ಮಣ್ಯ ಬಾಸ್ರಿ – 23
ಸುಬ್ರಹ್ಮಣ್ಯ ಭಟ್‌- 24

ಹೆಬ್ರಿ
ಸುರೇಂದ್ರ ಅಡಿಗ – 28
ಸುಬ್ರಹ್ಮಣ್ಯ ಬಾಸ್ರಿ – 37
ಸುಬ್ರಹ್ಮಣ್ಯ ಭಟ್‌ – 43

ಕಾರ್ಕಳ
ಸುರೇಂದ್ರ ಅಡಿಗ – 64
ಸುಬ್ರಹ್ಮಣ್ಯ ಬಾಸ್ರಿ – 9
ಸುಬ್ರಹ್ಮಣ್ಯ ಭಟ್‌ – 13

ಉಡುಪಿ
ಸುರೇಂದ್ರ ಅಡಿಗ – 41
ಸುಬ್ರಹ್ಮಣ್ಯ ಬಾಸ್ರಿ – 137
ಸುಬ್ರಹ್ಮಣ್ಯ ಭಟ್‌ – 57

ಬೈಂದೂರು
ಸುರೇಂದ್ರ ಅಡಿಗ – 37
ಸುಬ್ರಹ್ಮಣ್ಯ ಬಾಸ್ರಿ – 17
ಸುಬ್ರಹ್ಮಣ್ಯ ಭಟ್‌- 127

ಸಾಲಿಗ್ರಾಮ
ಸುರೇಂದ್ರ ಅಡಿಗ – 117
ಸುಬ್ರಹ್ಮಣ್ಯ ಬಾಸ್ರಿ – 74
ಸುಬ್ರಹ್ಮಣ್ಯ ಭಟ್‌- 24

 

Advertisement

Udayavani is now on Telegram. Click here to join our channel and stay updated with the latest news.

Next