Advertisement

ಉಡುಪಿ ಜಿಲ್ಲಾಸ್ಪತ್ರೆ : ಹಿರಿಯ ನಾಗರಿಕರಿಗೆ ಸುಸಜ್ಜಿತ ಐಸಿಯು

03:45 AM Jul 11, 2017 | Team Udayavani |

ಉಡುಪಿ: ಹಿರಿಯ ನಾಗರಿಕರಿಗಾಗಿ ಉಡುಪಿಯ ಅಜ್ಜರಕಾಡಿ ನಲ್ಲಿರುವ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ 10 ಲ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 4 ಬೆಡ್‌ಗಳ ಹವಾನಿಯಂತ್ರಿತ ತೀವ್ರ ನಿಗಾ ಘಟಕವನ್ನು (ಐ.ಸಿ.ಯು.) ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉದ್ಘಾಟಿಸಿದರು.

Advertisement

ಜಿ.ಪಂ. ಪ್ರಶಸ್ತಿ ಮೊತ್ತ ಆಸ್ಪತ್ರೆಗೆ
ಉಡುಪಿ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಚಿಕಿತ್ಸೆಗೆ ಬರುತ್ತಾರೆ. ಹಾಗಾಗಿ ಅವರ ಅನುಕೂಲಕ್ಕಾಗಿ ಐಸಿಯು ವಾರ್ಡ್‌ ಅನ್ನು ನಿರ್ಮಾಣ ಮಾಡಲಾಗಿದೆ. 2015-16ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ಗೆ ಲಭಿಸಿದ್ದ ರಾಷ್ಟ್ರೀಯ ವಯೋ ಸಮ್ಮಾನ್‌ ಪ್ರಶಸ್ತಿಯಲ್ಲಿ ದೊರೆತಿದ್ದ 10 ಲ.ರೂ. ಮೊತ್ತವನ್ನು ಜಿಲ್ಲಾಸ್ಪತ್ರೆಯ ಐಸಿಯು ನಿರ್ಮಾಣಕ್ಕೆ ಹಸ್ತಾಂತರಿಸಲಾಗಿದ್ದು, ಈ ಹಣದಿಂದ ಐಸಿಯು ವಾರ್ಡ್‌ ನಿರ್ಮಿಸಲಾಗಿದೆ ಎಂದು ಪ್ರಮೋದ್‌ ಹೇಳಿದರು.

ಜಿಲ್ಲಾಸ್ಪತ್ರೆಯಾಗಿ ಅಪ್‌ಗೆÅàಡ್‌
ಉಡುಪಿ ಜಿಲ್ಲಾಸ್ಪತ್ರೆಯಾಗಿ ಹೆಸರಿದ್ದರೂ 19 ವರ್ಷದಿಂದ ಮೇಲ್ದರ್ಜೆಗೇರಿರಲಿಲ್ಲ. ಈ ಬಾರಿ ಮೇಲ್ದರ್ಜೆಗೇರಿದ್ದು, 27 ವೈದ್ಯರ ಪೈಕಿ 24 ಹುದ್ದೆ ಭರ್ತಿಯಾಗಿದೆ. 16 ನರ್ಸ್‌ ಇದ್ದದ್ದು 28ಕ್ಕೆ ಏರಿಕೆಯಾಗಿ ಹುದ್ದೆ ಭರ್ತಿಯಾಗಿದೆ. ಪ್ಯಾರ ಮೆಡಿಕಲ್‌ ಸಹಿತ ಉಳಿದ ಎಲ್ಲ ಸಿಬಂದಿಗಳು ಪೂರ್ಣ ಪ್ರಮಾಣದಲ್ಲಿ ನೇಮಕ ಆಗಿದ್ದಾರೆ. ಸಾರ್ವಜನಿಕರು ಸರಕಾರಿ ಆಸ್ಪತ್ರೆಯ ಬಗ್ಗೆ ತಪ್ಪು ಗ್ರಹಿಕೆಗೆ ಒಳಪಡದೆ ಇಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಬಹುದು ಎಂದು ಸಚಿವರು ತಿಳಿಸಿದರು.

ಸಂಚಾರಿ ವಾಹನ ಹಸ್ತಾಂತರ
ಅಂಧತ್ವ ನಿವಾರಣಾ ಯೋಜನೆಯಡಿ ಮಂಜೂರಾದ 19 ಲ.ರೂ. ವೆಚ್ಚದ ಸಂಚಾರಿ ನೇತ್ರ ಚಿಕಿತ್ಸಾ ವಾಹನವನ್ನು ಉದ್ಘಾಟಿಸಿ ಅದರ ಕೀಯನ್ನು ಜಿಲ್ಲಾ ಸರ್ಜನ್‌ ಅವರಿಗೆ ಸಚಿವರು ಹಸ್ತಾಂತರಿಸಿದರು. ನಗರಸಭೆ ಅಧ್ಯಕ್ಷೆ  ಮೀನಾಕ್ಷಿ ಮಾಧವ ಬನ್ನಂಜೆ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಜಿಲ್ಲಾ ಸರ್ಜನ್‌ ಮಧುಸೂಧನ ನಾಯ್ಕ, ಡಿಎಚ್‌ಒ ಡಾ| ರೋಹಿಣಿ, ಸಂಚಾರಿ ನೇತ್ರ ಚಿಕಿತ್ಸಾ ಘಟಕದ ವೈದ್ಯಾಧಿಕಾರಿ ಡಾ| ನಿತ್ಯಾನಂದ ನಾಯಕ್‌ ಹಾಗೂ ಆರೋಗ್ಯ ಇಲಾಖೆಯ ವೈದ್ಯರು, ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next