Advertisement
ಪ್ರಸ್ತಾವನೆಗೆ ಎರಡು ವರ್ಷಜಿಲ್ಲಾಸ್ಪತ್ರೆಯ ಸುಸಜ್ಜಿತ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಎರಡು ವರ್ಷದ ಹಿಂದೆಯೇ ಜಿಲ್ಲಾಸ್ಪತ್ರೆಯಿಂದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗದವರು ಹೊಸ ಕಟ್ಟಡ ರೂಪರೇಖೆ ಗಳನ್ನು ತಯಾರಿಸಿದ್ದರು. ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ಮಂಜೂರಾದ ತಜ್ಞ ವೈದ್ಯರ ಹುದ್ದೆಯೊಂದಿಗೆ ಹೆಚ್ಚುವರಿ ಯಾಗಿ 4, ಶಸ್ತ್ರ ಚಿಕಿತ್ಸಕರ 2, ಅರಿವಳಿಕೆ ತಜ್ಞ 1, ಎಲುಬು ಕೀಲು ತಜ್ಞ 2, ಚರ್ಮ ರೋಗ, ಇಎನ್‌ಟಿ, ಮಾನಸಿಕ ರೋಗ ತಜ್ಞ, ರೇಡಿಯಾಲಜಿಸ್ಟ್ ತಲಾ 2, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ 6, ಶುಶ್ರೂಷಕಿ ಯರು 25, ಕಿರಿಯ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆ ಸೇರಿದಂತೆ ಒಟ್ಟು 60 ಮಂದಿಯ ನೇಮಕವಾಗಬೇಕಿದೆ. ಇನ್ನು ಈಗಾಗಲೇ ವಿವಿಧ ವಾರ್ಡ್, ಶವಾಗಾರ, ಐಸಿಯು ಘಟಕ ನಿರ್ಮಿಸಲಾಗಿದೆ. ರಕ್ತನಿಧಿ ಕೇಂದ್ರವೂ ಇದೆ.
2 ದಶಕಗಳ ಬೇಡಿಕೆಗೆ ಸಿಎಂ ಯಡಿಯೂರಪ್ಪ, ಆರೋಗ್ಯಸಚಿವ ಡಾ| ಸುಧಾಕರ್ ಹಾಗೂ ಹಿಂದಿನ ಆರೋಗ್ಯ ಸಚಿವ ಬಿ. ರಾಮುಲು ಅವರು ಸ್ಪಂದಿಸಿದ್ದಾರೆ. ಜಿಲ್ಲಾ ಸ್ಪತ್ರೆಯನ್ನು 250 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಇಂದು ಸಚಿವ ಸಂಪುಟದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇವೆ.
-ರಘುಪತಿ ಭಟ್, ಶಾಸಕರು, ಉಡುಪಿ