ಉಡುಪಿ: ಮನೆ ಬಿಟ್ಟು 25 ವರ್ಷಗಳಿಂದ ಅಜ್ಞಾತವಾಗಿದ್ದ ವ್ಯಕ್ತಿ ಯೊಬ್ಬರ ಅಂತ್ಯಸಂಸ್ಕಾರವನ್ನು ಕುಟುಂ ಬಿಕರು ಜಿಲ್ಲಾ ನಾಗರಿಕ ಸಮಿತಿಯ ಸಹಕಾ ರದಿಂದ ಬೀಡಿನ ಗುಡ್ಡೆಯ ಹಿಂದೂ ರುದ್ರ ಭೂಮಿಯಲ್ಲಿ ಸೋಮವಾರ ನಡೆಸಿದರು.
Advertisement
ಉಡುಪಿಯ ಹಳೆ ಸರಕಾರಿ ಬಸ್ ನಿಲ್ದಾಣದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು ಮೇ 1ರಂದು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಕೆಲವು ದಿನಗಳ ಬಳಿಕ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಶವವನ್ನು ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ದಾಖಲು ಪ್ರಕ್ರಿಯೆ ನಡೆಸುವಾಗ ವೃದ್ಧರು ಹೆಸರು ಬಾರಕೂರಿನ ಬಾಬು ಮರಕಾಲ ಎಂದು ಹೇಳಿಕೊಂಡಿದ್ದರು.
ಶಿಶುವಿನ ಮೃತದೇಹ ಪತ್ತೆ
ಕಾರ್ಕಳ: ಕಾರ್ಕಳ ನಗರದ ಹೊರವಲಯದ ಪತ್ತೂಂಜಿಕಟ್ಟೆ ಎಂಬಲ್ಲಿ ಕಿರು ಸೇತುವೆ ಬಳಿ ಜೂ. 21ರಂದು ಸಂಜೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಸೇತುವೆ ಪಕ್ಕದಲ್ಲಿರುವ ಮನೆಯವರಿಗೆ ಮಗು ಅಳುವ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಶಬ್ದ ಎಲ್ಲಿಂದ ಕೇಳಿ ಬರುತ್ತಿದೆ ಎಂದು ಶೋಧ ನಡೆಸಿದಾಗ ಕಿರು ಸೇತುವೆ ಕೆಳಭಾಗದಲ್ಲಿ ಮಗು ಇರು ವುದು ಕಂಡು ಬಂದಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ವಿಚಾರಣೆ ನಡೆಸಿ ಆ್ಯಂಬುಲೆನ್ಸ್ ಮೂಲಕ ಮಗುವನ್ನು ಠಾಣೆಗೆ ಕರೆತಂದಿದ್ದಾರೆ. ಅದಾಗಲೇ ಮಗು ಉಸಿರು ನಿಲ್ಲಿಸಿತ್ತು. ಮಳೆಯಿಂದಾಗಿ ಮಗು ಪ್ರಾಣ ಬಿಟ್ಟಿರಬಹುದು ಎನ್ನಲಾಗಿದೆ. ನವಜಾತ ಶಿಶುವನ್ನು ಸೇತುವೆ ಪಕ್ಕ ಬಿಸಾಕಿ ಹೋಗಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಕೊಲ್ಲೂರು: ವಂಡ್ಸೆಯ ಚಕ್ರಾನದಿ ತೀರದ ಕಲ್ಮಾಡಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವು ನೀರಿನಲ್ಲಿ ಪತ್ತೆಯಾಗಿದೆ. ಸುಮಾರು 50-55 ವರ್ಷ ಪ್ರಾಯದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಉಸಿರು ಕಟ್ಟಿ ಸಾವನ್ನಪ್ಪಿರಬಹುದು ಅಥವಾ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. 5 ಅಡಿ ಎತ್ತರ, ಬೊಕ್ಕ ತಲೆಯನ್ನು ಹೊಂದಿದ್ದಾರೆ. ತಿಳಿನೀಲಿ ಬಣ್ಣದ ಗೆರೆಗಳಿರುವ ತುಂಬು ತೋಳಿನ ಅಂಗಿ ಧರಿಸಿದ್ದು, ನೀಲಿ ಬಣ್ಣದ ಅಪೋಲೊ ಎಂಬ ಸ್ಟಿಕ್ಕರ್ ಅಂಟಿಸಿರುವ ಪ್ಯಾಂಟ್ ಧರಿಸಿದ್ದರು. ಕುತ್ತಿಗೆಯಲ್ಲಿ ಕಪ್ಪು ಬಣ್ಣದ ದಾರ ಕಂಡುಬಂದಿದೆ. ವಾರಸು ದಾರರಿದ್ದಲ್ಲಿ ಕೊಲ್ಲೂರು ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Related Articles
ಕುಂದಾಪುರ: ಬೀಜಾಡಿ ಗ್ರಾಮದ ಪಟೇಲರಬೆಟ್ಟಿನ ಉದಯ ಹಾಗೂ ಗೆಳೆಯ ಸುಧೀರ್ ಭಂಡಾರಿ ಅವರ ಮೇಲೆ ಸುರೇಶ್ ಯಾನೆ ರಾಜಾ ಹುಲಿ, ವಿನಯ ಶೆಟ್ಟಿ, ಗೋವರ್ಧನ ಅವರ ತಂಡ ಹಲ್ಲೆ ನಡೆಸಿದೆ. ಪ್ರಶ್ನಿಸಿದಾಗ ಜೀವಬೆದರಿಕೆ ಹಾಕಿದ್ದು ಗಾಯಾಳುಗಳಿಬ್ಬರೂ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಅರೆಶಿರೂರು: ಮಹಿಳೆ ನಾಪತ್ತೆಬೈಂದೂರು: ಇಲ್ಲಿನ ಅರೆಶಿರೂರು ದ್ಯಾಸಮಕ್ಕಿ ನಿವಾಸಿ ಭಾರತಿ ಮರಾಠಿ (40) ಅವರು ನಾಪತ್ತೆಯಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು ಮಾನಸಿಕವಾಗಿ ನೊಂದಿದ್ದರು. ಜೂ. 19ರಂದು ಅಪರಾಹ್ನ ಮನೆಯಿಂದ ಹೊರ ಹೋದವರು ಇಲ್ಲಿಯ ವರೆಗೂ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಕೋಲು ಮುಖ, ಗೋಧಿ ಮೈಬಣ್ಣ ಹೊಂದಿರುವ ಇವರು ಹಳದಿ ಬಣ್ಣದ ಬಟ್ಟೆ ಧರಿಸಿದ್ದರು ಎಂದು ಪತಿ ನರಸಿಂಹ ಮರಾಠಿ ನೀಡಿದ ದೂರಿನಂತೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಕುಂದಾಪುರ: ಅಸೋಡು ಗ್ರಾಮ ಚಿಕ್ಕದೇವಸ್ಥಾನದ ಹತ್ತಿರದ ನಿವಾಸಿ ಬಚ್ಚ ಮೊಗವೀರ (95) ಅವರು ಮನೆಯ ಪಕ್ಕದಲ್ಲಿರುವ ಗೇರು ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.