Advertisement

ಉಡುಪಿ ಜಿಲ್ಲೆ: ಕೋವಿಡ್‌ ಸೋಂಕು, ಸಕ್ರಿಯ ಶೂನ್ಯ

11:56 PM Apr 10, 2022 | Team Udayavani |

ಉಡುಪಿ: ಜಿಲ್ಲೆಯಾದ್ಯಂತ ಕೋವಿಡ್‌ ಸೋಂಕು ಮತ್ತು ಸಕ್ರಿಯ ಪ್ರಕರಣಗಳು ಶೂನ್ಯವಾಗಿವೆ. ಕಳೆದ ಮೂರ್‍ನಾಲ್ಕು ದಿನದಿಂದ ಹೊಸ ಪ್ರಕರಣ ಪತ್ತೆಯಾಗಿಲ್ಲ.

Advertisement

ಈ ವರ್ಷದ ಆರಂಭದಿಂದ ಒಟ್ಟು 2,17,195 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ಪೈಕಿ 18,505 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. 53 ಮಂದಿ ಸಾವನ್ನಪ್ಪಿದ್ದರು.

ಇಳಿಮುಖ
2021ರ ಮೇ, ಜೂನ್‌ನಲ್ಲಿ ಕೋವಿಡ್‌ ಗರಿಷ್ಠ ಪ್ರಮಾಣಕ್ಕೆ ತಲುಪಿತ್ತು. ವರ್ಷಾಂತ್ಯದ ವೇಳೆಗೆ ಇಳಿಮುಖವಾಯಿತು. ಆದರೆ ಜನವರಿಯಲ್ಲಿ ಸೋಂಕು ಪ್ರಮಾಣ ಮತ್ತೆ ಹೆಚ್ಚಳವಾಯಿತು. ಜ. 1ರಿಂದ 31ರ ವರೆಗೆ ಜಿಲ್ಲೆಯಲ್ಲಿ 14,903 ಮಂದಿಗೆ ಸೋಂಕು ಪತ್ತೆಯಾಗಿತ್ತು. ಇದು ಮೊದಲೆರಡು ಅಲೆಗಳಿಗಿಂತಲೂ ಹೆಚ್ಚಾಗಿತ್ತು. ಫೆಬ್ರವರಿಯಲ್ಲಿ 2,535 ಹಾಗೂ ಮಾರ್ಚ್‌ ತಿಂಗಳಲ್ಲಿ 40 ಮಂದಿಗಷ್ಟೇ ಸೋಂಕು ದೃಢಪಟ್ಟಿತ್ತು.

ಮುನ್ನೆಚ್ಚರಿಕೆ ಕ್ರಮದಿಂದ ಸೋಂಕು ನಿಯಂತ್ರಣ
ಜಿಲ್ಲಾಡಳಿತದ ಸಹಕಾರ, ಮಾರ್ಗದರ್ಶನ, ಆರೋಗ್ಯ ಇಲಾಖೆ ಸಹಿತ ವಿವಿಧ ಇಲಾಖೆ ಸಿಬಂದಿಯ ಶ್ರಮ, ಜನಪ್ರತಿನಿಧಿಗಳ ಕಾಳಜಿ, ಸಂಘ-ಸಂಸ್ಥೆಗಳ ಸಹಕಾರದಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಅನುಸರಿಸಿದ ಕಾರಣ ಸೋಂಕು ನಿಯಂತ್ರಣ ಸಾಧ್ಯವಾಗಿದೆ. ಮೂರನೇ ಅಲೆಯಲ್ಲಿ ಸೋಂಕು ಹರಡುವ ತೀವ್ರತೆ ಹೆಚ್ಚಾಗಿ ಕಂಡುಬಂದರೂ ಸೋಂಕುಪೀಡಿತರ ಆರೋಗ್ಯದ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರಲಿಲ್ಲ.

ದ.ಕ.: ಇಬ್ಬರಿಗೆ ಕೊರೊನಾ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಇಬ್ಬರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

Advertisement

ಇಬ್ಬರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 8 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ. 0.43ರಷ್ಟಿದೆ.

ಕಾಸರಗೋಡು: ಶೂನ್ಯ ಪಾಸಿಟಿವ್‌
ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ ಕೊರೊನಾ ಶೂನ್ಯ ಪಾಸಿಟಿವ್‌ ದಾಖಲಾಗಿದೆ. 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದಲ್ಲಿ 223 ಪ್ರಕರಣ
ಕೇರಳದಲ್ಲಿ ರವಿವಾರ 223 ಮಂದಿಗೆ ಕೊರೊನಾ ದೃಢಪಟ್ಟಿದೆ.299 ಮಂದಿ ಗುಣಮುಖರಾಗಿದ್ದಾರೆ. 2,211 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿತ್ತು. ಈ ಎಲ್ಲ ಕ್ರಮಗಳಿಂದಾಗಿ ಸೋಂಕು ನಿಯಂತ್ರಣ ಸಾಧ್ಯವಾಗಿದೆ.
– ಡಾ| ನಾಗಭೂಷಣ್‌ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next