Advertisement
ಇಲ್ಲಿನ ಹೆಗ್ಡೆಹಕ್ಲು ಬಳಿ ನಿಯೋಜಿಸಲಾಗಿರುವ ಪೊಲೀಸ್ ವ್ಯವಸ್ಥೆ , ಚೆಕ್ ಪೋಸ್ಟ್ ನಿರ್ವಹಣೆ ಅಲ್ಲದೆ ಶಿವಮೊಗ್ಗ ಜಿಲ್ಲೆಯಿಂದ ಈ ಭಾಗಕ್ಕೆ ಆಗಮಿಸುವ ವಾಹನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರಲ್ಲದೆ ಯಾವುದೇ ಕಾರಣಕ್ಕೂ ಇತರೆ ವಾಹನ ಅಥವಾ ವ್ಯಕ್ತಿಗಳು ಒಳಪ್ರವೇಶಿಸದಂತೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ಕೊಲ್ಲೂರು ಠಾಣಾಧಿಕಾರಿ ಮಹಾದೇವ ಭೋಂಸ್ಲೆ ಅವರಿಗೆ ಸೂಚಿಸಿದರು. ಅನ್ಯ ಜಿಲ್ಲೆಗಳಿಂದ ಜನರು ನುಸುಳದಂತೆ ನಿಗಾ ವಹಿಸುವಂತೆ ಎಚ್ಚರಿಸಿದರು. ನಿಗದಿತ ಅವಧಿ ಮೀರಿ ಸ್ಥಳೀಯ ನಿವಾಸಿಗಳು ಸಂಚರಿಸುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಿದರು. ಈ ವೇಳೆ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿ ಉಪಸ್ಥಿತರಿದ್ದು, ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿನ ದೈನಂದಿನ ಪೂಜಾ ಕ್ರಮ ಹಾಗೂ ಭಕ್ತರಿಗೆ ವಿಧಿಸಲಾಗಿರುವ ನಿರ್ಬಂಧಗಳ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ ಹಾಗೂ ಉಪ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಅವರೊಡನೆ ಸಮಾಲೋಚನೆ ನಡೆಸಿದರು.