Advertisement

ಉಡುಪಿ ಜಿಲ್ಲೆಯ ಅಭಿವೃದ್ಧಿ ಕಾಮಗಾರಿ 8.60 ಕೋ.ರೂ. ಬಿಡುಗಡೆ: ಸಚಿವ ರವಿ

09:44 AM Oct 02, 2019 | sudhir |

ಉಡುಪಿ: ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 16 ಕೋ.ರೂ. ಅನುದಾನದಲ್ಲಿ 8.60 ಕೋ.ರೂ. ಬಿಡುಗಡೆಯಾಗಿದೆ ಎಂದು ಸಚಿವ ಸಿ.ಟಿ. ರವಿ ಹೇಳಿದರು.

Advertisement

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ವಿಶ್ವ ಪಾರಂಪರಿಕ ತಾಣಗಳು, ನ್ಯಾಷನಲ್‌ ಪಾರ್ಕ್‌ಗಳು, ಜಲಪಾತಗಳು ಸಹಿತ ಸುಮಾರು 1,500ಕ್ಕೂ ಅಧಿಕ ಕೇಂದ್ರ, ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿರುವ ಪಾರಂಪರಿಕ ತಾಣಗಳಿವೆ. ಇವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು. ಜನರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲು ಯೋಜನೆಗಳನ್ನು ರೂಪಿಸಲಾಗುವುದು. ಸಂಸ್ಕೃತಿಯನ್ನು ಪಸರಿಸುವ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಉದ್ಯೋಗಾವಕಾಶಗಳ ಭರ್ತಿಗೆ ಯತ್ನ
ಸಚಿವನಾದ ಅನಂತರ ಇಲ್ಲಿಯವರೆಗೆ 12 ಜಿಲ್ಲೆಗಳಿಗೆ ಪ್ರವಾಸ ಮಾಡಿ ವಿವಿಧ ಸಮಸ್ಯೆಗಳನ್ನು ಆಲಿಸಿದ್ದೇನೆ. ರಾಜ್ಯದ ವಿವಿಧ ಇಲಾಖೆಗಳಲ್ಲಿನ ಶೇ. 81ರಷ್ಟು ಉದ್ಯೋಗಾವಕಾಶಗಳು ಖಾಲಿಯಿವೆ. ಈ ಬಗ್ಗೆ ಪರಿಣಿತರಲ್ಲಿ ಚರ್ಚಿಸಿ ಶೀಘ್ರ ಉದ್ಯೋಗಾವಕಾಶಗಳ ಭರ್ತಿಗೆ ಯತ್ನಿಸಲಾಗುವುದು ಎಂದರು.

ಅಂತಾರಾಷ್ಟ್ರೀಯ ಕ್ರೀಡೆಯಾಗಿ ಕಂಬಳ
ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಯೋಜನೆಗಳ ಉತ್ತೇಜನಕ್ಕೆ ಹಲವಾರು ಯೋಜನೆಗಳು ಆರಂಭಿಕ ಹಂತದಲ್ಲಿವೆ. ಮುಖ್ಯವಾಗಿ ಕಂಬಳವನ್ನು ಅಂತಾರಾಷ್ಟ್ರೀಯ ಕ್ರೀಡೆಯನ್ನಾಗಿ ರೂಪಿಸಲು ವಿಪುಲ ಅವಕಾಶ ಇದೆ. ಪ್ರವಾಸಿಗರಿಗೆ ಇದರತ್ತ ಮತ್ತಷ್ಟು ಆಕರ್ಷಿತರಾಗುವಂತೆ ಮಾಡಬೇಕು. ರಾಜ್ಯಾದ್ಯಂತ ರೂಪುರೇಷೆ ಸಿದ್ಧಪಡಿಸಿ, ಪ್ರವಾಸಿಗರು ಯಾವ ಸಮಯದಲ್ಲಿ ಬಂದರೆ ಅನುಕೂಲ ಎಂಬ ಬಗ್ಗೆ ಮಾಹಿತಿಯನ್ನು ಆಯಾಯ ಪ್ರದೇಶವಾರು ರೂಪಿಸಲಾಗುವುದು.

ಪ್ರವಾಸಿ ತಾಣಗಳ ಅಭಿವೃದ್ಧಿ
ಪ್ರವಾಸೋದ್ಯಮಕ್ಕೆ ಸಮಗ್ರ ಯೋಜನೆ ರೂಪಿಸುವ ನಿಟ್ಟಿನಲ್ಲಿ ಧಾರ್ಮಿಕ ಕ್ಷೇತ್ರಗಳ ಜತೆಗೆ ಇರುವ ಪ್ರವಾಸಿ ತಾಣಗಳನ್ನು ಸಂಪರ್ಕಿಸುವಂತೆ ಮಾಡಲಾಗುವುದು. ಈ ಮೂಲಕ ವ್ಯಾಪಾರ ವಹಿವಾಟು ಸಹಿತ ಇತರ ಅಭಿವೃದ್ಧಿ ಚಟುವಟಿಕೆಗಳು ಚುರುಕುಗೊಳ್ಳುವಂತೆ ಮಾಡಲಾಗುವುದು. ಐತಿಹಾಸಿಕ ಸ್ಮಾರಕ ತಾಣ ಮತ್ತು ಸ್ಮಾರಕಗಳನ್ನು ಉಳಿಸಲು ಅವುಗಳ ನಿರ್ವಹಣೆಯನ್ನು ಕೆಲವು ಎನ್‌ಜಿಒ ಸಂಸ್ಥೆಗಳಿಗೆ ನೀಡಲಾಗುವುದು.

Advertisement

ಪರಿಹಾರ ಪ್ರಕ್ರಿಯೆ ಶೀಘ್ರ ಪೂರ್ಣ
ಅತಿವೃಷ್ಟಿ ಹಾನಿಗೀಡಾದ 10 ರಾಜ್ಯಗಳಿಗೆ ಮಧ್ಯಂತರ ಪರಿಹಾರ ನೀಡಲಾಗಿದೆ. ಫ‌ಲಾನುಭವಿಗಳಿಗೆ ನೇರವಾಗಿ ಸವಲತ್ತು ಸಿಗುವಂತಾಗಲು ಅವರ ಖಾತೆಗೆ ನೇರವಾಗಿ ಜಮೆ ಮಾಡುವ ಕೆಲಸ ನಡೆಯುತ್ತಿದೆ. ಈ ಪ್ರಕ್ರಿಯೆ ಎಲ್ಲ ರಾಜ್ಯಗಳಿಗೂ ಅನ್ವಯವಾಗಲಿದ್ದು, ಯಾರಿಗೂ ತಾರತಮ್ಯ ಮಾಡಲಾಗಿಲ್ಲ. ಮತ್ತಷ್ಟು ಪರಿಹಾರಕ್ಕೆ ಬೇಡಿಕೆ ಬಂದಲ್ಲಿ ಮುಖ್ಯಮಂತ್ರಿಗಳು, ಸಚಿವ, ಶಾಸಕರೊಂದಿಗೆ ಪ್ರಧಾನಿ ಇತೆಗೆ ಚರ್ಚಿಸಲೂ ಸಿದ್ಧ ಎಂದರು.
ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next