Advertisement

Udupi ಮಾನಹಾನಿ, ಜೀವ ಬೆದರಿಕೆ: ಆರೋಪ

01:08 AM Sep 13, 2023 | Team Udayavani |

ಉಡುಪಿ: ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಮಾನಹಾನಿ ಮಾಡಿದ್ದು ಮಾತ್ರವಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಜಿಲ್ಲಾ ಎಸ್‌ಪಿಗೆ ದೂರು ಸಲ್ಲಿಸಿದ್ದೇನೆ ಎಂದು ಬಿಜೆಪಿ ಅಲ್ಪಸಂಖ್ಯಾಕರ ಮೋರ್ಚಾದ ಜಿಲ್ಲಾಧ್ಯಕ್ಷ ದಾವುದ್‌ ಅಬುಬಕ್ಕರ್‌ ತಿಳಿಸಿದರು.

Advertisement

ನಕಲಿ ಚಿನ್ನ ಅಡವಿಟ್ಟು 20.62 ರೂ. ವಂಚಿಸಿರುವ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಈ ಸಂಘದ ಸದಸ್ಯನೂ ಅಲ್ಲ ಮತ್ತು ಸಂಘದ ಕಚೇರಿ ಎಲ್ಲಿದೆ ಎಂಬುದೇ ನನಗೆ ತಿಳಿದಿಲ್ಲ. ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸೆ.5ರಂದು ನಾನು ಬೆಂಗಳೂರಿನಲ್ಲಿದ್ದೆ. ನನ್ನ ಕಾರು ಮಾರಾಟ ಮಾಡುವ ಸಂಬಂಧ ಮಹಮ್ಮದ್‌ ರಿಯಾಜ್‌ ಎಂಬುವರೊಂದಿಗೆ ಮಾತನಾಡಿದ್ದೆ. ನಾನು ಬೆಂಗಳೂರಿನಲ್ಲಿದ್ದಾಗ ಅವರು ನನ್ನ ಮನೆಗೆ ಹೋಗಿ ಕಾರಿನ ಕೀ ತೆಗೆದುಕೊಂಡು ಹೋಗಿದ್ದಾರೆ. ಅನಂತರ ಏನಾಯಿತು ಎಂಬುದು ಗೊತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿ ಅಲ್ಪಸಂಖ್ಯಾಕರ ಮೋರ್ಚಾದ ಗ್ರೇಟಾ, ಅಪ್ಸರ್‌ ಉಚ್ಚಿಲ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next