ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಶ್ಮಶಾನಕ್ಕೆ ನಿವೇಶನ, ಗ್ರಾ.ಪಂ. ವ್ಯಾಪ್ತಿಯಲ್ಲಿ ಅವಶ್ಯವಿರುವುದಕ್ಕೆ ನಿವೇಶನವನ್ನು ಮಂಜೂರು ಮಾಡಲಾಯಿತು. ಸೀರೆಹೊಳೆಗೆ ಸೇತುವೆ, ವಿದ್ಯುತ್ ಲೈನ್ ಹಾದುಹೋಗುವ ಸಮಸ್ಯೆಗೆ ಪರಿಹಾರ ಸೂಚಿಸಲಾಯಿತು. ವೈಯಕ್ತಿಕ ಮತ್ತು ಸಾಮಾಜಿಕ, ಶೈಕ್ಷಣಿಕ ವಿಚಾರಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.
Advertisement
ಶಿಕ್ಷಕರ ಸಮಸ್ಯೆ ನಿವಾರಣೆಗೆ ಆದೇಶಮಾಣಿಲ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ 84 ವಿದ್ಯಾರ್ಥಿಗಳಿದ್ದು, ಓರ್ವ ಶಿಕ್ಷಕ ಮಾತ್ರ ಇರುವುದಾಗಿ ದೂರ ಬಂದಿತ್ತು. ಬಂಟ್ವಾಳ ಕ್ಷೇತ್ರ ಶಿಕ್ಷಣಾ ಧಿಕಾರಿಯಿಂದ ಸ್ಪಷ್ಟನೆ ಕೇಳಿದಾಗ ಅನುದಾನಿತ ಶಾಲೆಗೆ ಯಾವುದೇ ಶಿಕ್ಷಕರನ್ನು ಹಾಕುವಂತಿಲ್ಲ ಎಂದರು. ಈ ಬಗ್ಗೆ ತತ್‌ಕ್ಷಣ ಆದೇಶವನ್ನು ಆಡಳಿತ ಮಂಡಳಿಗೆ ನೀಡಬೇಕಿತ್ತು ಎಂದು ಜಿಲ್ಲಾ ಧಿಕಾರಿ ಹೇಳಿದರು.
ಖಾಸಗಿ ವ್ಯಕ್ತಿಯೊಬ್ಬರಿಗೆ 25 ಎಕ್ರೆ ಜಮೀನು ಇದ್ದರೂ ಮತ್ತಷ್ಟು ಜಾಗ ಒತ್ತುವರಿ ಮಾಡುತ್ತಿದ್ದಾರೆ ಎಂಬ ಬಗ್ಗೆ ದೂರು ಕೇಳಿ ಬಂತು. ತಹಶೀಲ್ದಾರರು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಿಸಬೇಕು. ಒತ್ತುವರಿ ತೆರವು ಮಾಡಿ ತಹಶೀಲ್ದಾರರಿಗೆ ಜಾಗ ಹಸ್ತಾಂತರಿಸಬೇಕು. ಈ ಬಗ್ಗೆ ವಿಟ್ಲ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ತೆರಿಗೆ ಪಾವತಿಸಬೇಡಿ!
ಪಾರಂಪರಿಕವಾಗಿ ಬಂದ ಹಲವು ಮನೆಗಳು, ಕೃಷಿಕರು ಕೃಷಿ ಉದ್ದೇಶಕ್ಕಾಗಿ ಬಳಸುವ ಕಟ್ಟಡಗಳ ದಾಖಲೆ ಬದಲಾವಣೆಗೆ ಭೂಪರಿವರ್ತನೆ ಹಾಗೂ 9/11 ಇಲ್ಲದೇ ಹೋದಲ್ಲಿ ಪಂಚಾಯತ್‌ನಿಂದ ಕದ ಸಂಖ್ಯೆ ಬದಲಾವಣೆ ಮಾಡುತ್ತಿಲ್ಲ ಎಂಬ ಸಮಸ್ಯೆಯನ್ನು ಜಿಲ್ಲಾ ಧಿಕಾರಿಗಳಿಗೆ ತಿಳಿಸಿದಾಗ
ಸಮಸ್ಯೆ ಸರಿಯಾಗುವ ತನಕ ತೆರಿಗೆ ಪಾವತಿಸುವುದು ಬೇಡ ಎಂದರು.
Related Articles
ಕೇಂದ್ರದ ಕಟ್ಟಡ ನವೀಕರಿಸಲು ಸೂಚನೆ ನೀಡಲಾಗು ವುದು. ವಿಟ್ಲ ಸಮುದಾಯ ಆಸ್ಪತ್ರೆಯನ್ನು ಮೇಲ್ದರ್ಜೆ ಗೇರಿಸಲಾಗುವುದು ಎಂದು ಡಿಸಿ ಹೇಳಿದರು.
Advertisement
ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ವಿವಿಧ ಇಲಾಖೆಗಳ ಸವಲತ್ತುಗಳನ್ನು ವಿತರಿಸಲಾಯಿತು.
ಉಪ್ಪುಂದ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ ಕಿರಿಮಂಜೇಶ್ವರ ಗ್ರಾಮದಲ್ಲಿ ಜ. 21ರಂದು ನಾಗೂರು ಒಡೆಯರ ಮಠ ಶ್ರೀಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆಯಿತು. ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಗೀತಾ ಉದ್ಘಾಟಿಸಿದರು. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಧ್ಯಕ್ಷತೆ ವಹಿಸಿದ್ದರು.
ರಾ.ಹೆ. 66ರ ಯುಟರ್ನ್, ಚರಂಡಿ ಸಮಸ್ಯೆ, ಸರ್ವಿಸ್ ರಸ್ತೆ, ಶ್ಮಶಾನ ಸಮಸ್ಯೆ, ಕೊಡೇರಿ ಬಂದರು ಸಮಸ್ಯೆ ಇತ್ಯಾದಿಗಳಿಗೆ ಸಂಬಂಧಿಸಿ 44 ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಂದ ಸ್ವೀಕರಿಸಿದರು.
ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಪ್ರೊಬೆಷನರಿ ಐಎಎಸ್ ಅಧಿಕಾರಿ ಯತೀಶ, ಡಿಎಫ್‌ಒ ಉದಯ, ಅಂತಾರಾಷ್ಟ್ರೀಯ ಯೋಗಪಟು ಧ್ವನಿ ಮರವಂತೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ಬೈಂದೂರು ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ ಸ್ವಾಗತಿಸಿದರು. ಕುಂದಾಪುರ ಸಹಾಯಕ ಕಮಿಷನರ್ ರಾಜು ಕೆ. ಪ್ರಸ್ತಾವನೆಗೈದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು.