Advertisement

ಜಾತ್ರೆ ಕರಪತ್ರದಲ್ಲಿ ಅಭ್ಯರ್ಥಿಗಳ ಫೋಟೊ ಮುದ್ರಿಸುವಂತಿಲ್ಲ : Udupi DC

01:26 AM Apr 06, 2023 | Team Udayavani |

ಮಣಿಪಾಲ: ಚುನಾವಣೆ ನೀತಿ ಸಂಹಿತೆ ಉಲ್ಲಂ ಸಿ ಅಪಪ್ರಚಾರ, ಸುಳ್ಳು ಮಾಹಿತಿ, ಕೋಮುಗಲಭೆ ಸೃಷ್ಟಿಸುವಂತಹ ಕರಪತ್ರ, ಪೋಸ್ಟರ್‌ ಮತ್ತು ಬ್ಯಾನರ್‌ ಮುದ್ರಿಸಿದಲ್ಲಿ ಅಂತಹ ಮುದ್ರಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಎಚ್ಚರಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಪ್ರಿಂಟಿಂಗ್‌ ಪ್ರಸ್‌ ಮಾಲಕರು, ಫ್ಲೆಕ್ಸ್‌ ಮುದ್ರಕರೊಂದಿಗೆ ಸಭೆ ನಡೆಸಿದ ಅವರು, ಕರಪತ್ರ, ಪೋಸ್ಟರ್‌ ಬ್ಯಾನರ್‌ ಮುಂಭಾಗದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಮೊಬೈಲ್‌ ಸಂಖ್ಯೆ ಮತ್ತು ಮುದ್ರಣ ಪ್ರತಿಗಳ ಸಂಖ್ಯೆ ನಮೂದಿಸಬೇಕು. ಧರ್ಮ, ಜಾತಿ, ಭಾಷೆ, ಜನರ ಭಾವ ನೆಗೆ ಧಕ್ಕೆಯಾಗುವಂತಹ ವಿಷಯ ಗಳನ್ನು ಮುದ್ರಿಸಬಾರದು. ಅಗತ್ಯ ಪರವಾನಿಗೆ ಪಡೆದು ಮುದ್ರಿಸಬೇಕು. ಜಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಹಾಕಬಾರದು. ಮುದ್ರಣ ವೆಚ್ಚವನ್ನು ಅಭ್ಯರ್ಥಿ ಅಥವಾ ಪಕ್ಷದ ಖರ್ಚು ವೆಚ್ಚಗಳಿಗೆ ಸೇರ್ಪಡೆ ಮಾಡಲಿದ್ದು, ಅಗತ್ಯವಿದ್ದಲ್ಲಿ ರಶೀದಿ ಗಳನ್ನು ಹಾಜರುಪಡಿಸಬೇಕು ಎಂದರು.

ಮಾಸ್ಟರ್‌ ಟ್ರೆçನರ್‌ ಡಾ| ಅಶೋಕ್‌ ಕಾಮತ್‌, ಆಯೋಗವು ಸೂಚಿಸಿರುವ ಮಾನದಂಡಗಳ ಕುರಿತು ಮಾಹಿತಿ ನೀಡಿದರು. ಜಿ.ಪಂ. ಸಿಇಒ ಪ್ರಸನ್ನ, ಎಸ್ಪಿ ಅಕ್ಷಯ್‌ ಹಾಕೇ ಮಚ್ಚೀಂದ್ರ, ಐಎಎಸ್‌ ಅಧಿಕಾರಿ ಯತೀಶ್‌ ಉಪಸ್ಥಿತರಿದ್ದರು.

ಕರಪತ್ರಗಳಲ್ಲಿ ಯಾವುದೇ ರೀತಿ ಯಲ್ಲೂ ಕೋಮು ಗಲಭೆ ಸೃಷ್ಟಿಸುವಂಥ ಅಂಶಗಳಿರಬಾರದು. ಇದನ್ನು ಉಲ್ಲಂ ಸಿ ದರೆ ಕಠಿನ ಕ್ರಮ ಅನಿವಾರ್ಯ.
-ಕೂರ್ಮಾ ರಾವ್‌ ಎಂ., ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next