Advertisement

Udupi: ಡಿ. 31ರಂದು ಕೋಟಿ ತುಳಸೀ ಅರ್ಚನೆ

10:07 AM Dec 29, 2023 | Team Udayavani |

ಉಡುಪಿ: ಪರ್ಯಾಯ ಶ್ರೀ ಕೃಷ್ಣಪುರ ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಲದ ಅಂಗಸಂಸ್ಥೆಯಾದ ತುಶಿಮಾಮ ಕಡಿಯಾಳಿ ನೇತೃತ್ವದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಜಿಲ್ಲಾ ಸಮಸ್ತ ಬ್ರಾಹ್ಮಣ ವಲಯದ ಸಹಕಾರದೊಂದಿಗೆ ಡಿ.31ರ ಬೆಳಗ್ಗೆ 7.30ರಿಂದ 12 ಗಂಟೆಯವರೆಗೆ ರಾಜಾಂಗಣದಲ್ಲಿ ಶ್ರೀ ಕೃಷ್ಣ ದೇವರಿಗೆ ವಿಷ್ಣು ಸಹಸ್ರನಾಮಾವಳಿ ಸಹಿತ ಕೋಟಿ ತುಳಿಸೀ ಅರ್ಚನೆ ನಡೆಯಲಿದೆ ಎಂದು ತುಶಿಮಾಮ ಕಾರ್ಯಾಧ್ಯಕ್ಷ ಪ್ರದೀಪ್‌
ಕುಮಾರ್‌ ಕಲ್ಕೂರ್‌ ಹೇಳಿದರು.

Advertisement

ಅರ್ಚನೆಯ ದಿನ ಬೆಳಗ್ಗೆ 7.30ಕ್ಕೆ ಮೆರವಣಿಗೆಯ ಮೂಲಕ ಶ್ರೀ ಕೃಷ್ಣನ ಮೂರ್ತಿಯನ್ನು ರಾಜಾಂಗಣಕ್ಕೆ ತಂದು, ಪುಷ್ಪಾಲಂಕೃತ ವೇದಿಕೆಯಲ್ಲಿ ಪ್ರತಿಷ್ಠಾಪಿಸಿ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು
ಉದ್ಘಾಟಿಸಲಿದ್ದಾರೆ. ಪುಷ್ಪಾಲಂಕೃತ ಮಂಟಪದಲ್ಲಿ ಅಷ್ಟ ಮಠದ ಯತಿಗಳು ತುಳಸೀ ಅರ್ಚನೆಯನ್ನು ನೆರವೇರಿಸಲಿದ್ದಾರೆ. 2,500ಕ್ಕೂ ಅಧಿಕ ವಿಪ್ರಬಂಧುಗಳು ಭಾಗವಹಿಸಿ ಒಕ್ಕೊರಲಿನಿಂದ ನಾಮಾವಳಿ ಪಠಿಸುವ ಮೂಲಕ ತುಳಸೀ ಅರ್ಚನೆ ನಡೆಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

2024ರ ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆ ನಡೆಯಲಿದೆ. ಆ ದಿವ್ಯಕೈಂಕರ್ಯ ನಿರ್ವಿಘ್ನವಾಗಿ ನಡೆದು ಲೋಕಕಲ್ಯಾಣಕ್ಕೆ ನಾಂದಿಯಾಗುವ ಮೂಲಕ ಭಾರತವು ವಿಶ್ವ ಶ್ರೇಷ್ಠವೆನಿಸಲಿ ಮತ್ತು ಶ್ರೀ ರಾಮದೇವರ ಆದರ್ಶಗಳು
ಸಮಾಜದಲ್ಲಿ ನೆಲೆ ನಿಲ್ಲಲಿ ಎಂಬ ಆಶಯದೊಂದಿಗೆ ಈ ಅರ್ಚನೆ ನಡೆಯಲಿದೆ ಎಂದು ತಿಳಿಸಿದರು.

ಅಧ್ಯಕ್ಷ ರಘುಪತಿ ಉಪಾಧ್ಯ, ಕಾರ್ಯದರ್ಶಿ ರಾಜೇಶ್‌ ಭಟ್‌ ಪಣಿಯಾಡಿ, ಕೋಶಾಧಿಕಾರಿ ಕೃಷ್ಣಮೂರ್ತಿ ಆಚಾರ್ಯ, ಗೌರವಾಧ್ಯಕ್ಷ ಅರವಿಂದ ಆಚಾರ್ಯ, ಗೌರವ ಸಲಹೆಗಾರ ರಂಜನ್‌ ಕಲ್ಕೂರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next