ಉಡುಪಿ : ಹಾಡಹಗಲೇ ನಗರದ ಕೋರ್ಟ್ ಹಿಂಭಾಗದ ರಸ್ತೆಯ ನ್ಯಾಯವಾದಿ ವಾಣಿ ವಿ. ರಾವ್ ಅವರ ಮನೆಯಲ್ಲಿ ನಗ ನಗದು ಕಳ್ಳತನ ಮಾಡಿದ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ನೀಲನಗರ ನಿವಾಸಿ ಮುತ್ತಪ್ಪ ಬಸಪ್ಪ ಮಾವರಾಣಿ (27) ಎಂದು ಗುರುತಿಸಲಾಗಿದೆ. ಈತನನ್ನು ಬಾಗಲಕೋಟೆಯ ನೀಲನಗರದಲ್ಲಿ ಬಂಧಿಸಲಾಗಿದೆ.
ಈತ ಜು.19ರಂದು ನ್ಯಾಯವಾದಿಯ ಮನೆಗೆ ಒಳಪ್ರವೇಶಿಸಿ, ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿರಿಸಿದ್ದ ಚಿನ್ನಾಭರಣ, ನಗದು ಸಹಿತ ಒಟ್ಟು 25 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 10ಲ.ರೂ.ಮೌಲ್ಯದ ಚಿನ್ನಾಭರಣ ಮತ್ತು 38,500 ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ : ಗಾಲ್ವನ್ ವೀರರಿಗೆ ವಿಶೇಷ ಗೌರವ: ಲಡಾಖ್‌ನ ಪರ್ವತ ಪ್ರದೇಶಗಳಲ್ಲಿ ಬೈಕ್ ರ್‍ಯಾಲಿ
ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷುವರ್ಧನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಲಿಂಗಪ್ಪ, ಉಡುಪಿ ಡಿವೈಎಸ್‌ಪಿ ಸುಧಾಕರ ಸದಾನಂದ ನಾಯ್ಕ, ಅವರ ನಿರ್ದೇಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಂತೆ ಪಿ.ಎಸ್.ಐ.ಮಹೇಶ್ ಟಿ.ಎಂ., ಉಪನಿರೀಕ್ಷಕ ಪ್ರಸಾದ್ ಕುಮಾರ್ ಹಾಗೂ ಸಿಬಂದಿಗಳಾದ ಎ.ಎಸ್.ಐ. ಆರುಣ್ ಸತೀಶ್ ಬೆಳ್ಳೆ, ಎಚ್.ಸಿ. ಸತೀಶ್, ಮಲ್ಲಯ್ಯ, ಚೇತನ್, ಅನಂದ, ಕಾರ್ತಿಕ್, ಹೇಮಂತ್, ಶಿವಕುಮಾರ್ ಸಹಕರಿಸಿದ್ದಾರೆ.