Advertisement

ಉಡುಪಿ: ಏಳು ವರ್ಷ ಹಳೆಯ ಪೋಕ್ಸೋ ಪ್ರಕರಣದ ಆರೋಪಿ ಉತ್ತರಾಖಂಡದಲ್ಲಿ ಸೆರೆ

07:51 PM Jan 23, 2023 | Team Udayavani |

ಉಡುಪಿ: ಭಾರತ-ನೇಪಾಳ ಗಡಿಭಾಗದಲ್ಲಿ ಏಳು ವರ್ಷದ ಹಳೆಯ ಪೋಕ್ಸೋ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.
ನೇಪಾಳದ ಜಿತೇಂದ್ರ ಶಾರ್ಕಿ(26) ಬಂಧಿತ ಆರೋಪಿ.

Advertisement

ಈತ 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಸುಮಾರು 16 ಬಾರಿ ವಾರೆಂಟ್ ಹಾಗೂ 3 ಬಾರಿ ಅಟ್ಯಾಚ್ ಮೆಂಟ್ ವಾರೆಂಟ್ ಹೊರಡಿಸಲಾಗಿತ್ತು.

ಈತನ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ತಂಡದ ಸದಸ್ಯರಾದ ಉಡುಪಿ ಡಿವೈಎಸ್‌ಪಿ ದಿನಕರ ಕೆ.ಪಿ., ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ದೇವರಾಜ ಟಿ.ವಿ. ನಿರ್ದೇಶನದಂತೆ ಪಿಎಸ್‌ಐ ಅಬ್ದುಲ್ ಖಾದರ್, ಪಿಎಸ್‌ಐ ನಿಧಿ ಬಿ.ಎನ್., ಎಚ್‌ಸಿ ಥಾಮ್ಸನ್, ಸಿಬಂದಿ ದಿನೇಶ್ ಅವರ ಸಹಕಾರದೊಂದಿಗೆ ಸತತ ಒಂದು ವಾರಗಳ ಕಾಲ ಭಾರತ-ನೇಪಾಳ ಗಡಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಉತ್ತರಾಖಂಡ ರಾಜ್ಯದ ಬನ್ ಬಸಾ ಪೊಲೀಸ್ ಠಾಣೆಯ ವ್ಯಾಪ್ತಿಯ ಗಡಿಕೋಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: ವಿಜಯಪುರ: ಯುವತಿಯ ಅತ್ಯಾಚಾರ ಪ್ರಕರಣ… ಪೊಲೀಸರಿಂದ ಮೂವರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next