ಉಡುಪಿ: ವಿದ್ಯುತ್ ಬಿಲ್ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿದ ಘಟನೆ ನಡೆದಿದೆ.
ಉಡುಪಿಯ ಬಲಾಯಿಪಾದೆ ನಿವಾಸಿ ವಿಲ್ ಬೀರಿಯಸ್ ಎವಂಗ್ಲಿಸ್ಟ್ ಡಿ’ಸೋಜಾ ಅವರು ಉಡುಪಿ ಕೋರ್ಟ್ ರಸ್ತೆಯಲ್ಲಿನ ಕೆನರಾ ಬ್ಯಾಂಕ್‌ನಲ್ಲಿ ಎಸ್.ಬಿ. ಖಾತೆ ಹೊಂದಿದ್ದರು. ಸೆ.3ರಂದು ಅವರಿಗೆ ವಿದ್ಯುತ್ ಬಿಲ್ ಆನ್‌ಲೈನ್‌ನಲ್ಲಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಸಂದೇಶ ಬಂದಿದ್ದು, ಈ ಸಂದೇಶವನ್ನು ವಿದ್ಯುತ್ ಇಲಾಖೆಯ ಅಧಿಕಾರಿಗಳೇ ಕಳುಹಿಸಿರಬಹುದೆಂದು ತಿಳಿದ ಅವರು ಆ ಸಂಖ್ಯೆಗೆ ಕರೆ ಮಾಡಿದ್ದರು.
ಈ ವೇಳೆ ಮಾತನಾಡಿದ ವ್ಯಕ್ತಿ ತಾನು ವಿದ್ಯುತ್ ಇಲಾಖೆಯ ಅಧಿಕಾರಿ ಎಂದು ನಂಬಿಸಿ, ಇವರ ಬ್ಯಾಂಕ್ ಖಾತೆ, ಎ.ಟಿ.ಎಂ. ಕಾರ್ಡ್, ಸಿ.ವಿ.ವಿ. ವಿವರವನ್ನು ಪಡೆದಿದ್ದಾರೆ. ಅಲ್ಲದೇ ಇವರ ಮೊಬೈಲ್‌ಗೆ ಬಂದಿರುವ ಓಟಿಪಿಯನ್ನೂ ಪಡೆದು, ಅದೇ ದಿನ ಖಾತೆಯಿಂದ 30,999ರೂ. ಮತ್ತು 49,000 ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಸಾವು: ವೈದ್ಯರ ನಿರ್ಲಕ್ಷ್ಯ ದೂರು